ರವಿವಾರ ಜನಿಸಿದ ಗುಣ ಸ್ವಭಾವ ಹೀಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರವಿವಾರದಂದು ಜನಿಸಿದವರು ಸೂರ್ಯನ ರೀತಿಯಲ್ಲಿ ಪ್ರಭಾವ ಶಾಲಿ ಆಗಿ ಬೆಳಗುತ್ತಾರೆ ಸಾಮಾನ್ಯ ವಸ್ತುಗಳಿಂದ ಇವರ ಮನಸಿಗೆ ಸಮಾಧಾನ ಆಗದು ಎಲ್ಲರಂತೆ ಒಂದಾಗಿ ಇರಲು ಇಷ್ಟ ಪಡದ ಇವರು ಎಲ್ಲರನ್ನೂ ಮೀರಿ ಉನ್ನತ ಸ್ಥಾನಕ್ಕೆ ಬೆಳೆಯಲು ಬಯಸುತ್ತಾರೆ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಇವರು ಜೀವನದ ಎಲ್ಲಾ ತಿರುವುಗಳಲ್ಲಿ ಮುಂಚೂಣಿ ಯಲ್ಲಿ ಇರಲು ಬಯಸುತ್ತಾರೆ ದೈರ್ಯ ಶಾಲಿ ಸ್ವಕೇಂದ್ರಿತ ಹೆಮ್ಮೆಯ ವಿನಯವಂತ ಹಾಗೂ ಆತ್ಮ ವಿಶ್ವಾಸದಿಂದ ತುಂಬಿರುವ ಈ ರವಿವಾರ ಜನಿಸಿದ ವ್ಯಕ್ತಿಗಳು ಸಮಾಜದ ಬಹು ದೊಡ್ಡ ಆಸ್ತಿ.
ವಿಶ್ವದ ಬಹುತೇಕ ಸಂಪ್ರದಾಯಗಳಲ್ಲಿ ರವಿವಾರದ ಪ್ರಥಮ ದಿನ ಆಗಿ ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಜನತೆ ವಿಶ್ರಾಂತಿ ಪಡೆದು ದೇವರ ಧ್ಯಾನ ಮಾಡುತ್ತಾರೆ ಹಾಗೆಯೇ ಮುಂದಿನ ವಾರದ ಕೆಲಸಕ್ಕಾಗಿ ತಮ್ಮನ್ನು ತಾವು ಅಣಿ ಗೊಳಿಸುತ್ತಾರೆ. ಸೂರ್ಯ ದೇವ ರವಿವಾರದ ಅಧಿಪತಿ ದೇವ ಆಗಿರುವನು ಅಧಿ ದೇವ ಸೂರ್ಯನಿಂದ ನಿಯಂತ್ರಿಸಲ್ಪಡುವ ಇವರು ಯಾವಾಗಲೂ ಆಕರ್ಷಣೆಯ ಕೇಂದ್ರಬಿಂದು
ಆಗಿರಲು ಹಾಗೂ ಮನೆ ಮತ್ತು ಸಮಾಜವನ್ನು ಅಧೀನದಲ್ಲಿ ಇರಿಸಲು ಬಯಸುತ್ತಾರೆ ಸೂರ್ಯನ ಸುತ್ತ ಎಲ್ಲಾ ಗ್ರಹಗಳು ಸುತ್ತುವ ರೀತಿಯಲ್ಲಿ ಇವರ ಮಕ್ಕಳು ಆತ್ಮೀಯರು ಸಾಕು ಪ್ರಾಣಿ ಗಳಿಂದ ಇವರು ಸುತ್ತುವರೆಯುತ್ತಾರೆ. ಮೋಜಿನ ಹಾಗೂ ಮಹತ್ವಾಕಾಂಕ್ಷೆಯ ಜೀವನ ನಡೆಸಲು ಇವರು ಬಯಸುತ್ತಾರೆ ಆಗಾಗ ಪ್ರೀತಿಯ ಆಟ ಆಡುವುದು ಇವರ ಲಕ್ಷಣ ಆಗಿದೆ. ಕಾಣಲು ತುಂಬಾ ವಿಶ್ವಾಸ ಇರುವಂತೆ ಕಂಡರೂ ಸಮಸ್ಯೆಗಳು ಎದುರಾದಾಗ ಒಳಗಿನಿಂದಲೇ ಸಿಕ್ಕಾಪಟ್ಟೆ ಕುಸಿದು ಹೋಗುತ್ತಾರೆ ಯಾರು ಇವರಿಗೆ ಪ್ರಾಮುಖ್ಯತೆ ನೋಡುವರೋ ಅವರೊಂದಿಗೆ ಮಾತ್ರ ಇವರು ಗೆಳೆತನ ಮಾಡುವರು.
ಸಂಖ್ಯೆ ಒಂದು ಇವರ ಅದೃಷ್ಟದ ಸಂಖ್ಯೆ ಆಗಿದೆ ಇವರು ಪ್ರತಿ ನಿತ್ಯ ಬೆಳಗ್ಗೆ ಅಥವಾ ಕನಿಷ್ಟ ರವಿವಾರದಂದು ಸೂರ್ಯನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ರವಿವಾರ ಹುಟ್ಟಿದವರು ಎಲ್ಲಾ ಸಂಧರ್ಭದಲ್ಲಿ ಸ್ವತಂತ್ರ ಆಗಿ ಜೀವಿಸಲು ಇಷ್ಟ ಪಡುತ್ತಾರೆ ಆದರೆ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುವ ಇವರ ಗೆಳೆಯರ ಬಳಗ ಸೀಮಿತ ಆಗಿರುತ್ತದೆ. ಮೋಸ ಹೋಗುವ ಭಿತಿಯಾನ್ನು ಇವರು ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ
ಇದೇ ಕಾರಣದಿಂದ ಇವರಿಗೆ ಪ್ರೀತಿಯ ಸಂಗಾತಿ ದೊರಕುವುದು ಸಹಾ ಕಷ್ಟಕರ ಆಗುತ್ತದೆ. ಆದರೆ ಒಮ್ಮೆ ಪ್ರೀತಿಯಲ್ಲಿ ಬಿದ್ದ ಆನಂತರ ಸಂಗತಿಯನ್ನು ಗಾಢವಾಗಿ ಪ್ರೀತಿಸಲು ಪ್ರಾರಂಭ ಮಾಡುತ್ತಾರೆ ರವಿವಾರ ಜನಿಸಿದವರು ಸಾಮಾನ್ಯವಾಗಿ ಹಟಮಾರಿ ಹಾಗೂ ಮುಂಗೋಪಿ ಆಗಿರುತ್ತಾರೆ ಹಾಗಾಗಿ ಪ್ರೀತಿಯ ಪ್ರಣಯದಲ್ಲಿ ಆಗಾಗ ಜಗಳ ಮನಸ್ತಾಪ ಎದುರಿಸಬೇಕು.
ಸಂಗಾತಿಯ ಜೊತೆಗೆ ನೆಮ್ಮದಿಯಾಗಿ ಬಾಳಬೇಕು ಎಂದರೆ ಇವರು ಹೊಂದಾಣಿಕೆಯ ಮನೋಭಾವನೆಯನ್ನು ಬೆರೆಸಿ ಕೊಳ್ಳಬೇಕು ಹಾಗೂ ತಕ್ಷಣ ಭಾವನಾತ್ಮಕ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕು. ಈ ದಿನ ಹುಟ್ಟಿದವರು ತಮ್ಮ ವೃತ್ತಿ ಜೀವನದಲ್ಲಿ ಸಹಾ ಸ್ವಾತಂತ್ರ್ಯ ಬಯಸುವರು.