ಕೆಟ್ಟ ದೃಷ್ಟಿ ಮತ್ತು ಮಾಟ ಮಂತ್ರದ ದೋಷಗಳಿಗಾಗಿ ಈ ವಸ್ತುವು ಮನೆಯಲ್ಲಿ ಇರಲಿ.

0 41,477

ಶಂಖದ ವಿಶೇಷ ಧಾರ್ಮಿಕ ಮಹತ್ವವನ್ನು ಗ್ರಂಥಗಳಲ್ಲಿ ಹೇಳಲಾಗಿದೆ. ಮನೆಯಲ್ಲಿ ಪ್ರತಿದಿನ ಶಂಖವನ್ನು ಊದುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಮನೆಯ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

 ಹಿಂದೂ ಧರ್ಮದಲ್ಲಿ ಶಂಖವನ್ನು ಹೆಚ್ಚಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಪ್ರತಿನಿತ್ಯ ಶಂಖ ಊದುವುದರಿಂದ ಮನೆಯ ದುಷ್ಪರಿಣಾಮ ದೂರವಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಇದರೊಂದಿಗೆ ಮನೆಯ ಕಲಹ ಮತ್ತು ಸಂಕಟದಿಂದ ಮುಕ್ತಿಯೂ ಸಿಗುತ್ತದೆ. ಅಷ್ಟೇ ಅಲ್ಲ ತಾಯಿ ಲಕ್ಷ್ಮಿದೇವಿಯ ಜೊತೆಗೆ ವಿಷ್ಣುವಿನ ಕೃಪೆಯೂ ಇರುತ್ತದೆ ಎಂಬ ನಂಬಿಕೆ ಇದೆ. ಶಂಖ ಊದುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಇರುತ್ತದಂತೆ. ಶಂಖವನ್ನು ಊದುವ ಶಾಸ್ತ್ರೀಯ ನಿಯಮ ಏನು?ಮತ್ತು ಅದನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಶಂಖವನ್ನು ಹೇಗೆ ಬಳಸಬೇಕು..?

ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಎರಡು ರೀತಿಯ ಶಂಖವನ್ನು ಇಡಬೇಕು. ವಾಸ್ತವವಾಗಿ ಊದಿದ ಮತ್ತು ನುಡಿಸುವ ಶಂಖವನ್ನು ಪೂಜೆಯಲ್ಲಿ ಬಳಸಬಾರದು. ಅಂದರೆ ಅದನ್ನು ಬಳಿಸಿ ಪೂಜೆ-ಅಭಿಷೇಕ ಇತ್ಯಾದಿಗಳನ್ನು ಮಾಡಬಾರದು. ಪೂಜೆ ಮಾಡುವ ಶಂಖವನ್ನು ಊದಬಾರದು. ಶಂಖವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಪೂಜಾ ಮನೆಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಇಡಬೇಕು. ಭಗವಾನ್ ವಿಷ್ಣುವಿಗೆ ಶಂಖದೊಂದಿಗೆ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಶಂಖದಿಂದ ಸೂರ್ಯ ದೇವರು ಮತ್ತು ಶಿವನಿಗೆ ನೀರನ್ನು ಅರ್ಪಿಸುವುದಿಲ್ಲ. ಶಂಖವನ್ನು ಊದುವ ಮೊದಲು ಗಂಗಾಜಲದಿಂದ ಶುದ್ಧಿ ಮಾಡಬೇಕು. ಗಂಗಾಜಲ ಇಲ್ಲದಿದ್ದರೆ ನೀವು ಸಾಮಾನ್ಯ ನೀರಿನಿಂದ ಶಂಖವನ್ನು ಸ್ವಚ್ಛಗೊಳಿಸಬಹುದು. ಇದಲ್ಲದೇ ಪೂಜೆಯ ಶಂಖದಲ್ಲಿ ನೀರು ಸದಾ ಇಡಬೇಕು. ಆ ನೀರನ್ನು ಪೂಜೆಗೆ ಬಳಸಿದ ನಂತರ ಮನೆಯಲ್ಲಿ ಸಿಂಪಡಿಸಬೇಕು.

ಶಂಖವು 14 ರತ್ನಗಳಲ್ಲಿ ಒಂದಾಗಿದೆ

ಪುರಾಣಗಳಲ್ಲಿ ವಿವರಿಸಲಾದ ಕಥೆಯ ಪ್ರಕಾರ, ಶಂಖವು 14 ರತ್ನಗಳಲ್ಲಿ ಒಂದಾಗಿದೆ. ಶಂಖವು ಸಾಗರ ಮಂಥನದ ಸಮಯದಲ್ಲಿ ಹುಟ್ಟಿಕೊಂಡಿತು. ಶಂಖವು ಲಕ್ಷ್ಮಿದೇವಿಯ ಸಹೋದರ ಎಂಬ ನಂಬಿಕೆಯೂ ಇದೆ. ಅಲ್ಲದೆ ಇದು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ದಂತಕಥೆಗಳ ಪ್ರಕಾರ, ಶಂಖವು ವಿಷ್ಣುವಿನ ಆಭರಣಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಂಖವನ್ನು ಊದಿದ ಮನೆಯಲ್ಲಿ ವಿಷ್ಣುವು ಲಕ್ಷ್ಮಿಯೊಂದಿಗೆ ನೆಲೆಸುತ್ತಾನೆ ಎಂಬ ನಂಬಿಕೆ ಇದೆ.

Leave A Reply

Your email address will not be published.