Health & Fitness

ಆಲೀವ್ ಎಣ್ಣೆ ಹೀಗೆ ಬಳಸಿದರೆ ಆರೋಗ್ಯದ ಮೇಲೆ ಎಂತಾ ಪರಿಣಾಮ ಬೀರತ್ತೆ ಗೊತ್ತಾ?

ಬಹುರಾಷ್ಟ್ರೀಯ ಪ್ರಖ್ಯಾತಿಯನ್ನು ಹೊಂದಿರುವ, ಹೆಂಗಳೆಯರ ಅಚ್ಚುಮೆಚ್ಚಿನ ಆಲಿವ್ ಎಣ್ಣೆಯು ಕೇವಲ ಅಡುಗೆಗಷ್ಟೇ ಅಲ್ಲದೇ ಚರ್ಮ ಮತ್ತು ಕೇಶದ ಆರೋಗ್ಯದಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ಬೆಳೆಯುವ ಆಲಿವ್ ಮರದಲ್ಲಾಗುವ ಹಣ್ಣನ್ನು ಹಿಂಡಿ ಆಲಿವ್ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ.

ಆಲಿವ್ ಎಣ್ಣೆಯು ಕೊಬ್ಬಿನಂಶವನ್ನು ಕಡಿಮೆಗೊಳಿಸುವುದಲ್ಲದೇ ದೇಹದಲ್ಲಿರುವ ಕೊಲೆಸ್ಟರೋಲ್ ಆಕ್ಸಿಡೇಟಿವ್ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಆಗಬಹುದಾದ ತೊಂದರೆಯು ಕಡಿಮೆಯಾಗುತ್ತದೆ.

ಎಳೆ ಮಗುವಿಗೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಮಗುವಿನ ಚರ್ಮವು ಮೃದು ಮತ್ತು ನಯವಾಗುತ್ತದೆ.

  • ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಸ್ಟ್ರೋಕ್‌ನ ಸಾಧ್ಯತೆಗಳು ಕಡಿಮೆಯಾಗುತ್ತದೆ.
  • ಎಳೆಯ ಮಗು ಮಲಬದ್ಧತೆಯಿಂದ ಬಳಲುತ್ತಿದ್ದರೆ ಆಲಿವ್ ಎಣ್ಣೆಯನ್ನು ಮಗುವಿನ ಹೊಟ್ಟೆಯ ಮೇಲೆ ತಿಕ್ಕಿದರೆ ಮಲಬದ್ಧತೆಯ ಸಮಸ್ಯೆಯು ನಿವಾರಣೆಯಾಗುತ್ತದೆ.
  • ಆಲಿವ್ ಎಣ್ಣೆಯಲ್ಲಿರುವ ಒಲಿಯೋಕಂತಲ್ ಎಂಬ ಫೈಟೊನ್ಯೂಟ್ರಿಯೆಂಟ್ ಅಂಶವು ಉರಿಯೂತವನ್ನು ಕಡಿಮೆಗೊಳಿಸಿ ವಿವಿಧ ರೀತಿಯ ಕ್ಯಾನ್ಸರ್ ಆಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.
  • ಆಲಿವ್ ಎಣ್ಣೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ. 
  • ಆಲಿವ್ ಎಣ್ಣೆಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ ಇನ್ಸುಲಿನ್‌‌ ಶಕ್ತಿಯನ್ನು ವೃದ್ಧಿಸುತ್ತದೆ. 
  • ಆಲಿವ್ ಎಣ್ಣೆಯಿಂದ ಚರ್ಮದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇದು ಸೂರ್ಯನ ಕಿರಣಗಳ ವಿರುದ್ಧ ರಕ್ಷಣಾ ಕವಚದಂತೆಯೂ ಸಹಾಯಕವಾಗಿದೆ.
  • ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಇದು ಅನಗತ್ಯ ಆಹಾರ ಸೇವನೆಯನ್ನು ತಡೆಗಟ್ಟಿ ತೂಕವನ್ನು ಕಡಿಮೆಗೊಳಿಸುತ್ತದೆ.
  • ಆಲಿವ್ ಎಣ್ಣೆಯನ್ನು ಮುಖದ ತ್ವಚೆಗೆ ಬಳಸಿದಾಗ ಪೊಲಿಫೆನೋಲ್ ಎಂಬ ಆಂಟಿ ಆಕ್ಸಿಡೆಂಟ್‌ಗಳು ಬಿಡುಗಡೆಗೊಂಡು ರಕ್ತ ಸಂಚಲನೆಯನ್ನು ಉತ್ತಮಗೊಳಿಸುತ್ತದೆ.
  • ಆಲಿವ್ ಎಣ್ಣೆಯಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾಗಿದೆ.
  • 1 ಚಮಚ ನಿಂಬೆಯ ಹಣ್ಣಿನ ರಸವನ್ನು 2 ಚಮಚ ಆಲಿವ್ ಎಣ್ಣೆಯಲ್ಲಿ ಕಲೆಸಿ, ಕೂದಲಿಗೆ ಮಸಾಜ್ ಮಾಡಿ ಒಂದು ಗಂಟೆಯ ನಂತರ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. 
  • ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಪಿತ್ತಗಲ್ಲು ಆಗುವುದನ್ನು ತಡೆಗಟ್ಟಬಹುದು.
  • ಆಲಿವ್ ಎಣ್ಣೆಯಿಂದ ಕಾಲನ್ನು ಮಸಾಜ್ ಮಾಡುವುದರಿಂದ ಒಡೆದ ಹಿಮ್ಮಡಿಯ ಬಿರುಕು ಕಡಿಮೆಯಾಗುತ್ತದೆ.
  • ಆಲಿವ್ ಎಣ್ಣೆಗೆ ಅರ್ಧ ಚಮಚ ಬ್ರೌನ್ ಸಕ್ಕರೆ ಸೇರಿಸಿ ತುಟಿಗೆ ಸ್ಕ್ರಬ್ ಮಾಡುವುದರಿಂದ ತಟಿಯು ಆಕರ್ಷಕವಾಗಿ ಕಾಣಿಸುತ್ತದೆ.
  • ಆಲಿವ್ ಎಣ್ಣೆಯನ್ನು ಸ್ಟ್ರಾಬೆರಿ ಎಣ್ಣೆಯೊಂದಿಗೆ ಕೂಡಿಸಿ ಉಪಯೋಗಿಸುವುದರಿಂದ ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಡೆದು ಹಾಕಿ ಹೊಳಪಿನ ಚರ್ಮವನ್ನು ನೀಡುತ್ತದೆ.
  • ಆಲಿವ್ ಎಣ್ಣೆಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣದಿಂದ ಮೊಡವೆಗಳನ್ನು ಉಂಟು ಮಾಡುವ ಸೂಕ್ಷ್ಮ ಜೀವಿಗಳನ್ನು ತೊಡೆದುಹಾಕುತ್ತದೆ.
  • ಆಲಿವ್ ಎಣ್ಣೆಗೆ ಹೆಚ್ಚಿನ ಮಟ್ಟದ ಶಾಖ ನೀಡಿದಾಗ ಅದು ಯಾವುದೇ ರೀತಿಯ ಹಾನಿಕಾರಕ ಪದಾರ್ಥವಾಗಿ ಮಾರ್ಪಡದೇ ಅಡುಗೆಗೆ ಸುರಕ್ಷಿತ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.
  • ಉಗುರುಗಳ ಬೆಳವಣಿಗೆಯಲ್ಲಿ ಮತ್ತು ಅವುಗಳ ಬಲಿಷ್ಠತೆಯನ್ನು ಹೆಚ್ಚಿಸುವಲ್ಲಿ ಆಲಿವ್ ಎಣ್ಣೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
  • ಆಲಿವ್ ಎಣ್ಣೆಯು ದೊಡ್ಡ ಕರುಳಿಗೆ ಸಂಬಂಧಿಸಿದ ಅಲ್ಸರೇಟಿವ್ ಕೊಲೈಟಸ್ ಎಂಬ ರೋಗವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
  • ಆಲಿವ್ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಆರೋಗ್ಯಕರವಾಗಿ, ಬಲಿಷ್ಠವಾಗಿ ಬೆಳೆಯುತ್ತದೆ.
  • ಆಲಿವ್ ಎಣ್ಣೆಯು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡಿ ಕರುಳಿನ ಕಾರ್ಯನಿರ್ವಹಣೆಯಲ್ಲಿ ಉಪಯುಕ್ತವಾಗಿದೆ.
  • ಆಲಿವ್ ಎಣ್ಣೆಯು ದೇಹದಲ್ಲಿ ಆಹಾರದಿಂದ ಬರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡಿ ಅಸ್ಥಿರಂದ್ರತೆ ಎಂಬ ರೋಗವನ್ನು ತಡಗಟ್ಟಲು ಸಹಾಯ ಮಾಡುತ್ತದೆ.
  • ಹಸ್ತಗಳು ಒರಟಾಗಿದ್ದರೆ ಆಲಿವ್ ಎಣ್ಣೆಯನ್ನು ಹಚ್ಚಿಕೊಂಡು ನಯವಾಗಿ ಉಚ್ಚಿಕೊಳ್ಳುವ ಮೂಲಕ ಮೃದುವಾಗುತ್ತದೆ.

Leave a Reply

Your email address will not be published. Required fields are marked *