ಅಧಿಕ ಮಾಸ +ಹುಣ್ಣಿಮೆ+ಶ್ರಾವಣ ನಕ್ಷತ್ರ+33 ದೀಪರಾಧನೆ ಜೀವನದಲ್ಲಿ ಸುಖ/ಸಂಪತ್ತು/ಸಮೃದ್ಧಿ ಆಗಮನ!
ಈ ಒಂದು ವಿಶೇಷವಾದ ದೀಪರಾಧನೆಗೆ 33 ದೀಪಗಳು ಬೇಕಾಗುತ್ತದೆ. ಈ ದೀಪರಾಧನೆಯನ್ನು ನಾವು ಶ್ರಾವಣ ನಕ್ಷತ್ರದಲ್ಲಿ ಮಾಡಬೇಕಾಗುತ್ತದೆ. ಮೊದಲು ಒಂದು ದೊಡ್ಡ ಪ್ಲೇಟ್ ತೆಗೆದುಕೊಂಡು ಅರಿಶಿನ ಕುಂಕುಮ ಶ್ರೀಗಂಧ ಹಚ್ಚಬೇಕು ಮತ್ತು ಮಧ್ಯದಲ್ಲಿ ಅರಿಶಿನದಿಂದ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಬೇಕು. ಇಲ್ಲವಾದರೆ ಕುಬೇರ ರಂಗೋಲಿ ಹಾಕಿದರೂ ಸಹ ನಡೆಯುತ್ತದೆ. ನಂತರ 33 ಮಣ್ಣಿನ ದೀಪವನ್ನು ಇಡಬೇಕು.ಇದಕ್ಕೆ ಅರಿಶಿನ ಕುಂಕುಮ ಹಚ್ಚಿ ಎಳ್ಳು ಎಣ್ಣೆಯನ್ನು ಮತ್ತು ಬತ್ತಿಯನ್ನು ಹಾಕಬೇಕು. ಇದನ್ನು ಶ್ರಾವಣ ನಕ್ಷತ್ರದಲ್ಲಿ ಹಚ್ಚಬೇಕಾಗುತ್ತದೆ.ಏಕೆಂದರೆ ಶ್ರಾವಣ ನಕ್ಷತ್ರವು ವೈದ್ಯಕೀಯ ಖಗೋಳ ಶಾಸ್ತ್ರದಲ್ಲಿ ಒಂದು ಅವಿಭಜ್ಯವಾದ ನಕ್ಷತ್ರವಾಗಿದೆ.
ಮಂಗಳವಾರ 1ನೇ ತಾರೀಕು ಬೆಳಗ್ಗೆ 3:52 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತದೆ ಮತ್ತು 2ನೇ ತಾರೀಕು ಮಧ್ಯಾಹ್ನ 12:00 ಗಂಟೆಗೆ. ಶ್ರಾವಣ ನಕ್ಷತ್ರದ ಸಮಯ ಯಾವಾಗ ಎಂದರೆ 1ನೇ ತಾರೀಕು ಆಗಸ್ಟ್ ಮಂಗಳವಾರ ಮಧ್ಯಾಹ್ನ 4:03 ನಿಮಿಷಕ್ಕೆ ಶ್ರಾವಣ ನಕ್ಷತ್ರವು ಪ್ರಾರಂಭವಾಗುತ್ತದೆ ಮತ್ತು ಬುಧವಾರ ಮಧ್ಯಾಹ್ನ 12:58 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಹಾಗಾಗಿ ಸಂಜೆ ಸಮಯದಲ್ಲಿ ವಿಷ್ಣು ಲಕ್ಷ್ಮಿ ಹಾಡನ್ನು ಹಾಕಿ ದೀಪರಾಧನೇ ಮಾಡಬೇಕು. ದೀಪರಾಧನೇ ಮಾಡುವ ಮೊದಲು ಗಣೇಶ ಮತ್ತು ಕುಲದೇವರಿಗೆ ನಮಸ್ಕಾರ ಮಾಡಿಕೊಂಡು ದೀಪರಾಧನೆ ಮಾಡಬೇಕು.
ಇನ್ನು ಪ್ರಸಾದಕೆ ಸಿಹಿ ಸಜ್ಜಿಗೆ ಮಾಡಿ. ನಂತರ ದೇವರ ಮುಂದೆ ಇಟ್ಟು ಈ ಒಂದು ದೀಪರಾಧನೆ ಮಾಡಬೇಕಾಗುತ್ತದೆ.ಶ್ರಾವಣ ನಕ್ಷತ್ರದಲ್ಲಿ ದೀಪರಾಧನೇ ಮಾಡುವುದರಿಂದ ನಿಮ್ಮ ಜೀವನದಲ್ಲಿ ಆಗಿರುವ ಏನೇ ಒಂದು ಕಷ್ಟ ಇದ್ದರು ಸಹ ನಿವಾರಣೆ ಆಗಿ ಸಾಕರತ್ಮಕತೆ ಹೆಚ್ಚಾಗುತ್ತದೆ. ಇನ್ನು ಬುಧವಾರ ಮಾಡುವವರೂ ಆದಷ್ಟು ಬೆಳಗ್ಗೆನೇ ಮಾಡಿದರೆ ತುಂಬಾ ಒಳ್ಳೆಯದು. ಈ ದೀಪಗಳನ್ನು ಮನೆಯಲ್ಲಿ ಕೂಡ ಇಡಬಹುದು ಅಥವಾ ದೇವಸ್ಥಾನಕ್ಕೆ ಹೊಗಿ ದಾನವನ್ನು ಕೂಡ ಮಾಡಬಹುದು.