Health & Fitness Latest

ಪುರುಷರತ್ನ, ಆಯುರ್ವೇದ ಔಷಧಿ ಸಸ್ಯ ಉಪಯೋಗ ತಿಳಿದರೆ ಆಶ್ಚರ್ಯ ಪಡುತ್ತೀರ..!

Ayurvedic medicinal plant treatment method: ಸಿರಂಟಿ ಗಿಡ, ರತ್ನಪುರುಷ, ಚರಾಟ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಸಸ್ಯವನ್ನು ಆಂಗ್ಲ ಭಾಷೆಯಲ್ಲಿ ಹೈಬಾಂಥಸ್‌ ಇನ್ನೆಸ್ಪರ್ಮಸ್‌, ವಯೋಲೆಸಿಯಾ ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ.

ಕಳೆ ಸಸ್ಯದಂತೆ ಕಂಡರೂ ಹೂ ಮತ್ತು ಕಾಯಿಯಿಂದ ಸುಂದರವಾಗಿ ಆಕರ್ಷಿಸಲ್ಪಡುತ್ತದೆ. ಇದು ಹೆಚ್ಚಾಗಿ ಒಣ ಜಮೀನು, ಕುರುಚಲು ಕಾಡಿನಲ್ಲಿ ಹೆಚ್ಚೆಚ್ಚು ಹುಲ್ಲುಗಳು ಬೆಳೆದಿರುವ ಕಡೆ ಅವುಗಳ ಮಧ್ಯೆ ಬೆಳೆದಿರುತ್ತದೆ. ಸುಮಾರು 25 ಸೆಂ.ಮೀ. ಎತ್ತರ, ಐದಾರು ಸೆಂ.ಮೀ. ಉದ್ದನೆಯ ನೀಳವಾದ ಎಲೆಗಳನ್ನು ಹೊಂದಿದ್ದು, ಎಲೆಗಳು ಬೆಳೆದಿರುವ ಕೆಳಭಾಗದಲ್ಲಿಯೇ ನೆರಳೆ ಮಿಶ್ರಿತ ಗುಲಾಬಿ ಬಣ್ಣದ ಚಿಕ್ಕ ಚಿಕ್ಕ ಹೂಗಳಿರುತ್ತವೆ. 5-10 ಎಂಎಂ ಸಣ್ಣ ಕಾಯಿಯಲ್ಲಿ ಐದಾರು ಬೀಜಗಳಿರುತ್ತವೆ.

ಔಷಧೀಯ ಗುಣಧರ್ಮ:ಈ ಸಸ್ಯದ ಭಾಗಗಳಿಂದ ತಯಾರಿಸಿದ ಔಷಧಿಯಿಂದ ಪುರುಷರ ವಿರಾರ‍ಯಣು ವೃದ್ಧಿಸಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ಪುರುಷರ ಶಕ್ತಿ ಬಲವಧÜರ್‍ನೆ ಇಮ್ಮಡಿಗೊಳಿಸಲು ಕಶಾಯವಾಗಿ ಮತ್ತು ಲೈಂಗಿಕ ಶಕ್ತಿಗಾಗಿ ಆಯುರ್ವೇದ ಗಿಡಮೂಲಿಕೆಯಾಗಿದೆ.

ಮಾನಸಿಕ ಖಿನ್ನತೆಗೆ ಒಳಗಾಗಿದ್ದವರಿಗೆ ಪಂಚಕರ್ಮದಲ್ಲಿ ಇದನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಚೇಳು ಕಡಿತಕ್ಕೆ ಇದರ ಕಾಯಿಯನ್ನು ಅರಿದು ಜೇನುತುಪ್ಪದೊಂದಿಗೆ ಮನೆ ಮದ್ದಾಗಿ ಇಂದಿಗೂ ಗ್ರಾಮೀಣ ಭಾಗದಲ್ಲಿ ಬಳಸುತ್ತಾರೆ. ಕಫ ಬಾಧೆ, ವಿಪರೀತ ತಲೆ ನೋವು ಇದ್ದವರಿಗೆ ಈ ಸಸ್ಯದ ಭಾಗದಿಂದ ಕಷಾಯ ಮಾಡಿ ಮೂಗಿನ ಮೂಲಕ ಬೀಡುವುದರಿಂದ ತಲೆ ನೋವು ಶಾಶ್ವತವಾಗಿ ದೂರ ಮಾಡಿಕೊಂಡವರು ಹಳ್ಳಿಗಳಲ್ಲಿ ಕಾಣಬಹುದು. ಸಸ್ಯ ಅಷ್ಟೇ ಅಲ್ಲದೇ ಇದರ ಬೇರಿನಿಂದ ನಂಜು ನಿವಾರಣೆ, ಕಿಡ್ನಿ ಸ್ಟೋನ್‌, ವೇರಿಕೋಸ್‌ ವೆನ್‌ ಸೇರಿದಂತೆ ತಾಯಿ ಎದೆ ಹಾಲು ವೃದ್ಧಿಸಲು ಸಸ್ಯವನ್ನು ಬಳಸುತ್ತಾರೆ.

ಇಷ್ಟೊಂದು ಪ್ರಯೋಜನಕಾರಿಯಾಗಿರುವ ಸಸ್ಯ ಪರುಷರಿಗೆ ಹೆಚ್ಚು ಪರಿಣಾಮ ಬಿರುವುದರಿಂದ ಇದನ್ನು ಪುರುಷ ರತ್ನ ಎಂಬ ನಾಮಾಂಕಿತದಿಂದ ಕರೆಸಿಕೊಳ್ಳುತ್ತದೆ. ಇಂತಹ ಅನೇಕ ಸಣ್ಣ ಪುಟ್ಟ ಕಾಯಿಲೆಗೆ ರಾಮಭಾಣವಾಗಿರುವ ಪರುಷರತ್ನ ಸಸ್ಯವನ್ನು ಉಳಿಸುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕಾಗಿದೆ.

ಅಷ್ಟೇ ಅಲ್ಲದೇ ಮೃದು ಮಣ್ಣು ಇರುವ ಕಡೆ ಹುಲ್ಲಿನೊಂದಿಗೆ ಬೆಳೆಯುವ ಸಸ್ಯವನ್ನು ಅರಣ್ಯ ಭಾಗದಲ್ಲಿ ಇಲಾಖೆಯವರು ಬೇಸಿಗೆಯಲ್ಲಿ ಫೈಯರ್‌ ಲೈನ್‌ ಮಾಡುವಾಗ ಜಾಗರೂಕತೆಯಿಂದ ನೋಡಿಕೊಂಡು ಔಷಧಿ ಸಸ್ಯ ಸಂರಕ್ಷ ಣೆಗೆ ಮುಂದಾಗಬೇಕಾಗಿದೆ. ಇನ್ನೂ ಕೆಲವರು ಇದರ ಬಳಕೆಯನ್ನು ಅಜಮಾಸಿನ ಲೆಕ್ಕದಲ್ಲಿ ಕಷಾಯ ಮಾಡದೇ ನುರಿತ ಆಯುರ್ವೇದ ವೈದ್ಯರ, ನಾಟಿ ವೈದ್ಯರ ಸಲಹೆ ಪಡೆದುಕೊಂಡು ಬಳಕೆ ಮಾಡಿದರೆ ಉತ್ತಮ.

Leave a Reply

Your email address will not be published. Required fields are marked *