ಪೊರಕೆಯ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮೀದೇವಿಯೂ ಒಲಿಯುತ್ತಾಳೆ ಬೇಗನೆ ಶ್ರೀಮಂತರಾಗುವಿರಿ!

0 106

ಪೊರಕೆಯು ಎಲ್ಲರ ಮನೆಯಲ್ಲೂ ಸಹ ಇರುತ್ತದೆ. ಇದು ಮನೆಯಲ್ಲಿ ಇರುವಂತಹ ಮಲಿನತೆ, ಗಲೀಜನ್ನು ಆಚೆ ತೆಗೆದುಹಾಕುತ್ತದೆ. ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾರೆ. ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ರೂಪ ಎಂದು ತಿಳಿಯಲಾಗಿದೆ. ಪೊರಕೆಯನ್ನು ಸರಿಯಾಗಿ ಬಳಸಿ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದಾಗಿದೆ.

ಒಂದು ವೇಳೆ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೆಂದರೆ ಜಗಳಗಳು ಹೆಚ್ಚಾಗುತ್ತಿದ್ದರೆ ನಕಾರಾತ್ಮಕ ಶಕ್ತಿಯ ವಾತಾವರಣ ಕೂಡಿ ಕೊಂಡಿದ್ದರೆ ಇವುಗಳಿಗೆ ಪರಿಹಾರ ಕಂಡು ಕೊಳ್ಳುವುದಾದರೆ ಈ ಪೊರಕೆ ಸರಿಯಾದ ಬಳಕೆಯಿಂದ ಶ್ರೀಮಂತರಾಗಬಹುದು. ಗೊತ್ತಿಲ್ಲದೆ ಮಾಡುವ ಕೆಲವು ತಪ್ಪುಗಳಿಗೆ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನ ಸಂಪತ್ತು, ವೈಭವ, ಸುಖ ಶಾಂತಿ ಎಲ್ಲವು ನೆಲೆಸುತ್ತದೆ.

1, ಪೊರಕೆಯನ್ನು ಯಾವತ್ತಿಗೂ ನೀವು ತೆರೆದ ಸ್ಥಾನದಲ್ಲಿ ಇಡಬಾರದು. ಯಾವ ರೀತಿ ಮನೆಯಲ್ಲಿ ಹಣ ಸಂಪತ್ತನ್ನು ಮುಚ್ಚಿಡುತ್ತಿವೊ ಅದೇ ರೀತಿಯಾಗಿ ಪೊರಕೆಯನ್ನು ಮುಚ್ಚಿ ಇಡಬೇಕು. ಆಚೆ ಜನರ ದೃಷ್ಟಿ ಇದರ ಮೇಲೆ ಬೀಳದಂತೆ ನೋಡಿಕೊಳ್ಳಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಂಪತ್ತು ನಿಮ್ಮ ಮನೆಯಲ್ಲಿ ಇರುತ್ತದೆ. ಆಚೆ ಇರುವ ಕೆಟ್ಟದೃಷ್ಟಿ ಗಳು ನಿಮಗೆ ಹಾನಿ ಮಾಡಲು ಸಾಧ್ಯ ಆಗುವುದಿಲ್ಲ.

2, ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ವಾತಾವರಣ, ಜಗಳಗಳು ಹೆಚ್ಚಗುತ್ತಿದ್ದಾರೆ ನಿಮಗೆ ಯಾರೋ ಕೆಟ್ಟದ್ದನ್ನು ಮಾಡಿದ್ದಾರೆ ಎಂದು ನಿಮಗೆ ಅನಿಸಿದರೆ. ರಾತ್ರಿ ವೇಳೆ ಪೊರಕೆಯನ್ನು ಮನೆಯ ಮುಖ್ಯದ್ವಾರದ ಬಳಿ ಇಡಬೇಕು. ಅಂದರೆ ಒಳಭಾಗದಲ್ಲಿ ಇಟ್ಟರೆ ನಕರಾತ್ಮಕ ಶಕ್ತಿ ಒಳಗೆ ಪ್ರವೇಶ ಮಾಡುವುದಿಲ್ಲ.

3, ಮನೆಯಲ್ಲಿರುವ ಪೊರಕೆಯನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು. ಹಳೆಯದಾದ ಪೊರಕೆಯನ್ನು ಉಪಯೋಗಿಸಿದರೆ ನಿಮ್ಮ ಮನೆಯ ಸ್ಥಿತಿ ಕೆಡಬಹುದು. ಪೊರಕೆಯನ್ನು ಶನಿವಾರದ ದಿನ ಖರೀದಿ ಮಾಡಬೇಕು ಅಥವಾ ಶನಿವಾರ ದಿನದಂದು ಹೊಸ ಪೊರಕೆಯನ್ನು ಬಳಸುವುದಕ್ಕೆ ಶುರುಮಾಡಬೇಕು.ಈ ರೀತಿ ಮಾಡುವುದು ತುಂಬಾ ಒಳ್ಳೆಯದು.

4, ಕಸಗುಡಿಸುವ ಸರಿಯಾದ ಸಮಯ ಯಾವುದು ಎಂದರೆ ಪೊರಕೆಯನ್ನು ಮುಂಜಾನೆ ಸಮಯದಲ್ಲಿ ಬಳಸಬೇಕು. ಸೂರ್ಯಸ್ತ ಆದನಂತರ ಕಸವನ್ನು ಗುಡಿಸಬಾರದು.ಇಲ್ಲವಾದರೆ ತಾಯಿ ಲಕ್ಷ್ಮೀದೇವಿ ಮನೆಯನ್ನು ಬಿಟ್ಟು ಹೋಗುತ್ತಾರೆ. ಒಂದು ವೇಳೆ ಮನೆಯಲ್ಲಿರುವ ವ್ಯಕ್ತಿಗಳು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಮನೆಯಿಂದ ಆಚೆ ಹೋಗುವುದಾದರೆ ಅವರು ಹೋದ ತಕ್ಷಣ ಕಸವನ್ನು ಗುಡಿಸಬಾರದು. ಇಲ್ಲವಾದರೆ ಶುಭಕಾರ್ಯದಲ್ಲಿ ಅಡಚಣೆಗಳು ಉಂಟಾಗುತ್ತದೆ. ಜೊತೆಗೆ ಪೊರಕೆಯನ್ನು ನಿಲ್ಲಿಸಿ ಇಡಬಾರದು.ಇಲ್ಲವಾದರೆ ಇದರಿಂದ ನೆಗೆಟಿವಿಟಿ ಮನೆಯಲ್ಲಿ ಹರಡುತ್ತವೆ.

5, ಪೊರಕೆಯನ್ನು ಯಾವತ್ತಿಗೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇಡಬೇಕು.ಊಟ ಮಾಡುವ ಸ್ಥಳ ಹಾಗೂ ಅಡುಗೆ ಮಾಡುವ ಸ್ಥಳ ಪಶ್ಚಿಮ ದಿಕ್ಕಿನಲ್ಲಿ ಇದ್ದಾರೆ ಪೊರಕೆಯನ್ನು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು.ಅಡುಗೆ ಮನೆಯಲ್ಲಿ ಊಟ ಮಾಡುವ ವಸ್ತುಗಳಿಂದ ಪೊರಕೆಯನ್ನು ದೂರ ಇಡಬೇಕು.ಇಲ್ಲವಾದರೆ ಅನ್ನಕ್ಕೆ ಅವಮಾನ ಆಗುತ್ತದೆ.ಇದ್ದರಿಂದ ತಾಯಿ ಅನ್ನಪೂರ್ಣೇಶ್ವರಿ ಕೂಡ ಸಿಟ್ಟಾಗುತ್ತಾರೆ.

6, ಯಾವತ್ತಿಗೂ ಪೊರಕೆಯನ್ನು ಉದರಿ ಪಡೆಯಬೇಡಿ ಅಥವಾ ಬೇರೆಯವರ ಪೊರಕೆ ತೆಗೆದುಕೊಂಡು ನಿಮ್ಮ ಮನೆಯನ್ನು ಕಸ ಗುಡಿಸುವುದನ್ನು ಮಾಡಬೇಡಿ.ಈ ರೀತಿ ಮಾಡಿದರೆ ಇನ್ನೊಬ್ಬರ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಗೆ ಬರುತ್ತವೆ.ಹಾಗಾಗಿ ನಿಮ್ಮ ಮನೆಯ ಪೊರಕೆಯನ್ನು ನೀವೇ ಸ್ವತಃ ಖರೀದಿ ಮಾಡಬೇಕು ಮತ್ತು ಇನ್ನೊಬ್ಬರಿಗೆ ಬಳಸಲು ಕೊಡಬಾರದು.ಒಂದು ವೇಳೆ ಬೇರೆಯವರು ಪೊರಕೆ ಖರೀದಿ ಮಾಡಿಕೊಟ್ಟರು ಸಹ ತೆಗೆದುಕೊಳ್ಳಬಾರದು.ಯಾವುದೇ ಕಾರಣಕ್ಕೂ ನಿಮ್ಮ ಮನೆಗೆ ಬೇಕಾಗುವ ಪೊರಕೆಯನ್ನು ಖರೀದಿ ಮಾಡಿ ತೆಗೆದುಕೊಂಡು ಹೋಗಬೇಕು.

Leave A Reply

Your email address will not be published.