The color you like reveals your personality:ನಿಮಗೆ ಈ ವಿಷಯ ಗೊತ್ತೇ? ನಿಮ್ಮ ನೆಚ್ಚಿನ ಬಣ್ಣ ನಿಮ್ಮ ಗುಣವನ್ನು ಹೇಳುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಅಂದ್ರೆ ತುಂಬಾ ಇಷ್ಟ. ಆದರೆ ಒಂದು ನಿರ್ದಿಷ್ಟ ಬಣ್ಣದ ಮೇಲಿನ ಮೋಹ ನಮ್ಮ ಗುಣ ಸ್ವಭಾವವನ್ನು ಹೇಳಬಲ್ಲದು.ಇದು ಸತ್ಯ, ನಂಬಲೇಬೇಕು. ಒಬ್ಬ ವ್ಯಕ್ತಿ ಯಾವ ಬಣ್ಣವನ್ನು ಇಷ್ಟಪಡುತ್ತಾನೆ ಅನ್ನೋದರ ಮೇಲೆ ಆತನ ಸ್ವಭಾವ ಹೇಗೆ ಅನ್ನೋದನ್ನ ಹೇಳಬಹುದಂತೆ. ಹೀಗೆ ಒಂದೊಂದು ಬಣ್ಣಕ್ಕೆ ಒಂದೊಂದು ಅರ್ಥ ಇರುತ್ತೆ. ಅಷ್ಟಕ್ಕೂ ನಿಮ್ಮಿಷ್ಟದ ಬಣ್ಣ ಯಾವುದು?
ಬಣ್ಣ ಮನುಷ್ಯನ ಅಭಿರುಚಿಗೆ ಬಿಟ್ಟಿದ್ದು. ಆದರೆ ಆ ಅಭಿರುಚಿಯಿಂದಲೇ ಮನುಷ್ಯನ ಸ್ವಭಾವ ತಿಳಿಯುವುದಕ್ಕೆ ಸಾಧ್ಯ. ಯಾವ ಬಣ್ಣ ನಿಮ್ಮ ಗುಣವನ್ನು ಹೇಗೆ ವಿವರಿಸುತ್ತದೆ ಅನ್ನೋದನ್ನ ತಿಳಿಯೋಣ. ಕಪ್ಪು ಬಣ್ಣ ಇಷ್ಟಪಡುವವರು ಹುಟ್ಟು ನಾಯಕರು ಆಗಿರ್ತಾರಂತೆ ಅವರು ಎಲ್ಲೇ ಹೋಗಲಿ ನಾಯಕರಾಗಿ ಇರ್ತಾರೆ. ಅಷ್ಟೇ ಅಲ್ಲ, ಈ ಬಣ್ಣವನ್ನು ಇಷ್ಟಪಡುವವರು ತಮ್ಮ ಬುದ್ಧಿಯಿಂದ ಮಾತನಾಡುತ್ತಾರೆಯೇ ಹೊರತು ಹೃದಯದಿಂದ ಅಲ್ಲ. ಕಪ್ಪು ಬಣ್ಣ ಇಷ್ಟಪಡುವವರು ಎಲ್ಲರೊಂದಿಗೂ ಅತ್ಯಂತ ಆತ್ಮಿಯವಾಗಿ ಬರುತ್ತಾರೆ ವಿಶಾಲ ಮನೋಭಾವ ಉಳ್ಳವರಾಗಿರುತ್ತಾರೆ. ಜೀವನವನ್ನು ಯಾವಾಗಲೂ ಪ್ರಾಕ್ಟಿಕಲ್ಆಗಿ ತಗೋತಾರೆ ಆದ್ರೆ ಕೆಲವೊಮ್ಮೆ ನಿಮ್ಮ ಈ ಮನೋ ಭಾವನೆ ನಿಮಗೆ ಉಲ್ಟಾ ಹೊಡೆಯುವ ಸಂಭವನು ಹೆಚ್ಚು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ನಿಮಗೆ ಇಷ್ಟಇಲ್ಲ. ಅದನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವುದು ನಿಮ್ಮಸ್ವಭಾವ.
ಕೆಂಪು ಬಣ್ಣ ಇಷ್ಟಪಡುವವರು ತುಂಬಾ ಬುದ್ದಿವಂತರಾಗಿರ್ತಾರಂತೆ. ನಿಮಗೆ ಯಾವುದೇ ಹೊಸ ಹೊಸ ಕೆಲಸ ಮಾಡುವುದರಲ್ಲಿ ಆಸಕ್ತಿ ಇರುತ್ತೆ. ಪ್ರವಾಸ ಅಂದ್ರೆ ನಿಮಗೆ ಎಲ್ಲಿಲ್ಲದ ಇಷ್ಟ. ಅಷ್ಟೇ ಅಲ್ಲ, ನೀವೊಬ್ಬ ವಿಧೇಯ ಗೆಳೆಯರು ಸಹ ನಿಮಗೆ ಹೊಸ ಹೊಸ ವಿಭಿನ್ನ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಅಂದ್ರೆ ತುಂಬಾ ಇಷ್ಟ. ನೀವೊಬ್ಬ ಕನಸುಗಾರ ಹಾಗೆ ಕನಸುಗಾರ ಅಂದ್ರೆ ನಿಮಗೆ ಬಹಳ ಇಷ್ಟ.
ಇನ್ನು ಹಳದಿ ಬಣ್ಣವನ್ನು ಇಷ್ಟಪಡುವವರು ತುಂಬಾ ಮೃದು ಸ್ವಭಾವದವರು ಹಾಗೆ ಒಳ್ಳೆ ಹೃದಯ ಇರುವವರು. ಜೊತೆಗೆ ತಮ್ಮ ಜೊತೆ ಇರುವ ಜನರ ಬಗ್ಗೆ ಅತೀವ ಕಾಳಜಿಯನ್ನು ತೋರಿಸುತ್ತಾರೆ. ನಿಮ್ಮ ಕ್ರಿಯಾಶೀಲತೆಗೆ ಎಲ್ಲೆ ಇಲ್ಲ. ನಿಮ್ಮ ಯೋಜನೆಗಳನ್ನ ಕಾರ್ಯರೂಪಕ್ಕೆ ತರೋದು ಹೇಗೆ ಅನ್ನೋದು ನಿಮಗೆ ಚೆನ್ನಾಗಿ ಗೊತ್ತಿರುತ್ತೆ. ನೀವು ಯಾವಾಗಲೂ ಭವಿಷ್ಯದ ಬಗ್ಗೆ ಯೋಚನೆ ಮಾಡೋ ವ್ಯಕ್ತಿತ್ವ ನಿಮ್ಮದು. ನಾಚಿಕೆಯ ಸ್ವಭಾವ, ನಿಮ್ಮ ಮನಸ್ಸಿನಲ್ಲಿರುವ ಎಲ್ಲವನ್ನು ನೀವು ಹೇಳೋಕೆ ಇಷ್ಟ ಪಡೋದಿಲ್ಲ.
ಗುಲಾಬಿ ಬಣ್ಣವನ್ನು ಇಷ್ಟಪಡುವವರು ಯಾವತ್ತಿಗೂ ಬದುಕಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ. ನೀವು ಯಾವಾಗಲೂ ಆಶಾವಾದಿಗಳು ದ್ವೇಷವನ್ನು ಇಷ್ಟಪಡಲ್ಲ. ಉತ್ತಮ ಗೆಳೆಯರನ್ನು ಹೊಂದಿರುವರಾಗಿರುತ್ತಾರೆ. ಹಾಗೆ ಎಲ್ಲಕಡೆಳಲ್ಲೂ ಸ್ಥಿರತೆಯನ್ನು ಬಯಸುವರು ನಿಮ್ಮದು ಅತ್ಯಂತ ಚಟುವಟಿಕೆಯ ಕ್ರಿಯಾಶೀಲ ವ್ಯಕ್ತಿತ್ವ, ಸದಾ ಸ್ವಾವಲಂಬಿಯಾಗಿ ಬದುಕೋಕೆ ಇಷ್ಟಪಡುವ ನೀವು ನಿಮ್ಮ ಸುತ್ತ ಇರುವ ಜನರನ್ನು ತುಂಬಾ ಪ್ರೀತಿಸುತ್ತೀರ.
ಇನ್ನು ಕಿತ್ತಳೆ ಬಣ್ಣ ಇಷ್ಟಪಡುವವರು ಪಾತರಗಿತ್ತಿಯಂತೆ. ಅವರಿಗೆ ಸಾಮಾಜಿಕ ಬದುಕಂದ್ರೆ ಇಷ್ಟ. ಅದು ಮಾತ್ರವಲ್ಲ ಹೆಚ್ಚು ಜನರೊಂದಿಗೆ ಬೆರೆಯುವುದು ಅಂದ್ರೆ ತುಂಬಾ ಪ್ರೀತಿ. ಈ ಬಣ್ಣ ಇಷ್ಟಪಡುವವರು ಹಳದಿ ಬಣ್ಣ ಇಷ್ಟಪಡುವರು ಗುಣದಲ್ಲಿ ಸಾಕಷ್ಟು ಹೋಲಿಕೆ ಇರುತ್ತೆ. ನೀವು ಮತ್ತೊಬ್ಬರ ಬಗ್ಗೆ ತುಂಬಾ ಕಾಳಜಿ ತೋರಿಸ್ತೀರ. ನೀವು ನಾಚಿಕೆಯ ಸ್ವಭಾವದವರು ಕೂಡ ಆದರೆ ಯಾವಾಗಲೂ ಎಲ್ಲರೊಂದಿಗೂ ಬೆರೆಯಕ್ಕೆ ನೀವು ಇಷ್ಟಪಡುವುದರಿಂದ ನಿಮಗೆ ಸಾಕಷ್ಟು ಸ್ನೇಹಿತರು ಸಿಗ್ತಾರೆ. ಆದ್ರೆ ನೀವು ನಿಮ್ಮ ಒಳಗಿನ ನೋವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳ .ಕ್ಕೆ ಯಾವತ್ತೂ ಇಷ್ಟಪಡುವುದಿಲ್ಲ.
ಬಿಳಿ ಬಣ್ಣ ಇಷ್ಟಪಡುವವರದು ನಿಗೂಢ ವ್ಯಕ್ತಿತ್ವ. ನೀವು ಎಂದಿಗೂ ಸ್ವತಂತ್ರವಾಗಿ ಬದುಕುವ ಇಷ್ಟಪಡುವವರು. ನಿರ್ಭೀತ ವ್ಯಕ್ತಿತ್ವದವರು. ಕೆಲವೊಮ್ಮೆ ನಿಮ್ಮದು ತೀರಾ ಬೇಜವಾಬ್ದಾರಿ, ವ್ಯಕ್ತಿತ್ವ ಅನ್ನಿಸಬಹುದು. ನಿಮಗೆ ಅನ್ನಿಸಿದ್ದನ್ನು ಮಾಡಿಯೇ ತೀರುವ ವ್ಯಕ್ತಿತ್ವ ನಿಮ್ಮದು. ಇದು ನಿಮ್ಮನ್ನು ಇನ್ನಷ್ಟು ಬಲಿಷ್ಠ ಗೊಳಿಸುತ್ತದೆ. ಇದು ಹಸಿರು ಬಣ್ಣವನ್ನು ಇಷ್ಟಪಡುವವರು ಸಾಹಸೀ ಮನೋಭಾವದವರು ಯಾವಾಗಲೂ ಬದುಕಿನಲ್ಲಿ ಥ್ರಿಲ್ ಆಗಿರಬೇಕು ಅನ್ನೋ ಮನೋಭಾವ ನಿಮ್ಮದು. ನೀವು ನಿಮ್ಮ ಬಗ್ಗೆ ಕೊಚ್ಚಿಕೊಳ್ಳುವುದು ಸ್ವಲ್ಪ ಜಾಸ್ತಿ. ಇದು ಕೆಲವರಿಗೆ ಇಷ್ಟವಾಗದೆ ಇರಬಹುದು. ನೀವು ಎಲ್ಲ ಜನರೊಂದಿಗೂ ಬೆರೆಯತೀರಾ ಆದಮ್ಯ ಉತ್ಸಾಹಿಗಳು ಹಾಗೆ ಜನರನ್ನ ರಂಜಿಸುವದಲ್ಲಿ ನಿಮಗೆ ಎಲ್ಲಿಲ್ಲದ ಆಸಕ್ತಿ.
ನೇರಳೆ ಬಣ್ಣವನ್ನು ಇಷ್ಟಪಡುವವರು ಗಂಭೀರ ಸ್ವಭಾವದವರು ಯಾವ ವಿಷಯಕ್ಕೂ ಅವರು ವೇಗಕ್ಕೆ ಒಳಗಾಗುವವರಲ್ಲ. ಯಾವುದೇ ಸನ್ನಿವೇಶವನ್ನೂ ಸಮಚಿತ್ತದಿಂದ ಎದುರಿಸುತ್ತಾರೆ. ಮನಸ್ಸಲ್ಲಿ ಸಾಕಷ್ಟು ಭಾವನೆಗಳಿದ್ದರೂ ಅದನ್ನು ಹೊರಹಾಕುವುದು ಅವರಿಗೆ ಇಷ್ಟ ಇಲ್ಲ. ಬದುಕಿನ ತೀರಾ ಗಂಭೀರವಾಗಿ ನೋಡುವವರು ಹಾಗೆ ಪ್ರತಿಯೊಂದರಲ್ಲೂ ಪರಿಪೂರ್ಣತೆಯನ್ನು ಬಯಸುವರು.
ಕಂದು ಬಣ್ಣವನ್ನು ಇಷ್ಟಪಡುವವರು ಡೌನ್ ಟು ಅರ್ಥ್ ಸ್ವಭಾವದವರು ತುಂಬಾ ಸರಳ ಕೂಡ ಜೊತೆಗೆ ಪರಿಪೂರ್ಣತೆಯನ್ನು ಬಯಸುತ್ತಾರೆ. ನೀವು ಮತ್ತೊಬ್ಬರಿಂದ ನಿರೀಕ್ಷಿಸುವುದು ಜಾಸ್ತಿ, ಅದೇ ನಿಮ್ಮ ದೌರ್ಬಲ್ಯ ಕೂಡ. ನಿಮ್ಮ ನಿರೀಕ್ಷೆಯಂತೆ ಆಗದಿದ್ದಾಗ ನೀವು ಬೇಸರ ಗೊಳ್ಳುತ್ತೀರಿ, ನೀವು ಸುಭದ್ರವಾದ ಜೀವನ ಪಡೆದು ಯಾವ ಕೊರತೆಯೂ ಇಲ್ಲದಂತೆ ಬದುಕುತ್ತಿದ್ದರೂ ಮನಸ್ಸಿನಲ್ಲಿ ಆಗಾಗ ಖಿನ್ನತೆಯನ್ನು ಅನುಭವಿಸುತ್ತಿರ.