Palmistry :ನಿಮ್ಮ ಕೈಯಲ್ಲಿ ಮೀನಿನ ಚಿನ್ಹೆ ಇದ್ದರೆ ಈಗಲೇ ಮಾಹಿತಿ ನೋಡಿ!
Palmistry :ನಮ್ಮ ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಹಸ್ತವನ್ನು ನೋಡಿ, ಹಸ್ತದಲ್ಲಿರುವ ರೇಖೆಗಳು ಮತ್ತು ಚಿಹ್ನೆಗಳನ್ನು ನೋಡಿ ಆ ವ್ಯಕ್ತಿಯ ಭವಿಷ್ಯವನ್ನು ಮತ್ತು ಆ ವ್ಯಕ್ತಿಯ ಜೀವನದಲ್ಲಿ ಆಗಬಹುದಾದ ಕಷ್ಟ ನಷ್ಟಗಳ ಲಾಭ ಅದೃಷ್ಟ ಇವುಗಳ ಬಗ್ಗೆ ನಿಖರವಾಗಿ ತಿಳಿಯಬಹುದು ಎಂದು ನಮ್ಮ ಶಾಸ್ತ್ರವು ಹೇಳುತ್ತದೆ. ಅದೇ ರೀತಿಯಾಗಿ ವ್ಯಕ್ತಿಯ ಹಸ್ತದಲ್ಲಿ ಈ ರೀತಿಯ ಚಿನ್ನೆಗಳು ಇದ್ದರೆ ಅವು ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ, ಹಿಂದಿ ಚಿಹ್ನೆಗಳು ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯ ಅದೃಷ್ಟವನ್ನು ತಂದುಕೊಡುತ್ತವೆ ಇದು ಉತ್ತಮ ಜೀವನಕ್ಕೆ ನೆರವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ವ್ಯಕ್ತಿಯ ಅಂಗೈಯಲ್ಲಿರುವ ಯಾವ ರೀತಿಯ ರೇಖೆಗಳು ಅದೃಷ್ಟವನ್ನು ತಂದುಕೊಡುವಂತಹ ರೇಖೆಗಳಾಗಿವೆ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ವ್ಯಕ್ತಿಯ ಅಂಗೈಯಲ್ಲಿ ಮೀನಿನ ಚಿಹ್ನೆ ಏನಾದರೂ ಇದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಅಂಗೈನ ರೇಖೆಯಲ್ಲಿ ಮೀನಿನ ಚಿಹ್ನೆ
ಈ ಅದೃಷ್ಟದ ಚಿಹ್ನೆಯನ್ನು ಹೊಂದಿದ್ದರೆ ಅವನು ಬಹಳ ಅದೃಷ್ಟಶಾಲಿ ಎಂದು ಹೇಳಲಾಗುತ್ತದೆ, ಅವನು ಜೀವನದಲ್ಲಿ ಕೈಯಲ್ಲಿ ಜೀವನವನ್ನು ನಡೆಸುತ್ತಾರೆ, ಅಷ್ಟೇ ಅಲ್ಲದೆ ಈ ರೀತಿಯ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗೆ ದೀರ್ಘಾಯುಷ್ಯದ ಭಾಗ್ಯವು ಕೂಡ ಇರುತ್ತದೆ, ಇಂತಹ ಜನರು ತಮ್ಮ ಜೀವನದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾರೆ ಮತ್ತು ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಇನ್ನು ಹಸ್ತಸಾಮುದ್ರಿಕ ಪ್ರಕಾರ ಅಂಗೈಯಲ್ಲಿ ತ್ರಿಶೂಲದ ಗುರುತು ಇರುವುದು ತುಂಬಾ ಅದೃಷ್ಟವೆಂದು ಹೇಳಲಾಗಿದೆ, ತನ್ನ ಅಂಗೈಯಲ್ಲಿ ಹೃದಯ ರೇಖೆಯ ಕೊನೆಯಲ್ಲಿ ಗುರು ಪರ್ವತದ ಬಳಿ ತ್ರಿಶೂಲದ ಗುರುತು ಹೊಂದಿರುವ ವ್ಯಕ್ತಿಗೆ ಸಮಾಜದಲ್ಲಿ ಪ್ರತಿಷ್ಠೆ ಮತ್ತು ಗೌರವ ಸಿಗುತ್ತದೆ, ಅಷ್ಟೇ ಅಲ್ಲದೆ ತ್ರಿಶೂಲದ ಚಿಹ್ನೆ ಸೂರ್ಯ ರೇಖೆಯಲ್ಲಿ ಇದ್ದರೆ ವ್ಯಕ್ತಿಯು ಸರ್ಕಾರಿ ವಲಯದಲ್ಲಿ ಉನ್ನತ ಹುದ್ದೆಯನ್ನು ಪಡೆಯುತ್ತಾನೆ, ಅಂತವರು ಅದೃಷ್ಟವಂತರು ಮತ್ತು ಆರ್ಥಿಕವಾಗಿ ಸದೃಢರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಯಾವ ವ್ಯಕ್ತಿಯೂ ತನ್ನ ಅಂಗೈಯಲ್ಲಿ ಬಿಲ್ಲು, ಚಕ್ರ, ವಜ್ರ ಅಥವಾ ಚತುರ್ಭುಜದ ಗುರುತುಗಳನ್ನು
ಹೊಂದಿರುತ್ತಾರೋ, ಅಂತಹ ವ್ಯಕ್ತಿಗಳ ಮೇಲೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಯಾವಾಗಲೂ ಇರುತ್ತದೆ ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಅಂತಹ ವ್ಯಕ್ತಿಗೆ ಬಡವನ ಎಂಬುವುದು ಬರುವುದಿಲ್ಲ, ಇಂಥ ವ್ಯಕ್ತಿಗಳು ಪ್ರತಿನಿತ್ಯ ಲಕ್ಷ್ಮಿದೇವಿಯನ್ನು ಆರಾಧಿಸುವುದರಿಂದ ಇನ್ನು ಉತ್ತಮವಾದ ಫಲಗಳನ್ನು ಜೀವನದಲ್ಲಿ ಪಡೆಯಬಹುದು ಎಂದು ಹೇಳಲಾಗುತ್ತದೆ. ಇನ್ನು ಅಂಗೈ ಮಧ್ಯದಲ್ಲಿ ಕುದುರೆಯ ಆಕಾರ ಅಥವಾ ಸ್ತಂಭದಂತಹ ಗುರುತು ಇದ್ದರೆ ಅಂತಹ ವ್ಯಕ್ತಿಯು ಜೀವನದಲ್ಲಿ ರಹಸ್ಯ ಆನಂದವನ್ನು ಪಡೆಯುತ್ತಾನೆ, ಅಷೂ ಅಲ್ಲದೆ ಆ ವ್ಯಕ್ತಿಯು ಕಷ್ಟಪಟ್ಟು ದುಡಿದು ಶ್ರೀಮಂತನಾತ್ತಾನೆ, ಇಂತಹ ಜನರು ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ, ಇಂತಹ ವ್ಯಕ್ತಿಗಳು ಕಡಿಮೆ ಶ್ರಮವನ್ನು ಪಟ್ಟು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಹಸ್ತದಲ್ಲಿ . ರೇಖೆಗಳು ಇದ್ದರೆ ಅಂತಹವರು ಹುಟ್ಟಿನಿಂದಲೇ ಅದೃಷ್ಟವನ್ನು ಪಡೆದುಕೊಂಡು ಬಂದಿರುತ್ತಾರೆ ಎಂದು ಹೇಳಲಾಗುತ್ತದೆ.
Palmistry