ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ನೋಡಿ!

0 135

ನಾವು ಯಾವುದೇ ಕಾರಣಕ್ಕೂ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಬಿಡಬಾರದು. ಏಕೆಂದರೆ ಇದರಿಂದ ಹಲವು ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಮಧುಮೇಹ ಹೆಚ್ಚಾಗಿರುವ ವ್ಯಕ್ತಿಗಳಿಗೆ ಹೃದಯದ ತೊಂದರೆ ಕೂಡ ಕಾಡುವ ಸಾಧ್ಯತೆ ಇರುತ್ತದೆ.

ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳುವುದರ ಜೊತೆಗೆ ಆಗಾಗ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ.

​ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ:–ಬೆಳಗಿನ ಸಮಯದಲ್ಲಿ ಉಪಹಾರದ ರೂಪದಲ್ಲಿ ನೀವು ಸೇವನೆ ಮಾಡುವ ಆಹಾರ ಪದಾರ್ಥ ಸದಾ ಆರೋಗ್ಯದಿಂದ ಕೂಡಿರಬೇಕು. ಇದು ನಿಮ್ಮ ಇಡೀ ದಿನದ ಕಾರ್ಯಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ.ಇದರಿಂದ ನಿಮ್ಮ ದೇಹಕ್ಕೆ ಉತ್ತಮವಾದ ಫಲಿತಾಂಶಗಳು ಸಿಕ್ಕಿದಂತಾಗಿ, ಆರೋಗ್ಯಕರವಾದ ದೇಹ ನಿಮ್ಮದಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

​ನಿಮ್ಮ ದೇಹಕ್ಕೆ ನೀರಿನ ಅಂಶ ಸೇರಿಸಿ:ಸಾಧ್ಯವಾದಷ್ಟು ನೀವು ಇಡೀ ದಿನದಲ್ಲಿ ಹೆಚ್ಚು ನೀರು ಕುಡಿಯಲು ಪ್ರಯತ್ನಿಸಿ. ಇದರಿಂದ ನಿಮಗೆ ಹಲವಾರು ಆರೋಗ್ಯದ ಅನುಕೂಲತೆಗಳು ಇರುತ್ತವೆ.ನಿಮ್ಮ ದೇಹದ ಒಳಭಾಗದ ಅಂಗಾಂಗಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಪೂರೈಕೆ ಆಗಿ ಅವುಗಳ ಕಾರ್ಯನಿರ್ವಹಣೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

ನಿಮ್ಮ ಕರುಳಿನ ಭಾಗದ ಸ್ವಚ್ಛತೆಯಲ್ಲಿ ಕೂಡ ಇವುಗಳು ಅನುಕೂಲಕರವಾಗಿ ಕೆಲಸ ಮಾಡಿ ಆರೋಗ್ಯಕರವಾದ ಜೀರ್ಣಶಕ್ತಿ ಹಾಗೂ ಮೆಟಬಾಲಿಸಂ ಪ್ರಕ್ರಿಯೆ ನಿಮ್ಮದಾಗುವಂತೆ ಮಾಡುತ್ತದೆ. ಇದರಿಂದ ಆರೋಗ್ಯಕರವಾದ ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತದೆ.

​ನಿಯಮಿತವಾಗಿ ಪ್ರತಿ ದಿನ ವ್ಯಾಯಾಮ ಮಾಡಿ:–ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ದೇಹದಲ್ಲಿ ಬೊಜ್ಜು ನಿಯಂತ್ರಣವಾಗಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ.ಇದು ಕ್ರಮೇಣವಾಗಿ ಇನ್ಸುಲಿನ್ ಪ್ರತಿರೋಧತೆಯನ್ನು ಕಡಿಮೆ ಮಾಡಿ ರಕ್ತದಲ್ಲಿ ಕಂಡುಬರುವ ಗ್ಲುಕೋಸ್ ಅಂಶ ಸರಿಯಾಗಿ ಸಂಸ್ಕರಣೆ ಆಗುವಂತೆ ಮಾಡುತ್ತದೆ.

​ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ:–ಆಗಾಗ ನೀವು ಶುಗರ್ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಸದ್ಯದ ರಕ್ತದಲ್ಲಿನ ಸಕ್ಕರೆ ಮಟ್ಟ ಯಾವ ಪ್ರಮಾಣದಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ.ಈ ಮೂಲಕ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳಲು ಅನುಕೂಲವಾಗುತ್ತದೆ.ಕ್ರಮೇಣವಾಗಿ ನಿಮ್ಮ ಮಧುಮೇಹ ನಿಯಂತ್ರಣ ಮಾಡಿಕೊಳ್ಳಲು ಇದು ದಾರಿ ಮಾಡಿಕೊಡುತ್ತದೆ. ಹಾಗಾಗಿ ನಿಮ್ಮ ಹತ್ತಿರದಲ್ಲಿರುವ ವೈದ್ಯರ ಬಳಿ ಆಗಾಗ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡಿ ಮಾಹಿತಿ ಪಡೆದುಕೊಳ್ಳಿ.

​ನಿಮ್ಮ ಪಾದಗಳನ್ನು ಆಗಾಗ ಪರೀಕ್ಷಿಸುತ್ತಿರಿ:–ಒಂದು ವೇಳೆ ನೀವು ಮಧುಮೇಹ ರೋಗಿ ಆಗಿದ್ದಲ್ಲಿ, ನಿಮ್ಮ ಕಾಲುಗಳ ಹಾಗೂ ಪಾದಗಳ ಭಾಗದ ಮೇಲೆ ಹೆಚ್ಚು ಗಮನ ವಹಿಸಿ.ಏಕೆಂದರೆ ಇಲ್ಲಿ ಚರ್ಮದ ಬಣ್ಣ ಬದಲಾಗುವುದು, ಚರ್ಮ ಸೀಳಿ ಬಿಟ್ಟಂತೆ ಆಗುವುದು ಎಲ್ಲವೂ ಕಂಡುಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು.

Leave A Reply

Your email address will not be published.