ಹೀಗೆ ಮಾಡಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಿಕೊಳ್ಳಿ

0 282

ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ಸ್ನಾಯು ಸೆಳೆತ ಕಾಣಿಸುತ್ತದೆ ಕಾಲಿನ ಮಿನಗಂಡ ಮತ್ತು ತೋಡೆಯಲ್ಲಿಯೂ ಸಹ ಸ್ನಾಯುಸೆಳೆತ ಕಾಣಿಸುತ್ತದೆ ಇದರಿಂದ ರಾತ್ರಿ ಎಚ್ಚರವಾಗುತ್ತದೆ ಮತ್ತು ವಿಪರೀತ ನೋವು ಕೊಡುತ್ತದೆ ಈ ಸ್ನಾಯು ಸೆಳೆತ ನರಗಳಿಗೆ ಸಂಬಂಧಿಸಿದ ನೋವಾಗಿದೆ ಬೇಸಿಗೆಯಲ್ಲಿ ದೇಹಕ್ಕೆ ಬೇಕಾದ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತದೆ ಆಗ ನರಗಳ ಬೆಳವಣಿಗೆ ಹೆಚ್ಚಾಗಿರುವುದರಿಂದ ಇಂತಹ ನೋವುಗಳು ಕಾಣಿಸುತ್ತವೆ ನಿರ್ಜಲೀಕರಣ ಕೂಡ ಇದಕ್ಕೆ ಕಾರಣವಾಗುತ್ತದೆ.

ಇದರಿಂದ ಎಲೆಕ್ಟ್ರೋ ಲೈಟ್ ಗಳ ಸಮತೋಲನದಲ್ಲಿ ಏರುಪೇರು ಉಂಟಾಗುತ್ತದೆ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು ಆದ್ದರಿಂದ ರಾತ್ರಿ ವೇಳೆ ಸ್ನಾಯು ಸೆಳೆತ ಉಂಟಾದರೆ ತಕ್ಷಣ ಸ್ವಲ್ಪ ನೀರನ್ನು ಕುಡಿಯಬೇಕು ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ ಸ್ನಾಯು ಸೆಳೆತ ಉಂಟಾಗಬಹುದು ಹಾಗಾಗಿ ದೇಹದಲ್ಲಿ ಕ್ಯಾಲ್ಸಿಯಂ ಮೆಗ್ನಿಶಿಯಮ್ ಪೊಟ್ಯಾಷಿಯಂ ಅಗತ್ಯ ಪ್ರಮಾಣದಲ್ಲಿ ಇದೆಯಾ ಎಂದು ತಿಳಿಯುವುದು ಒಳ್ಳೆಯದು.

ಕೆಲವೊಮ್ಮೆ ಅತಿಯಾದ ವ್ಯಾಯಾಮ ಮಾಡಿದರು ಇಂತಹ ನೋವಿಗೆ ಕಾರಣವಾಗಬಹುದು ಹಾಗೇನೇ ಕೆಲವೊಬ್ಬರು ಬಹಳ ಹೊತ್ತು ನಿಂತೆ ಕೆಲಸ ಮಾಡುತ್ತಾರೆ ಇವರಲ್ಲಿ ದೇಹದಲ್ಲಿ ಇರುವ ರಕ್ತ ನೀರು ದೇಹದ ಕೆಳ ಭಾಗದಲ್ಲಿ ಸಂಗ್ರಹವಾಗಿ ದೇಹದ ದ್ರವಗಳಲ್ಲಿ ಅಸಮತೋಲನ ಆಗುತ್ತದೆ ಹೀಗಾಗಿ ಸ್ನಾಯು ಸೆಳೆತ ಉಂಟಾಗಬಹುದು 50 ವರ್ಷಗಳ ನಂತರ ನಮ್ಮ ನರಗಳ ಮೋಟಾರ್ ನ್ಯೂರಾನ್ ಎಂಬ ಕಣಗಳು ಶಾಶ್ವತವಾಗಿ ನಷ್ಟಗೊಳ್ಳುತ್ತವೆ ಇದರಿಂದ ಸ್ನಾಯುಸೆಳೆತ ಉಂಟಾಗುತ್ತದೆ.

ಇಂತಹ ಅನಾರೋಗ್ಯ ನರಗಳನ್ನು ದುರ್ಬಲ ಗೊಳಿಸುವುದರಿಂದ ಸ್ನಾಯು ಸೆಳೆತ ಉಂಟಾಗುತ್ತದೆ. ಗರ್ಭಿಣಿಯರಲ್ಲೂ ಸಹ ಕಾಲುಗಳಿಗೆ ಅಗತ್ಯವಿರುವ ರಕ್ತ ಸಂಚಾರ ಆಗದೆ ಸ್ನಾಯು ಸೆಳೆತ ಉಂಟಾಗುವ ಸಾಧ್ಯತೆ ಇದೆ ಇದಕ್ಕೆ ಪರಿಹಾರ ನೋಡೋದಾದ್ರೆ ಮಲಗುವಾಗ ಬೆನ್ನ ಮೇಲೆ ಮಲಗಬೇಕು ಕಾಲುಗಳಿಗೆ ದಿಂಬುಗಳ ಸಹಾಯ ಪಡೆಯಿರಿ ಈ ರೀತಿ ಮಾಡುವುದರಿಂದ ಸ್ನಾಯು ಸೆಳೆತ ಕಡಿಮೆ ಆಗುತ್ತದೆ ಹಾಗೇನೇ ಸ್ನಾಯು ಸೆಳೆತ ಕಡಿಮೆ ಆಗುವ ಚಪ್ಪಲಿಗಳು ಸಹ ಸಿಗುತ್ತವೆ

ಹಾಗೇನೇ ನಿಮ್ಮ ತೂಕ ವಯಸ್ಸಿಗೆ ಅನುಗುಣವಾಗಿ ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಕೂಡ ಸ್ನಾಯು ಸೆಳೆತ ಕಡಿಮೆ ಆಗುತ್ತದೆ ಕಾಲುಗಳಿಗೆ ವಿಶ್ರಾಂತಿ ನೀಡಿ ಕಾಲುಗಳಿಗೆ ಒತ್ತಡ ಬೀಳುವ ಯಾವ ಚಟುವಟಿಕೆಗಳನ್ನು ಮಾಡಬೇಡಿ ಮಂಡಿ ಕೆಳಗೆ ಸೆಳೆತ ಉಂಟಾದಾಗ ಮೆಲ್ಲನೆ ಕಾಲುಗಳನ್ನು ಉದ್ದ ಮಾಡಿ ಸಾಧ್ಯವಾದಷ್ಟು ಒತ್ತಿ ಹಿಮ್ಮಡಿಯಲ್ಲಿ ನಡೆಯಿರಿ ಸ್ನಾಯು ಸೆಳೆತಕ್ಕೆ ವಿರುದ್ಧವಾಗಿ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ನೋವು ಕಡಿಮೆ ಆಗುತ್ತದೆ ಒಂದು ಬಕೆಟ್ ಬಿಸಿ ನೀರಲ್ಲಿ ಉಪ್ಪು ಹಾಕಿ ಅದರಲ್ಲಿ ಬಟ್ಟೆ ಎದ್ದಿ ಹಿಂಡಿ ನೋವಿರುವ ಕಡೆ ಇಡುತ್ತಿದ್ದರೆ ನೋವು ಕಡಿಮೆ ಆಗುತ್ತದೆ ಒಂದು ಬಕೆಟ್ ಬಿಸಿ ನೀರಿನಲ್ಲಿ ಕಾಲುಗಳನ್ನು ಮುಳುಗಿಸಿ ಇಡುವುದು ಇದರಿಂದಲೂ ಕೂಡ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಈ ನೀರಿಗೆ ಬೇಕಿದ್ದರೆ ಉಪ್ಪನ್ನು ಹಾಕಿ ಸ್ವಲ್ಪ ಪ್ರಮಾಣದಲ್ಲಿ ಉಪ್ಪಿನ ಕಾಯಿ ನೀರನ್ನು ಕುಡಿಯುವುದರಿಂದ ಸ್ನಾಯು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

Leave A Reply

Your email address will not be published.