ಆಯುರ್ವೇದ ಪ್ರಕಾರ ದಿನಚರಿ ಹೇಗೆ ಇರಬೇಕು!
ಆಯುರ್ವೇದದ ಪ್ರಕಾರ ದಿನಚರಿ ಹೀಗೆ ಇರಬೇಕು. ಆಯುರ್ವೇದ ಎಂದರೆ ಆಯಸ್ಸನ್ನು ವೃದ್ಧಿಸುವ ವಿಜ್ಞಾನ. ಆದಷ್ಟು ಬೆಳಗ್ಗೆ ಏಳುವ ಸಮಯ ನಿಗದಿ ಆಗಬೇಕು. ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು.ಸಾಧನೆ ಮಾಡಲು ಬಯಸುವವರು 3:20 ರಿಂದ 5:40 ರ ಒಳಗೆ ಎದ್ದೇಳಬೇಕು.ಹಲ್ಲು ಉಜ್ಜುವ ಮೊದಲು ಅರ್ಧ ಲೀಟರ್ ನೀರನ್ನು ಕುಡಿಯಬೇಕು. ಇನ್ನು ಮನೆಯಲ್ಲಿ ತಯಾರು ಮಾಡಿರುವ ಚೂರಣದಿಂದ ಹಲ್ಲನ್ನು ಶುದ್ಧ ಮಾಡಿಕೊಳ್ಳಬೇಕು.ನಂತರ ಮೋಶನ್ ಗೆ ಹೋಗಬೇಕು. ನಂತರ ಸ್ನಾನವನ್ನು ಮಾಡಬೇಕು.ಆದಷ್ಟು ಉಗುರು ಬೆಚ್ಚಗೆ ಇರುವ ನೀರಿನಿಂದ ಸ್ನಾನವನ್ನು ಮಾಡಬೇಕು.ನಂತರ ಶುಭ್ರವಾಗಿ ಇರುವ ಬಟ್ಟೆಯನ್ನು ಧರಿಸಬೇಕು.
ನಂತರ ಬೆಳಗ್ಗೆ ತಿಂಡಿಯನ್ನು ತಿನ್ನಬೇಕು ಹಾಗೂ ತಿಂದ ಮೇಲೆ 10 ನಿಮಿಷ ಕುಳಿತುಕೊಳ್ಳಬೇಕು.ನಂತರ ಮದ್ಯಹ್ನ ಆಹಾರವನ್ನು ಸೇವನೆ ಮಾಡಬೇಕು ಹಾಗೂ ಸಂಜೆ ಆಹಾರವನ್ನು ಸೇವನೆ ಮಾಡಬೇಕು.ಪ್ರತಿ ಬಾರಿ ಆಹಾರವನ್ನು ಸೇವನೆ ಮಾಡುವ ಮೊದಲು ಕೈ ಕಾಲುಗಳನ್ನು ತೊಳೆಯಬೇಕು.ಊಟ ಮಾಡುವ ಸಮಯದಲ್ಲಿ 5 ನಿಮಿಷ ಧ್ಯಾನವನ್ನು ಮಾಡಬೇಕು.
ಇನ್ನು ಮಲಗುವ ಕೋಣೆಯಲ್ಲಿ ಯಾವುದೇ ಮೊಬೈಲ್ ಕೂಡ ಇರಬಾರದು.ರಾತ್ರಿ ಮಲಗುವಾಗ ಸ್ನಾನ ಮಾಡಿಕೊಂಡಿ ಮಲಗಿದರೆ ಬಹಳ ಒಳ್ಳೆಯದು.ಇನ್ನು ರಾತ್ರಿ ಮಲಗುವಾಗ ರಾತ್ರಿ ಪಾದಕ್ಕೆ ಕೈಗೆ ನೆತ್ತಿಗೆ ಎಣ್ಣೆ ಹಾಕಿ ಮಸಾಜ್ ಮಾಡಬೇಕು ಮತ್ತು ಹೊಕ್ಕಳಿಗೆ 4-5 ಹನಿ ಎಣ್ಣೆಯನ್ನು ಹಾಕಬೇಕು ಹಾಗೂ ಕಣ್ಣಿಗೆ ತುಪ್ಪವನ್ನು ಹಾಕಬೇಕು.ಆದಷ್ಟು ಎಡ ಗಡೆಯಲ್ಲಿ ಮಲಗಬೇಕು.ಈ ರೀತಿ ಮಾಡಿದರೆ ದಿನಚರಿ ಮುಕ್ತಾಯ ಆಗುತ್ತದೆ.