ಫ್ರಿಡ್ಜ್ ಎಲ್ಲಾರ ಮನೆಯಲ್ಲೂ ಇದೆ ಆದ್ರೆ ಈ ಟಿಪ್ಸ್ ನಿಮಗೆ ಗೊತ್ತಾ..!ಬರೀ 1 ಹನಿ ಎಣ್ಣೆ ಇದ್ದರೆ ಸಾಕು….

0 22,473

ಎಲ್ಲಾರ ಮನೆಯಲ್ಲೂ ಫ್ರಿಡ್ಜ್ ಅಂತು ಇದೆ. ಫ್ರಿಡ್ಜ್ ನ ಬಳಸುತ್ತಾ ಬಳಸುತ್ತಾ ಕೂಲಿಂಗ್ ಕಡಿಮೆ ಆಗುತ್ತ ಬರುತ್ತದೆ. ಹಾಗು ಫ್ರಿಜ್ ಒಳಗೆ ಏನೇ ಇಟ್ಟರು ಸಹ ಬೇಗನೆ ಹಾಳಾಗುತ್ತದೆ. ಫ್ರಿಡ್ಜ್ ಒಳಗೆ ಐಸ್ ಕಟ್ಟಿದ್ದರೆ ಅದನ್ನು ತೆಗೆಯುವುದಕ್ಕೆ ತುಂಬಾ ಕಷ್ಟ ಪಡುತ್ತೇವೆ. ಅದರೆ ಈ ರೀತಿ ಮಾಡಿದರೆ ಪ್ರತಿಯೊಬ್ಬರ ಮನೆಯಲ್ಲಿ ಐಸ್ ಕಟ್ಟುವುದಿಲ್ಲ.

ನಿಮ್ಮ ಮನೆಯಲ್ಲಿ ಆಟೋಮ್ಯಾಟಿಕ್ ಫ್ರಿಡ್ಜ್ ಇದ್ದರೆ ಟೆಂಪ್ರಚರ್ ಸೆಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಅದರೆ ನಾರ್ಮಲ್ ಫ್ರಿಡ್ಜ್ ಇದ್ದರೆ ನೀವೇ ಸೀಸನ್ ಅನುಗುಣವಾಗಿ ಟೆಂಪೆರೇಚರ್ ಸೆಟ್ ಮಾಡಬೇಕು. ಈ ರೀತಿ ಮಾಡುವುದರಿಂದ ಫ್ರಿಡ್ಜ್ ನ ಕೂಲಿಂಗ್ ಮೇಂಟೈನ್ ಆಗುತ್ತದೆ ಹಾಗು ಪದೇ ಪದೇ ಐಸ್ ಕಟ್ಟೋದು ಸಹ ತಡೆಯಬಹುದು.

ಇನ್ನು ಒಂದು ಬೌಲ್ ತೆಗೆದುಕೊಳ್ಳಿ 1-2 ಚಮಚ ಉಪ್ಪನ್ನು ಹಾಕಿಕೊಳ್ಳಿ. ಫ್ರಿಡ್ಜ್ ಸಣ್ಣ ಇದ್ದರೆ ಒಂದು ಚಮಚ ಉಪ್ಪನ್ನು ಹಾಕಿಕೊಳ್ಳಿ. ದೊಡ್ಡ ಫ್ರಿಡ್ಜ್ ಇದ್ದರೆ ಎರಡು ಚಮಚ ಉಪ್ಪನ್ನು ತೆಗೆದುಕೊಳ್ಳಿ. ನಂತರ ಒಂದು ಬಟ್ಟೆ ತೆಗೆದುಕೊಂಡು ಆ ನೀರಿನಲ್ಲಿ ಅದ್ದಿ ಪೂರ್ತಿಯಾಗಿ ಫ್ರಿಡ್ಜ್ ಅನ್ನು ವರೆಸಬೇಕು. ವದ್ದೆ ಬಟ್ಟೆಯಲ್ಲೇ ವರೆಸಬೇಕು ಹಾಗು ಬೇರೆ ಬಟ್ಟೆಯಲ್ಲಿ ವರೆಸಬಾರದು. ಈ ರೀತಿ ಮಾಡುವುದರಿಂದ ಫ್ರಿಡ್ಜ್ ನಲ್ಲಿ ಪದೇ ಪದೇ ಐಸ್ ಕಟ್ಟುವುದಿಲ್ಲ.

ಇನ್ನು ಫ್ರಿಡ್ಜ್ ನ ಗ್ಯಾಸ್ ಕೇಟ್ ಅನ್ನು ಪ್ರತಿ ಸರಿ ಚೆಕ್ ಮಾಡಬೇಕು. ಒಂದು ವೇಳೆ ಲೂಸ್ ಆಗಿದ್ದರ್ ತಕ್ಷಣವೇ ಚೇಂಜ್ ಮಾಡಬೇಕು. ಇಲ್ಲವಾದರೆ ಕೂಲಿಂಗ್ ಕಡಿಮೆ ಆಗುತ್ತದೆ ಮತ್ತು ಫ್ರಿಡ್ಜ್ ನಲ್ಲಿ ಏನೇ ಇಟ್ಟರು ಸಹ ಬೇಗನೆ ಕೆಡುತ್ತದೆ. ಇನ್ನು ಗ್ಯಾಸ್ ಕೇಟ್ ಅನ್ನು 15 ದಿನಗಳಿಗೊಮ್ಮೆ ಕ್ಲೀನ್ ಮಾಡಿ. ಇದರಲ್ಲಿ ಕೊಳೆ ಇದ್ದರು ಸಹ ಗ್ಯಾಸ್ ಕೇಟ್ ಬೇಗನೆ ಹಾಳಾಗುತ್ತದೆ.

ಇನ್ನು ಗ್ಯಾಸ್ ಕೇಟ್ ಲೂಸ್ ಆಗಿದ್ದರೆ ಕೊಬ್ಬರಿ ಎಣ್ಣೆ ತೆಗೆದುಕೊಂಡು ಈ ರೀತಿ ಮಾಡಿದರೆ ಗ್ಯಾಸ್ ಕೇಟ್ ಟೈಟ್ ಆಗುತ್ತದೆ. ಏನಾದರೂ ಕ್ರ್ಯಾಕ್ ಆಗಿದ್ದರೆ ಗ್ಯಾಸ್ ಕೇಟ್ ಅನ್ನು ಚೇಂಜ್ ಮಾಡಬೇಕು. ಅವಾಗ್ ಅವಾಗ್ ಎಣ್ಣೆ ಹಚ್ಚುತ ಬಂದರೆ ಗ್ಯಾಸ್ ಕೇಟ್ ತುಂಬಾ ದಿನ ಬಳಕೆ ಬರುತ್ತದೆ. ಈ ಟಿಪ್ಸ್ ಅನ್ನು ಫಾಲೋ ಮಾಡಿ ನೋಡಿ ತುಂಬಾ ಹೆಲ್ಪ್ ಆಗುತ್ತದೆ.

Leave A Reply

Your email address will not be published.