ಬೆಲ್ಲ ತಿನ್ನುವ ಪ್ರತಿ ಕುಟುಂಬವು ಈ ವಿಡಿಯೋ ನೋಡಿದರೆ ಶಾಕ್ ಆಗ್ತೀರಾ.

0 3,216

Jaggery benefits in Kannada:ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು ಅಂದರೆ ಸಣ್ಣ ಪುಟ್ಟ ಕಾಯಿಲೆಗಳನ್ನು ನಿಯಂತ್ರಿಸಲು ಅಡುಗೆ ಮನೆಯಲ್ಲೇ ಮದ್ದು ಇರುತ್ತದೆ ಎಂದು ನಮ್ಮ ಹಿರಿಯರು ಅನಾದಿ ಕಾಲದಿಂದಲೂ ಹೇಳುತ್ತಾ ಬರುತ್ತಿದ್ದಾರೆ. ನಿಯಮಿತವಾಗಿ ಬೆಲ್ಲ ತಿಂತಾಇದ್ರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಲ್ಲ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ದೇಹಕ್ಕೆ ಬಲವನ್ನು ಮತ್ತು ರಕ್ತ ಶುದ್ಧಿಯಾಗುತ್ತದೆ.

ಬೆಲ್ಲ ದೇಹವನ್ನು ನೈಸರ್ಗಿಕವಾಗಿ ಶುದ್ಧಿ ಮಾಡುವ ಪದಾರ್ಥ. ಬೆಲ್ಲದ ಸೇವನೆಯಿಂದ ಯಕೃತ್’ನ ಕೆಲಸದ ಹೊರೆಯನ್ನು ತಗ್ಗಿಸುತ್ತದೆ ಮತ್ತು ದೇಹದಿಂದ ಹಾನಿಕಾರಕ ಜೀವಾಣು ಹೊರಹಾಕುವ ಮೂಲಕ ಅಂಗವನ್ನ ವಿಷ ರಹಿತವಾಗಿ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಸೆಲೆನಿಯಮ್ ಸಮೃದ್ಧವಾಗಿರುತ್ತವೆ. ಇದು ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ರಕ್ತ ಹೀನತೆಯನ್ನು ಕೂಡ ತಡೆಯುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿರುವ ಕಾರಣ ರಕ್ತಹೀನತೆಯನ್ನು ತಡೆಗಟ್ಟಬಹುದು.

ಮುಖದ ನರಗಳು ವೀಕ್ ಆದಾಗ ಏನರ್ಥ!

ಗರ್ಭಿಣಿಯರಿಗೆ ಅತ್ಯಂತ ಒಳ್ಳೆಯ ದಿವ್ಯ ಔಷಧ ಬೆಲ್ಲ. ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡಬಲ್ಲದು. ರಕ್ತದ ಒತ್ತಡ ನಿಯಂತ್ರಣ ಮಾಡುತ್ತದೆ. ಬೆಲ್ಲದಲ್ಲಿ ಪೊಟ್ಯಾಶಿಯಮ್ ಮತ್ತು ಸೋಡಿಯಮ್ ಇರೋದ್ರಿಂದ ದೇಹದಲ್ಲಿ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹದ ರಕ್ತದ ಒತ್ತಡ ಮಟ್ಟ ಸಹಜವಾಗಿರುತ್ತದೆ. ಇನ್ನು ಕೀಲುನೋವುಗಳ ನಿವಾರಣೆಗೆ ಕೂಡ ಬೆಲ್ಲ ರಾಮಬಾಣ. ಶುಂಠಿಯೊಂದಿಗೆ ಬೆಲ್ಲ ಸೇರಿಸಿ ತಿಂದರೆ ಅಥವಾ ಹಾಲಿನೊಂದಿಗೆ ಒಂದು ತುಂಡು ಬೆಲ್ಲ ಸೇರಿಸಿ ಕುಡಿದರೆ ಕೀಲು ನೋವು ವಾಸಿಯಾಗುತ್ತೆ. ಮೂಳೆಗಳು ಗಟ್ಟಿಯಾಗುತ್ತವೆ. ಅಷ್ಟೇ ಅಲ್ಲ, ಚರ್ಮದ ಕಾಂತಿಗೂ ಅತ್ಯುತ್ತಮವಾದಂತಹ ಪದಾರ್ಥ ಬೆಲ್ಲ.

ಬೆಲ್ಲದಲ್ಲಿ ಹಲವು ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಮೊಡವೆಗಳು ನಿಯಂತ್ರಣಕ್ಕೆ ಬಂದು ಚರ್ಮವನ್ನ ದೋಷ ರಹಿತವಾಗಿ ಮಾಡಲು ಸಹಾಯ ಮಾಡುತ್ತದೆ. ಬೆಲ್ಲ, ಚರ್ಮದ ಸುಕ್ಕುಗಟ್ಟುವುದನ್ನು ಮತ್ತು ಕಪ್ಪು ಚುಕ್ಕಿಗಳನ್ನು ಸಹ ನಿಯಂತ್ರಿಸುತ್ತದೆ. ಇನ್ನು ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಯನ್ನ ಇದು ನಿಯಂತ್ರಿಸುತ್ತದೆ. ಹಲವು ಪೌಷ್ಟಿಕಾಂಶಗಳು ಬೆಲ್ಲದಲ್ಲಿ ಇರೋದ್ರಿಂದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಗೆ ಇದು ದಿವ್ಯ ಔಷಧ. ಮುಟ್ಟಿನ ಸಮಯದಲ್ಲಿ ಸೆಳೆತ ಮತ್ತು ಹೊಟ್ಟೆ ನೋವನ್ನು ಇದು ಬಹು ಸುಲಭವಾಗಿ ನಿವಾರಿಸುತ್ತದೆ. ಇನ್ನು ಮುಖ್ಯವಾಗಿ ಇತ್ತೀಚಿನ ಪ್ರಧಾನ ಸಮಸ್ಯೆಯಾದ ತೂಕವನ್ನು ನಿಯಂತ್ರಿಸಿಕೊಳ್ಳಲು ಬೆಲ್ಲವನ್ನು ಉಪಯೋಗಿಸಬೇಕು.

ಮುಖದ ನರಗಳು ವೀಕ್ ಆದಾಗ ಏನರ್ಥ!

ಬೆಲ್ಲದಲ್ಲಿ ಹಲವು ಖನಿಜ ಲವಣ ಪದಾರ್ಥಗಳು ಇರೋದ್ರಿಂದ ಇದು ತೂಕವನ್ನು ನಿಯಂತ್ರಿಸುತ್ತದೆ. ಅದರಲ್ಲಿರುವ ಪೊಟ್ಯಾಸಿಯಮ್ ತೂಕ ನಿಯಂತ್ರಣಕ್ಕೆ ಸಹಾಯಕಾರಿ ಸ್ನಾಯುಗಳ ಬಲವರ್ಧನೆಗೆ ಕೂಡ ಸಹಕಾರಿ. ಇದು ಜೀರ್ಣಕ್ರಿಯೆ ಉತ್ತಮವಾಗಿರುತ್ತೆ. ಇದರಿಂದ ಸಹಜವಾಗಿಯೇ ದೇಹದ ತೂಕ ನಿಯಂತ್ರಣಕ್ಕೆ ಕಾರಣವಾಗುತ್ತೆ. ಹೀಗೆ ಬೆಲ್ಲ ಹತ್ತು ಹಲವಾರು ರೀತಿ ಗಳಲ್ಲಿ ಉಪಯೋಗ ವಾಗುತ್ತೆ. ಇದನ್ನ ಪ್ರತಿ ನಿತ್ಯ ಬಳಸೋದು ನಮ್ಮ ಕೈಯಲ್ಲಿ ಮಾತ್ರ ಇದೆ. ಇದನ್ನು ಉಪಯೋಗಿಸುವುದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇರುತ್ತೆ.

Leave A Reply

Your email address will not be published.