ಈ ಗಣದ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿಗಳು ಬಹಳ ಇರುತ್ತದೆ

0 11,954

People born under this Gana Nakshatra have great psychic powers:ಈ ಗಣಗಳ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅತೀಂದ್ರಿಯ ಶಕ್ತಿಗಳು ಹೆಚ್ಚಾಗಿರುತ್ತವೆ, ರಾಶಿ ಚಕ್ರಗಳು ಮತ್ತು ಅವರ ನಕ್ಷತ್ರಕ್ಕೆ ಅನುಗುಣವಾಗಿ ಗಣಗಳನ್ನು ವಿಂಗಡಣೆ ಮಾಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಸಹ ತನ್ನದೆಯಾದ ರಾಶಿ ನಕ್ಷತ್ರ ಜಾತಕವನ್ನುಹೊಂದಿರುತ್ತಾನೆ. ಸೃಷ್ಟಿ ಸ್ಥಿತಿ ಲಯ ಈ ಮೂರು ಹಿಡಿತದಿಂದ ಗಣಗಳನ್ನು ನಿರ್ಧಿರಿಲಾಗಿದೆ. ಹೀಗೆ ಈ ಮೂರು ಗಣಗಳ ವ್ಯಕ್ತಿಗಳ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯುವುದಾದರೆ. ಮೊದಲನೇಯದಾಗಿ ಸೃಷ್ಟಿ ಅಂದರೆ ಪ್ರಪಂಚದ ಸೃಷ್ಟಿಕರ್ತ ಪರಬ್ರಹ್ಮನ ಸ್ವರೂಪ ಎಂದು ತಿಳಿಯಬಹುದು, ಸ್ಥಿತಿ ಅಂದರೆ ಬದುಕಿನಲ್ಲಿ ನಾವು ಯಾವ ರೀತಿ ಬದುಕಬೇಕು, ಹೇಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇನ್ನು ಲಯದ ವಿಚಾರವಾಗಿ ಬಂದರೆ ನಾವು ಸೃಷ್ಟಿ ಸ್ಥಿತಿ ಗಳನ್ನು ಮೀರಿ ಬದುಕುವುದೇ ಈ ಲಯ ಆಗಿರುತ್ತದೆ ಲಯ ಅಂದರೆ ಹಿಡಿತ, ಪರಿಪೂರ್ಣ, ಸಾವು ಎಂದು ಅರಿಯಬಹುದು.

ಸಾವು ಅಂದರೆ ಈ ಲಯಕಾರನಾಗಿ ಪರಮೇಶ್ವರನುಸ್ಥಾನವನ್ನು ಹೊಂದಿದ್ದಾನೆ ಎನ್ನಬಹುದಾಗಿದೆ. ಸೃಷ್ಠಿ, ಸ್ಥಿತಿ, ಲಯ ಈ ಮೂರು ರೀತಿಯಾಗಿ ಗಣಗಳನ್ನು ವಿಂಗಡಿಸುತ್ತದೆ. ಇದರಲ್ಲಿ ಸಾತ್ವಿಕತೆ ಅಂದರೆ ದೇವಗಣ ಇವರು ಎಂತಹ ಕಷ್ಟಕಾರ್ಪಣ್ಯಗಳನ್ನು ಕೂಡ ಧೈರ್ಯದಿಂದ ಎದುರಿಸುತ್ತಾರೆ. ಘೋರ ಅವಮಾನ ಅನುಭವಿಸಿದರು ಕೂಡ ಅದನ್ನು ನಗು ಮುಖದಿಂದಲೆ ಸ್ವೀಕಾರ ಮಾಡುತ್ತಾರೆ. ಇವರು ತಮಗೆ ಅವಮಾನ ಮಾಡಿದ, ದ್ರೋಹ ಎಸಗಿದ ವ್ಯಕ್ತಿಗಳನ್ನು ಕೂಡ ಕ್ಷಮಿಸುತ್ತಾರೆ. ಇವರಿಗೆ ಹೆಚ್ಚು ತಾಳ್ಮೆ, ಸಂಯಮದಿಂದ ವರ್ತಿಸುತ್ತಾರೆ. ಉದಾರತೆಯ ಮನೋಭಾವ ಉಳ್ಳವರಾಗಿರುತ್ತಾರೆ. ಕೋಪ ಇವರಲ್ಲಿ ಹೆಚ್ಚು ಕಂಡುಬರುವುದಿಲ್ಲ. ಈ ವ್ಯಕ್ತಿಗಳು ಆರಂಭಿಸಿದ ಎಲ್ಲ ವ್ಯಾಪಾರ-ವ್ಯವಹಾರಗಳಲ್ಲಿ ಜಯ ಸಾಧಿಸುತ್ತಾರೆ.

ರಜೋಗುಣ ಅಂದರೆ ಇವರು ಮಾನವ ಗಣಕ್ಕೆ ಸೇರುತ್ತಾರೆ, ಇವರು ಕೆಲವೊಮ್ಮೆ ಕಷ್ಟಪಡದೇ ಅಸನಾದ, ಅಚ್ಚುಕಟ್ಟಾಗಿ ಬದುಕು ನಡೆಸಲು ಇಷ್ಟಪಡುತ್ತಾರೆ. ಇವರಿಗೆ ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೆ ಗೊಂದಲಮವಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರು ಹೆಚ್ಚು ನಕರಾತ್ಮಕ ಚಿಂತನೆಗಳಿಗೆ ಒಳಪಡುತ್ತಾರೆ. ಇವರು ಸ್ವಾಭಿಮಾನಿಗಳಾಗಿದ್ದು, ಇನ್ನೊಬ್ಬರ ಅಡಿಆಳಾಗಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಇವರು ಉತ್ತಮ ಸದ್ಗುಣ ಕ್ಷಮಾಗುಣ ಉಳ್ಳವರು ಅಂದರೆ ದೇವಗಣ ಮತ್ತು ತಾಮಸ ಗಣ ಇಬ್ಬರಲ್ಲಿಯೂ ಕೂಡ ಉತ್ತಮವಾದ ಭಾಂದವ್ಯ ಹೊಂದುತ್ತಾರೆ. ಆದರೆ ಕೆಲವೊಮ್ಮೆ ಇವರು ರಾಕ್ಷಸ ಗಣದವರ ಕ್ರೌರ್ಯಕ್ಕೆ ಒಳಗಾಗುತ್ತಾರೆ. ಗುಣವಂತರ ವ್ಯಕ್ತಿತ್ವದವರೊಂದಿಗೆ ಒಳ್ಳೆಯ ವರಾಗಿರುತ್ತಾರೆ.ಇವರಿಗೆ ಅಧಿಕ ಸಿಟ್ಟು ಇರುತ್ತದೆ.

ಇನ್ನು ತಾಮಸ ಗಣ ಅಂದರೆ ರಾಕ್ಷಸಗಣ. ರಾಕ್ಷಸ ಗಣ ಅಂದ ಮಾತ್ರಕ್ಕೆ ಇವರು ರಕ್ಕಸ, ದುಷ್ಟ ಗುಣಗಳನ್ನು ಹೊಂದಿದ್ದಾರೆ ಎಂಧರ್ಥವಲ್ಲಿ ಇವರಲ್ಲಿಯೂ ಕೂಡ ಮಾನವೀಯ ಮೌಲ್ಯಗಳಿವೆ. ಪ್ರೀತಿ, ಪ್ರೇಮ, ವಾತ್ಸಲ್ಯದಂತಹ ಗುಣಗಳನ್ನು ಹೊಂದಿರುತ್ತಾರೆ. ಆದರೆ ಇವರಿಗೆ ಸಿಟ್ಟು ಹೆಚ್ಚಾಗಿರುತ್ತದೆ. ಕಾರಣ ಇವರ ಜೀವನದಲ್ಲಿ ಅನುಭವಿಸಿದ ಮೋಸ, ಅನ್ಯಾಯ, ಶೋಷಣೆಗೆ ಒಳಪಟ್ಟಿದ್ದರಿಂದ ಇವರು ಜೀವನದಲ್ಲಿ ಹೋರಾಟ ನಡೆಸಿ ನ್ಯಾಯ ಪಡೆಯುತ್ತಾರೆ. ಇವರಿಗೆ ಇವರ ನೇರ ನಡವಳಿಕೆ ಮಾತಿನ ಸ್ವಭಾವವೇ ಇವರಿಗೆ ಮುಳುವಾಗುತ್ತದೆ

Leave A Reply

Your email address will not be published.