ರಾತ್ರಿ ಅಲೋವೆರಾವನ್ನು ಹೀಗೆ ಹಚ್ಚಿ ಬೆಳಗ್ಗೆ ನಿಮ್ಮ ಮುಖ ಬಿಳಿಯಾಗಿ ಹೊಳೆಯುತ್ತೆ!

0 13

ಆಲೂವೆರಾ ಜೆಲ್ ಗೆ ಎಲ್ಲಾ ರೀತಿಯ ಸ್ಕಿನ್ ತೊಂದರೆಗಳನ್ನು ಸರಿಪಡೀಸುವ ಶಕ್ತಿ ಇದೆ. ಆದರೆ ಸರಿಯಾದ ರೀತಿಯಲ್ಲಿ ಬಳಸಲು ತಿಳಿದಿರಬೇಕು.

1, ಡಾರ್ಕ್ ಸರ್ಕಲ್ ಸಮಸ್ಸೆಗೆ ಒಂದು ಬೌಲ್ ಗೆ 1 ಚಮಚ ಆಲೂವೆರಾ ಜೆಲ್ ಅನ್ನು ಹಾಕಿ ಹಾಗೂ ಇದಕ್ಕೆ ಒಂದು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಹಾಗೂ 1 ಚಮಚ ರೋಸ್ ವಾಟರ್ ಅನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.ಒಂದು ವಾರದ ತನಕ ಇದನ್ನು ಹೀಗೆ ಹೊರಗಡೆ ಇಡಬಹುದು.ಫ್ರಿಜ್ ನಲ್ಲಿ ಇಡುವುದು ಬೇಕಾಗಿಲ್ಲ.ದುಬಾರಿ ಕಣ್ಣಿನ ಕ್ರೀಮ್ ಗಿಂತ ಉತ್ತಮ ಫಲಿತಾಂಶವನ್ನು ಕೊಡುತ್ತದೆ. ಪ್ರತಿದಿನ ರಾತ್ರಿ ಇದನ್ನು ಹಚ್ಚಿ ಬೆಳಗ್ಗೆ ತೊಳೆಯಿರಿ.

2, ಕುತ್ತಿಗೆ ಸುತ್ತ ಕಪ್ಪು ಆಗಿದ್ದರೆ ಹಾಗೂ ಅಂಡರ್ ಅರ್ಮ್ಸ್ ಏನಾದರು ಕಪ್ಪಾಗಿದ್ದರೇ ಬೆಳ್ಳಗೆ ಆಗಿಸಲು ಆಲೂವೆರಾ ಜೆಲ್ ಅನ್ನು ಹೀಗೆ ಬಳಸಿ.ಒಂದು ಬೌಲ್ ಗೆ ಅಕ್ಕಿ ಹಿಟ್ಟನ್ನು ಹಾಕಿ. ಇದಕ್ಕೆ 1 ಚಮಚ ಆಲೂವೆರಾ ಜೆಲ್ ಅನ್ನು ಸೇರಿಸಿ. ನಂತರ ಇದಕ್ಕೆ ಅರ್ಧ ಒಳ್ ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.ಮೊದಲು ಕುತ್ತಿಗೆ ಮತ್ತು ಅಂಡರ್ ಅರ್ಮ್ಸ್ ಅನ್ನು ಒದ್ದೆ ಬಟ್ಟೆಯಿಂದ ಕ್ಲೀನ್ ಮಾಡಿ ಈ ಪ್ಯಾಕ್ ಅನ್ನು ಕುತ್ತಿಗೆ ಅಥವಾ ಅಂಡರ್ ಅರ್ಮ್ಸ್ ಗೆ ಹಚ್ಚಿ ಚೆನ್ನಾಗಿ ಸ್ಕ್ರಾಬ್ ಮಾಡಿ.ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುತ್ತ ಬಂದರೆ ಉತ್ತಮ ಫಲಿತಾಂಶ ನಿಮಗೆ ಕಂಡು ಬರುತ್ತದೆ.

3, ಒಡೆದ ಹಿಮ್ಮಡಿಗೆ ಆಲೂವೆರಾ ಜೆಲ್ ಅನ್ನು ಹೀಗೆ ಬಳಸಿ-ಒಂದು ಬೌಲ್ ಗೆ 1 ಚಮಚ ಆಲೂವೆರಾ ಜೆಲ್ ಅನ್ನು ಹಾಕಿ ಹಾಗೂ ಇದಕ್ಕೆ 1 ಚಮಚ ವ್ಯಾಸ್ಲಿನ್ ಅನ್ನು ಸೇರಿಸಿ ಹಾಗೂ 1 ಚಮಚ ಹರೆಳೆಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ. ಪ್ರತಿದಿನ ರಾತ್ರಿ ಒಡೆದ ಹಿಮ್ಮಡಿಗೆ ಹಚ್ಚಿ ಬೆಳಗ್ಗೆ ತೊಳೆಯಿರಿ.ಈ ರೀತಿ ಮಾಡಿದರೆ ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ.

4, ಸುಕ್ಕು ಮತ್ತು ನೆರಿಗೆಗಳನ್ನು ನೀವಾರಿಸಲು-ಒಂದು ಬೌಲ್ ಗೆ 1 ಚಮಚ ಆಲೂವೆರಾ ಜೆಲ್ ಹಾಕಿ. ಇದಕ್ಕೆ ವಿಟಮಿನ್ ಇ ಕ್ಯಾಪ್ಸಿಲ್ ಅನ್ನು ಸೇರಿಸಿ ಮಿಕ್ಸ್ ಮಾಡಿ.ರಾತ್ರಿ ಮುಖ ತೊಳೆದ ನಂತರ ಈ ಕ್ರೀಮ್ ಅನ್ನು ಹಚ್ಚಿ.2 ನಿಮಿಷ ಚೆನ್ನಾಗಿ ಮಸಾಜ್ ಮಾಡಿ.ನಂತರ ಬೆಳಗ್ಗೆ ತೊಳೆಯಿರಿ.

5 ಇನ್ನು ಮುಖದಲ್ಲಿ ಮೊಡವೆ ಆಗಿದ್ದರೆ ಒಂದು ಬೌಲ್ ಗೆ 1 ಚಮಚ ಆಲೂವೆರಾ ಜೆಲ್ ಹಾಗೂ ಅರ್ಧ ಚಮಚ ಕಹಿ ಬೇವಿನ ಪುಡಿಯನ್ನು ಹಾಕಿ.ನಂತರ ಒಂದು ಚಮಚ ರೋಸ್ ವಾಟರ್ ಅನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.ರಾತ್ರಿ ವೇಳೆ ಮೊಡವೆ ಇರುವ ಜಾಗಕ್ಕೆ ಇದನ್ನು ಹಚ್ಚಿ.ಬೆಳಗ್ಗೆ ತೊಳೆಯಿರಿ.

6, ಬಂಗು ಕಲೆ ಹಾಗೂ ಮೊಡವೆ ಕಲೆ-ಒಂದು ಬೌಲ್ ಗೆ ಆಲೂವೆರಾ ಜೆಲ್, 1 ಚಮಚ ಕಿತ್ತಳೆ ಸಿಪ್ಪೆಯ ಪುಡಿ, ಎರಡು ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಪ್ರತಿದಿನ ರಾತ್ರಿ ಮುಖ ತೊಳೆದ ನಂತರ ಇದನ್ನು ಹಚ್ಚಿ ಒಣಗಲು ಬಿಡಿ.ನಂತರ ಬಾರಿ ನೀರಿನಲ್ಲಿ ತೊಳೆಯಿರಿ.ಪ್ರತಿದಿನ ಹೀಗೆ ಮಾಡುತ್ತ ಬನ್ನಿ ಉತ್ತಮ ಫಲಿತಾಂಶ ನಿಮಗೆ ಸಿಗುತ್ತದೆ.

7, ಒಂದು ಬೌಲ್ ಗೆ 1 ಚಮಚ ಮೊಸರು,1 ಚಮಚ ಆಲೂವೆರಾ ಜೆಲ್,1 ಚಮಚ ಅಕ್ಕಿ ಹಿಟ್ಟನ್ನು ಹಾಕಿ ಹಾಗೂ ಅರ್ಧ ಚಮಚ ನಿಂಬೆ ಹಣ್ಣಿನ ರಸ ಅಥವಾ ಟೊಮೇಟೊ ಹಣ್ಣಿನ ರಸವನ್ನು ಸೇರಿಸಿ ಮಿಕ್ಸ್ ಮಾಡಿ. ಮುಖ ತೊಳೆದ ನಂತರ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ.ನಂತರ ಸ್ಕ್ರಾಬ್ ಮಾಡಿ ರಿಮೋವ್ ಮಾಡಿ.ಈ ರೀತಿಯಾಗಿ ಸರಿಯಾಗಿ ಅಲೋವೆರಾ ಜೆಲ್ ಬಳಸಿದರೆ ಉತ್ತಮ ಫಲಿತಾಂಶ ನಿಮಗೆ ಕಂಡು ಬರುತ್ತದೆ.

Leave A Reply

Your email address will not be published.