ಗೌರಿ ಗಣೇಶನ ಮೂರ್ತಿ ಇಡದೇ ಹಬ್ಬವನ್ನು ಆಚರಿಸುವ ವಿಧಾನ /ಪದ್ಧತಿ ಇಲ್ಲದೆ ಇರುವವರು ಗಣೇಶನ ಕೂರಿಸಬಹುದೇ!

0 51

ಪದ್ಧತಿ ಇಲ್ಲದೆ ಇರುವವರು ಗೌರಿ ಗಣೇಶ ಹಬ್ಬವನ್ನು ಖಂಡಿತವಾಗಿ ಶುರು ಮಾಡಬಹುದು. ದೇವರಿಗೆ ಸಂಕಲ್ಪ ಮಾಡಿಕೊಂಡು ಈ ವರ್ಷದಿಂದ ಪ್ರತಿ ವರ್ಷವು ಕೂಡ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆಯನ್ನು ವ್ರತವನ್ನು ಮಾಡುತ್ತೀವಿ ಎಂದು ಕೇಳಿಕೊಂಡ ನಂತರ ಈ ವರ್ಷ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವ್ರತವನ್ನು ಆಚರಣೆ ಮಾಡಿದ ನಂತರ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು.
ಮನೆಯಲ್ಲಿ ಮೂರ್ತಿ ಇಟ್ಟು ಆಚರಣೆ ಮಾಡುತ್ತೀರಾ ಎಂದರೆ ಕಟ್ಟು ನಿಟ್ಟಾಗಿ ಆಚರಣೆ ಮಾಡಬೇಕಾಗುತ್ತದೆ.

ಇನ್ನು ಮೂರ್ತಿ ತರದೇ ಇರುವವರು ಗಣೇಶ ವಿಗ್ರಹ ಅಥವಾ ಫೋಟೋ ಇದ್ದರೆ ಅದಕ್ಕೆ ನೀವು ಪೂಜೆ ಮಾಡಬಹುದು. ವಿಗ್ರಹ ಇದ್ದರೆ ಅದಕ್ಕೆ ಪಂಚಾಮೃತದಿಂದ ಅಭಿಷೇಕ ಮಾಡಿ ಗರಿಕೆ ಎಕ್ಕದ ಹೂವು ಕಣಗಲೇ ಹೂವು ತುಂಬೆ ಹೂವು ಕೆಂಪು ದಾಸವಾಳದ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡಬಹುದು. ಜೊತೆಗೆ 21 ತರಹದ ಪತ್ರೆಗಳನ್ನು ಅರ್ಪಿಸಿ ಪೂಜೆಯನ್ನು ಮಾಡಿದರು ಸಹ ಸಾಕಾಗುತ್ತದೆ. ಜೊತೆಗೆ ನೈವೇದ್ಯಕ್ಕೆ ಕಡುಬು ಮೋದಕ, ಕರ್ಜಿಕಾಯಿ ಲಾಡು ಮೊಸರನ್ನ ಕಡಲೆಕಾಳು. ಇವುಗಳನ್ನು ನೈವೇದ್ಯ ಕ್ಕೆ ಇಟ್ಟು ಪೂಜೆಯನ್ನು ಮಾಡಿದರು ಸಾಕಾಗುತ್ತದೆ.

ಇನ್ನು ವಿಗ್ರಹ ಇಲ್ಲದೆ ಇರುವವರು ಅರಿಶಿನದಿಂದ ಗಣಪತಿ ಮಾಡಿ ಅಥವ ಸಗಣಿಯಿಂದ ವಿಗ್ರಹ ಮಾಡಿ ದೂಪ ದೀಪ ನೈವೈದ್ಯಗಳನ್ನು ಮಾಡಬಹುದು. ಇನ್ನು ಗೌರಿ ತರದೇ ಇರುವವರು ಕಳಸ ಇಟ್ಟು ಸೀರೆ ಬ್ಲೌಸ್ ಪೀಸ್ ಹಾಕಿ ವೀಳ್ಯದೆಲೆ ತೆಂಗಿನಕಾಯಿ ಇಟ್ಟು ಅದನ್ನೇ ಗೌರಿ ಎಂದು ಭಾವಿಸಿ. ಅದಕ್ಕೆ ನೀವು ಪೂಜೆಯನ್ನು ಮಾಡಬಹುದು. ಗೌರಿ ಗೆ ಬೆಲ್ಲದಿಂದ ಮಾಡಿದ ನೈವೇದ್ಯ ಇಟ್ಟು ಹೂವುಗಳನ್ನು ಇಟ್ಟು ದೀಪ ದೂಪ ಮಾಡಿ ಕುಂಕುಮ ಅರ್ಚನೇಯನ್ನು ಮಾಡಬೇಕಾಗುತ್ತದೆ. ಜೊತೆಗೆ ಮುತೈದೆಯರಿಗೆ ತಾಂಬೂಲ ಅರಿಶಿಣ ಕುಂಕುಮ ಕೊಟ್ಟು ಬಾಗಿನವನ್ನು ಸಹ ಕೊಡಬಹುದು.ಹೇಗೆ ಮಾಡಿದರು ಭಕ್ತಿ ತುಂಬಾ ಮುಖ್ಯವಾಗುತ್ತದೆ. ಆಡಂಬರ ಅಲಂಕಾರ ಭಕ್ತಿಯ ಮುಂದೆ ಲೆಕ್ಕಕ್ಕೆ ಬರುವುದಿಲ್ಲ.

Leave A Reply

Your email address will not be published.