ಹೈ ಬಿಪಿ ಗೆ ಪವರ್ ಫುಲ್ ಮನೆಮದ್ದುಗಳು !

0 8

ನಿತ್ಯ ಮನೆಯಲ್ಲಿ ಬಳಸುವ ಮಸಾಲೆಯ ಪದಾರ್ಥಗಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ಸಮ ಪ್ರಮಾಣದಲ್ಲಿ ಪಾಕವಿಧಾನಗಳಲ್ಲಿ ಬಳಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಅಂತಹ ಮಸಾಲ ಪದಾರ್ಥಗಳಲ್ಲಿ ಕೆಲವು ಮಸಾಲ ಪದಾರ್ಥಗಳು ಯಾವುದೇ ಮಿಶ್ರಣ ಇಲ್ಲದೆಯೇ ವಿಶೇಷ ಪೋಷಣೆಯನ್ನು ನೀಡುತ್ತವೆ. ಆ ಬಗೆಯ ಮಸಾಲ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜವೂ ಒಂದು. ಇದನ್ನು ಧನಿಯಾ ಎಂದು ಸಹ ಕರೆಯುತ್ತಾರೆ.

ಸಾಮಾನ್ಯವಾಗಿ ಎಲ್ಲಾ ರೆಸಿಪಿಯಲ್ಲೂ ಕೊತ್ತಂಬರಿ ಬೀಜವನ್ನು ಕಡ್ಡಾಯವಾಗಿ ಬಳಸುತ್ತಾರೆ. ಉತ್ತಮ ಪರಿಮಳ ಹಾಗೂ ರುಚಿಯನ್ನು ನೀಡುವ ಮಸಾಲ ಪದಾರ್ಥ ಕೊತ್ತಂಬರಿ. ಇದು ದಕ್ಷಿಣ ಯುರೋಪ್ ಮತ್ತು ಕ್ಯಾಪ್ಸಿಯನ್ ಸಮುದ್ರ ತೀರದ ಲ್ಯಾಟಿನ್ ಭಾಷೆಯಿಂದ ಕೊರಿಯಾಂಡ್ರಮ್ ಸ್ಯಾಟಿವಮ್ ಎನ್ನುವ ಹೆಸರು ಬಂದಿದೆ. ವಿಶ್ವದಾದ್ಯಂತ ಅಡುಗೆಯಲ್ಲಿ ಬಳಸುವ ಪ್ರದಾನ ಮಸಾಲ ಉತ್ಪನ್ನ ಎಂದು ಹೇಳಬಹುದು. ಇದನ್ನು ಆಹಾರ ಉತ್ಪನ್ನಗಳಲ್ಲಿ ಹಾಗೂ ಆಯುರ್ವೇದ ಔಷಧಗಳಲ್ಲೂ ಬಳಸಲಾಗುವುದು.

ಆಂಟಿಡೈಯಾಬೆಟಿಕ್ ಸಮಸ್ಯೆ ನಿವಾರಣೆಗೆ:_-ಕೊತ್ತಂಬರಿ ಬೀಜವನ್ನು ಆಂಟಿ ಡೈಯಾಬಿಟಿಕ್ ರೂಪದಲ್ಲಿ ಬಳಸಬಹುದು ಎಂದು ಅನೇಕ ವೈದ್ಯರು ಸೂಚಿಸುತ್ತಾರೆ. ಕೊತ್ತಂಬರಿ ಬೀಜವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ. ಅಲ್ಲದೆ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುವುದು. ಕೊತ್ತಂಬರಿ ಬೀಸಜದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (ಎಲ್‍ಡಿಎಲ್) ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಉತ್ತಮ ಕೊಲೆಸ್ಟ್ರಾಲ್(ಎಚ್‍ಡಿಎಲ್)ಅನ್ನು ಪ್ರೇರೇಪಿಸುತ್ತದೆ ಎಂದು ಹೇಳಲಾಗುವುದು. ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರು ಪ್ರತಿದಿನ ಕೊತ್ತಂಬರಿ ಬೀಜ ನೆನೆಸಿದ ನೀರನ್ನು ಕುಡಿಯಬೇಕು. ಅದರಿಂದ ಸಮಸ್ಯೆಯು ಅದ್ಭುತ ರೀತಿಯಲ್ಲಿ ನಿಯಂತ್ರಣಕ್ಕೆ ಬರುತ್ತವೆ.

ವಿಧಾನ:*ಒಂದು ಪಾತ್ರೆಯಲ್ಲಿ ಒಂದು ಟೇಬಲ್ ಚಮಚ ಕೊತ್ತಂಬರಿ ಬೀಜವನ್ನು ಹಾಕಿ.
*ಅದಕ್ಕೆ ಒಂದು ಗ್ಲಾಸ್ ನೀರನ್ನು ಸೇರಿಸಿ, ರಾತ್ರಿ ಪೂರ್ತಿ ನೆನೆಯಲು ಬಿಡಿ.
*ಮರುದಿನ ಬೆಳಿಗ್ಗೆ ಆ ನೀರನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
*ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಬಹುದು. ಇದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ.

ಬಿಳಿ ಹೋಗುವುದನ್ನು ನಿಯಂತ್ರಿಸಲು

  • ಅಜೀರ್ಣ ಸಮಸ್ಯೆ
  • ಮುಟ್ಟಿನ ಸಮಸ್ಯೆ ಇದ್ದರೆ
  • ಆಕಸ್ಮಾತ್ ಆಗಿ ಕಣ್ಣು ಕೆಂಪಾಗಿದ್ದರೆ
  • ಸಂಧಿವಾತ ನಿವಾರಣೆಗೆ
  • ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುವುದು
  • ರಕ್ತಹೀನತೆ ನಿವಾರಿಸಲು
  • ಮುಟ್ಟಿನ ಸಮಯದಲ್ಲಿ ಕಾಣುವ ಹೊಟ್ಟೆ ನೋವು ನಿವಾರಣೆಗೆ

https://www.youtube.com/watch?v=I5K_RZaIc5c&pp=wgIGCgQQAhgB

Leave A Reply

Your email address will not be published.