ಶನಿದೇವನಿಗೆ ಇಷ್ಟವಾದ ರಾಶಿಗಳಿವು!ಜೀವನದಲ್ಲಿ ಇವರ ಸಮನಾಗಿ ಯಾರು ಬರಲಾರರು!

0 204

ಶನಿ ಗ್ರಹ ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಮುಖ ಗ್ರಹವಾಗಿದೆ. ಶನಿ ಗ್ರಹ ಮಾನವ ಕ್ರಿಯೆಗಳ ತೀರ್ಪುಗಾರನಾಗಿ ಕಾರ್ಯನಿರ್ವಸುತ್ತದೆ. ಅದಕ್ಕೆ ಅನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಜನರು ಶನಿ ದೇವರಿಗೆ ಭಯಪಡುತ್ತಾರೆ.

ಹೆಚ್ಚಾಗಿ ಶನಿಗ್ರಹವನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಜನರು ಶನಿದೇವನ ಅಪಾಯಕಾರಿ ನೋಟವನ್ನು ಕಾಣಲು ಹೆದರುತ್ತಾರೆ. ಆದರೆ ಇದು ಸರಿಯಾದ ತಿಳುವಳಿಕೆ ಅಲ್ಲ. ಶನಿ ಗ್ರಹವು ಆಯಾ ರಾಶಿಗಳಲ್ಲಿ ಜನಿಸಿದ ಜನರ ಕ್ರಿಯೆಗಳ ಫಲಿತಾಂಶಗಳನ್ನು ಮಾತ್ರ ನೀಡುತ್ತಾನೆ. ಯಾರಾದರೂ ತಪ್ಪು ಮಾಡಿದರೆ ಅವರನ್ನು ಶಿಕ್ಷಿಸುವ ಕೆಲಸ ಮಾಡುತ್ತಾನೆ. ಜೊತೆಗೆ ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅಂಥವರು ಶನಿಯ ಆಶೀರ್ವಾದವನ್ನು ಪಡೆಯುತ್ತಾರೆ. ಹಾಗಾದರೆ ಶನಿಯ ಆಶೀರ್ವಾದ ಹೊಂದಿರುವ ರಾಶಿಗಳು ಯಾವವು? ಯಾವ ರಾಶಿಗಳು ಶನಿ ದೇವನಿಗೆ ಮೆಚ್ಚುಗೆಗೆ ಮಾತ್ರವಾಗಿವೆ ಎನ್ನುವುದನ್ನು ನೋಡೋಣ.

ಮಕರ ರಾಶಿ

ಶನಿಯು ಮಕರ ರಾಶಿಯ ಅಧಿಪತಿಯಾಗಿದೆ. ಆದ್ದರಿಂದ ಶನಿಯು ಹೆಚ್ಚು ಆಶೀರ್ವದಿಸಿದ ರಾಶಿಗಳಲ್ಲಿ ಮಕರ ರಾಶಿಯವರು ಮೊದಲಿಗರು. ಮಕರ ರಾಶಿಯ ಮೇಲೆ ಶನಿಯ ಆಶೀರ್ವಾದವಿರುತ್ತದೆ. ಅವನಿಂದ ಮಕರ ರಾಶಿವರ ಮೇಲೆ ಶನಿ ಕಡಿಮೆ ಕೆಟ್ಟ ಪರಿಣಾಮವನ್ನು ನೀರುತ್ತಾನೆ. ಮಕರ ರಾಶಿಯವರು ಬಲವಾದ ತಾರ್ಕಿಕ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಶನಿಯ ಕೃಪೆಯಿಂದ ಅವರ ಕಾರ್ಯಸ್ಥಳ, ವ್ಯಾಪಾರ ಅಥವಾ ರಾಜಕೀಯದಲ್ಲಿ ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾರೆ.

ವೃಷಭ ರಾಶಿ

ವೃಷಭ ರಾಶಿಯನ್ನು ಶುಕ್ರ ಗ್ರಹ ಆಳುತ್ತದೆ. ಶುಕ್ರ ಮತ್ತು ಶನಿ ಸ್ನೇಹಿ ಗ್ರಹಗಳು. ಶುಕ್ರ ಗ್ರಹ ಶನಿಯ ಪ್ರೀತಿಯ ಗ್ರಹವಾಗಿದೆ. ಪರಿಣಾಮವಾಗಿ ಶನಿಯು ಯಾವಾಗಲೂ ವೃಷಭ ರಾಶಿಯವರಿಗೆ ಒಲವು ತೋರುತ್ತಾನೆ ಮತ್ತು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ. ಶುಕ್ರ ಮತ್ತು ಶನಿಯ ಆಶೀರ್ವಾದದೊಂದಿಗೆ, ವೃಷಭ ರಾಶಿಯವರು ಶೀಘ್ರದಲ್ಲೇ ಜೀವನದಲ್ಲಿ ಉತ್ತುಂಗಕ್ಕೇರುತ್ತಾರೆ. ಜೊತೆಗೆ ಯಶಸ್ಸು, ಸಮೃದ್ಧಿ, ಖ್ಯಾತಿ ಮತ್ತು ಸಂತೋಷವನ್ನು ಪಡೆಯುತ್ತಾರೆ.

ತುಲಾ ರಾಶಿ

ತುಲಾ ರಾಶಿಯು ಶನಿಯ ನೆಚ್ಚಿನ ಚಿಹ್ನೆಗಳಲ್ಲಿ ಒಂದಾಗಿದೆ. ಶಿ ದೇವನು ಯಾವಾಗಲೂ ತುಲಾ ರಾಶಿಯವರನ್ನು ಯಾವಾಗಲು ಉತ್ತಮವಾಗಿಡಲು ಪ್ರಯತ್ನಿಸುತ್ತಾನೆ. ತುಲಾ ರಾಶಿಯವರು ಶನಿ ದೇವರ ವಿಶೇಷ ಅನುಗ್ರಹ ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ. ಪ್ರಾಣಿಗಳು ಮತ್ತು ಬಡವರ ಬಗ್ಗೆ ಸಹಾನುಭೂತಿಯೊಂದಿಗೆ, ಒಳ್ಳೆಯ ಕಾರ್ಯಗಳು ಮಾಡುವುದರಿಂದ ತುಲಾ ರಾಶಿಯವರಿಗೆ ಅಪಾರ ಯಶಸ್ಸು, ಹಣ, ಕೀರ್ತಿ ಮತ್ತು ಸಂತೋಷವನ್ನು ಶನಿ ನೀಡುತ್ತದೆ. ಶನಿದೇವನು ತುಲಾ ರಾಶಿಯವರನ್ನು ಎತ್ತರಕ್ಕೆ ತಲುಪಲು ಸಹಾಯ ಮಾಡುತ್ತಾನೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಶನಿಯ ಕೃಪೆಯನ್ನು ಪಡೆಯುತ್ತಾರೆ. ಆದ್ದರಿಂದ ಅವರು ತಮ್ಮ ಜೀವನದಲ್ಲಿ ಕಡಿಮೆ ತೊಂದರೆಗಳನ್ನು ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರು ಕಲೆ, ಬರವಣಿಗೆ, ಪತ್ರಿಕೋದ್ಯಮ ಮತ್ತು ಸರ್ಕಾರಿ ಉದ್ಯೋಗಗಳಂತಹ ಸೃಜನಶೀಲ ಕ್ಷೇತ್ರಗಳಲ್ಲಿ ಅಪಾರ ಯಶಸ್ಸು, ಗೌರವ ಮತ್ತು ಸಂಪತ್ತನ್ನು ಪಡೆಯುತ್ತಾರೆ. ಯಾವಾಗಲೂ ತಮ್ಮ ಕುಟುಂಬ ಮತ್ತು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಈ ಗುಣಲಕ್ಷಣಗಳು ಅವರಿಗೆ ಅಪಾರ ಯಶಸ್ಸು ಮತ್ತು ಸಂತೋಷವನ್ನು ತರುತ್ತವೆ.
ಕುಂಭ ರಾಶಿ

ಶಿನಿಯು ಕುಂಭ ರಾಶಿಯ ಅಧಿಪತಿಯಾಗಿದೆ. ಹೀಗಾಗಿ ಯಾವಾಗಲೂ ತನ್ನ ಆಶೀರ್ವಾದ ಮತ್ತು ಅನುಗ್ರಹವನ್ನು ಕುಂಭ ರಾಶಿ ಅವರ ಮೇಲೆ ಧಾರೆ ಎರೆಯುತ್ತಾನೆ. ಕುಂಭ ರಾಶಿಯವರು ಶನಿದೇವನ ಕೃಪೆಯಿಂದ ಹಣ ಮತ್ತು ಖ್ಯಾತಿಯ ಕೊರತೆಯು ಅಪರೂಪವಾಗಿರುತ್ತದೆ. ಕುಂಭ ರಾಶಿಯವರು ಪ್ರಾಮಾಣಿಕರು ಮತ್ತು ಆಕರ್ಷಕರು ಮತ್ತು ಅವರು ಸರಿಯಾದ ಮಾರ್ಗದಲ್ಲಿದ್ದರೆ, ಅವರು ಸಾಮಾನ್ಯ ಕೆಲಸದಲ್ಲಿಯೂ ಸಹ ಉತ್ತಮ ಯಶಸ್ಸು, ಖ್ಯಾತಿ, ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾರೆ. ಶನಿಯ ಕೃಪೆಯಿಂದಾಗಿ ಅವರು ಸುಲಭವಾಗಿ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಾರೆ.

Leave A Reply

Your email address will not be published.