ಖರ್ಜುರ ಸೇವಿಸುವ ಮುನ್ನ ಈ ಮಾಹಿತಿ ತಪ್ಪದೆ ನೋಡಿ!

0 0

Check this information before consuming dates :ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ ಸೊಪ್ಪು-ತರಕಾರಿ, ಹಣ್ಣು-ಹಂಪಲು ಇಷ್ಟಿದ್ದರೆ ಸಾಲದು. ಆಗಾಗ ಡ್ರೈ ಫ್ರೂಟ್ಸ್, ಒಣ ದ್ರಾಕ್ಷಿ, ಹಸಿ ಖರ್ಜೂರ ಇವುಗಳನ್ನು ಕೂಡ ಸೇವನೆ ಮಾಡಬೇಕು. ಏಕೆಂದರೆ ಕೆಲವೊಂದು ವಿಶೇಷವಾದ ಪೌಷ್ಠಿಕ ಸತ್ವಗಳು ಇವುಗಳಲ್ಲಿ ಸಿಗುತ್ತವೆ. ಇದರಿಂದ ವಿಶಿಷ್ಟವಾದ ಆರೋಗ್ಯ ಪ್ರಯೋಜನಗಳು ಇರುತ್ತವೆ. ಆಗಾಗ ಇವುಗಳನ್ನು ಸೇವನೆ ಮಾಡದೆ ಹೋದರೆ ಇಂತಹ ಪ್ರಯೋಜನಗಳನ್ನು ಮಿಸ್ ಮಾಡಿಕೊಂಡಂತೆ ಆಗುತ್ತದೆ.

ಹಾಗಾಗಿ ದ್ರಾಕ್ಷಿ ಗೋಡಂಬಿ ಖರ್ಜೂರ ಇತ್ಯಾದಿಗಳನ್ನು ಆಗಾಗ ಯಾವುದಾದರೂ ಒಂದು ರೂಪದಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಆದರೆ ಖರ್ಜೂರಗಳನ್ನು ಸೇವನೆ ಮಾಡುವಾಗ ಇಂತಹದೇ ಸಮಯದಲ್ಲಿ ತಿಂದರೆ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ. ಈ ಬಗ್ಗೆ ಮನಸ್ಸಿನಲ್ಲಿ ಗೊಂದಲ ಇರುವವರಿಗೆ ಈ ಲೇಖನದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ.

​ಖರ್ಜೂರದ ಪ್ರಯೋಜನಗಳು

ಖರ್ಜೂರ ಗಳಲ್ಲಿ ಅಪಾರ ಪ್ರಮಾಣದ ಕ್ಯಾಲೋರಿ ಗಳು ಸಿಗುತ್ತವೆ. ಹಾಗಾಗಿ ಇವುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಹೆಚ್ಚುತ್ತದೆ. ಮುಖ್ಯವಾಗಿ ನಾರಿನ ಅಂಶ ಅಪಾರ ಪ್ರಮಾಣದಲ್ಲಿ ಕಂಡು ಬರುವ ಖರ್ಜೂರಗಳು ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಪಡೆದುಕೊಂಡಿವೆ.

ಹಾಗಾಗಿ ನಿಯಮಿತವಾಗಿ ಪ್ರತಿ ದಿನ ಇವುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳು ಸರಾಗವಾಗಿ ನಡೆಯುತ್ತವೆ, ಕರುಳಿನ ಚಲನೆ ಉತ್ತಮಗೊಳ್ಳುತ್ತದೆ, ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುವುದರಿಂದ ಹಲವು ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ ಮತ್ತು ಮೆದುಳಿನ ಕಾರ್ಯಚಟುವಟಿಕೆ ಉತ್ತಮಗೊಳ್ಳುತ್ತದೆ.

​ಹಾಗಾದ್ರೆ ಇದರೆ ಸೇವನೆ, ರಾತ್ರಿ ಒಳ್ಳೆಯದಾ ಅಥವಾ ಬೆಳಗ್ಗೆ ಒಳ್ಳೆಯದಾ?

ಆದರೆ ಜನರಲ್ಲಿ ಇರುವ ಒಂದು ಗೊಂದಲ ಎಂದರೆ, ಖರ್ಜೂರದಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ನಾರಿನಂಶದ ಕಾರಣ ಇವುಗಳನ್ನು ಇಡೀ ರಾತ್ರಿ ನೆನೆ ಹಾಕಿ ಸೇವನೆ ಮಾಡುವುದು ಒಳ್ಳೆಯದಾ ಅಥವಾ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಗೆ ಸೇವನೆ ಮಾಡುವುದು ಒಳ್ಳೆಯದಾ ಎಂಬ ಪ್ರಶ್ನೆ ಇದೆ.

ಖರ್ಜೂರಗಳನ್ನು ಸೇವನೆ ಮಾಡಲು ಒಳ್ಳೆಯ ಸಮಯ ಯಾವುದು ಮತ್ತು ಯಾವ ಸಮಯದಲ್ಲಿ ಇವುಗಳನ್ನು ಸೇವನೆ ಮಾಡಬಾರದು ಎಂಬ ಬಗ್ಗೆ ಮೊದಲು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

​ಖರ್ಜೂರಗಳನ್ನು ಸೇವನೆ ಮಾಡುವ ಒಳ್ಳೆಯ ಸಮಯ

ಖರ್ಜೂರಗಳು ತಮ್ಮಲ್ಲಿ ಅಪಾರ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿದ್ದರೂ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ಇವುಗಳಿಂದ ಹೆಚ್ಚಾಗುತ್ತದೆ ಎಂಬ ಯಾವುದೇ ಅನುಮಾನ ಬೇಡ.

ಏಕೆಂದರೆ ಇವುಗಳಲ್ಲಿ ಕಂಡು ಬಂದಿರುವುದು ಕೇವಲ ಅಧಿಕ ಪ್ರಮಾಣದ ನೈಸರ್ಗಿಕ ರೂಪದ ಸಕ್ಕರೆ ಅಂಶ. ಹಾಗಾಗಿ ನೀವು ವ್ಯಾಯಾಮ ಮಾಡುವ ಸುಮಾರು ಅರ್ಧ ಅಥವಾ ಒಂದು ಗಂಟೆಯ ಮುಂಚೆ ಎರಡರಿಂದ ನಾಲ್ಕು ಖರ್ಜೂರಗಳನ್ನು ಸೇವನೆ ಮಾಡುವುದು ಒಳ್ಳೆಯದು.

ದೇಹದಲ್ಲಿ ಇವುಗಳು ನಿಧಾನವಾಗಿ ಕಾರ್ಬೋಹೈಡ್ರೇಟ್ ಅಂಶವನ್ನು ಬಿಡುಗಡೆ ಮಾಡುತ್ತಾ ವ್ಯಾಯಾಮ ಮಾಡುವ ಸಂದರ್ಭದಲ್ಲಿ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತ ಹೋಗುತ್ತವೆ.

​ಅಧಿಕ ಪ್ರಮಾಣದ ನಾರಿನಾಂಶ

ನಾರಿನಾಂಶ ಹೆಚ್ಚಾಗಿರುವ ಖರ್ಜೂರಗಳು ಹೊಟ್ಟೆ ಹಸಿವನ್ನು ನೀಗಿಸುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ರಾತ್ರಿಯ ಮಲಗಿಕೊಳ್ಳುವ ಸಂದರ್ಭದಲ್ಲಿ ಇವುಗಳನ್ನು ಸೇವನೆ ಮಾಡಿ ಮಲಗಿಕೊಳ್ಳುವುದರಿಂದ ಇಡೀ ರಾತ್ರಿ ಹೊಟ್ಟೆ ಹಸಿವು ಅತ್ಯುತ್ತಮವಾಗಿ ಬೆಳಗಿನವರೆಗೆ ನಿಯಂತ್ರಣವಾಗುತ್ತದೆ.

ಕರುಳಿನ ಭಾಗದ ಹುಳುಗಳನ್ನು ನಾಶ ಪಡಿಸುವಲ್ಲಿ ಮತ್ತು ಅದೇ ಸಮಯಕ್ಕೆ ದೇಹದ ಪ್ರಮುಖ ಅಂಗಾಂಗಗಳ ಕಾರ್ಯಚಟುವಟಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಬೆಳಗಿನ ಸಮಯದ ಖರ್ಜೂರಗಳ ಸೇವನೆ ಸಹಾಯಕ್ಕೆ ಬರಲಿದೆ.

ಬೆಳಗಿನ ಸಮಯದಲ್ಲಿ ಖರ್ಜೂರಗಳನ್ನು ಸೇವನೆ ಮಾಡುವುದರಿಂದ ಇನ್ನೊಂದು ಉಪಯೋಗವಾಗಲಿದೆ. ಅದೇನೆಂದರೆ ಚರ್ಮದ ಕಾಂತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

​ಈ ಖರ್ಜೂರದಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ….

ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುವಲ್ಲಿ, ಮೂಳೆಗಳ ಬಲವರ್ಧನೆಯಲ್ಲಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಮೆದುಳು ಹಾಗೂ ಹೃದಯದ ಆರೋಗ್ಯವನ್ನು ವೃದ್ಧಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಮೆದುಳಿಗೆ ಸಂಬಂಧಪಟ್ಟ ಮರೆವಿನ ಕಾಯಿಲೆ ಹಾಗೂ ದೀರ್ಘಕಾಲ ಕಾಡುವ ಮಾರಕ ಕ್ಯಾನ್ಸರ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇದರಿಂದ ಹೆಚ್ಚು ಅನುಕೂಲವಾಗಲಿದೆ.

​ಮಧುಮೇಹ ಸಮಸ್ಯೆ ಇದ್ದವರಿಗೆ ಖರ್ಜೂರ ಒಳ್ಳೆಯದಾ?

ಮಧುಮೇಹ ಸಮಸ್ಯೆಯನ್ನು ಹೊಂದಿದ ಜನರಿಗೆ ಖರ್ಜೂರಗಳು ತಮ್ಮಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣದಿಂದ ಹಾಗೂ ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳಿಂದ ತಮ್ಮಲ್ಲಿನ ಅತ್ಯಂತ ಹೆಚ್ಚಿನ ಪಾಲಿಫಿನಾಲ್

ರೂಪಗಳ ಕಾರಣದಿಂದ ವಿವಿಧ ಪೌಷ್ಟಿಕಾಂಶಗಳನ್ನು ಒದಗಿಸಿ ಇನ್ಸುಲಿನ್ ಪ್ರತಿರೋಧವನ್ನು ನಿಯಂತ್ರಣ ಮಾಡುತ್ತದೆ. ಆದರೆ ಯಾವುದಕ್ಕೂ ಒಮ್ಮೆ ವೈದ್ಯರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು.

​ಖರ್ಜೂರಗಳನ್ನು ಯಾವ ಸಮಯದಲ್ಲಿ ತಿನ್ನಬಾರದು?

ಯಾವುದೇ ಕಾರಣಕ್ಕೂ ಊಟ ಆದ ನಂತರ ಖರ್ಜೂರಗಳನ್ನು ಸೇವನೆ ಮಾಡಬೇಡಿ. ಏಕೆಂದರೆ ಅವುಗಳಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿರುವ ಕಾರಣ ಸರಳವಾದ ಕಾರ್ಬೋಹೈಡ್ರೇಟ್ ಅಂಶಗಳು ದೇಹದಲ್ಲಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಇದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ. ಕರ್ಜೂರ ಗಳಲ್ಲಿ ಕಂಡು ಬರುವ ಆಲ್ಕೋಹಾಲ್ ಅಂಶದ ಕಾರಣದಿಂದ ಅತಿಯಾದ ಕರುಳಿನ ಚಲನೆ ಉಂಟಾಗಿ ವಿಪರೀತ ಬೇದಿ ಕೂಡ ಕಂಡುಬರಬಹುದು. ಹಾಗಾಗಿ ಊಟದ ನಂತರ ಕರ್ಜೂರ ಗಳ ಸೇವನೆ ಬೇಡ.

ಇದರ ಜೊತೆಗೆ ಯಾರಿಗೆ ಈಗಾಗಲೇ ಖರ್ಜೂರಗಳನ್ನು ತಿಂದರೆ ಅಲರ್ಜಿ ಸಮಸ್ಯೆ ಕಂಡುಬರುತ್ತದೆ ಅಂತಹವರು ಖರ್ಜೂರಗಳನ್ನು ಸೇವನೆ ಮಾಡುವುದು ಬೇಡ.

ಇದರಲ್ಲಿ ನೈಸರ್ಗಿಕವಾದ ಫ್ರಕ್ಟೋಸ್ ಅಂಶದ ಪ್ರಮಾಣ ಕೂಡ ಹೆಚ್ಚಾಗಿರುವುದರಿಂದ ಊಟದ ನಂತರ ಸೇವನೆ ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತದೆ.

ಹಾಗಾಗಿ ಮೇಲೆ ಹೇಳಿದ ಸಮಯದಲ್ಲಿ ಖರ್ಜೂರಗಳನ್ನು ಸೇವನೆ ಮಾಡಿ ಅದರ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

Leave A Reply

Your email address will not be published.