Don’t sleep This side ಮಲಗುವಾಗ ಈ ತಪ್ಪುಗಳನ್ನು ಮಾಡಬೇಡಿ. ಉತ್ತಮ ಆಹಾರ ದೇಹಕ್ಕೆ ಮುಖ್ಯವೋ ಅದೇರೀತಿ ಅತ್ಯುತ್ತಮ ನಿದ್ದೆಕೂಡ ಅಷ್ಟೇ ಮುಖ್ಯ. ಅಂತಹ ನಿದ್ದೆಯನ್ನೇ ಕಳೆದುಕೊಂಡು ಬಿಟ್ಟರೆ ಒತ್ತಡ ಚಿಂತೆ ಹಾಗೂ ನಿರಾಸಕ್ತಿ ಮೂಡುತ್ತದೆ. ಯಾವ ದಿಕ್ಕಿಗೆ ತಲೆಇಟ್ಟು ಮಲಗಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುತ್ತಲೇ ಇರುವಂತಹ ಒಂದು ಪ್ರಶ್ನೆ. ಈ ಪ್ರಶ್ನೆ ನಿಮ್ಮ ನಿದ್ದೆಯನ್ನೂ ಕೆಡಿಸಿದ್ದರೆ ಇನ್ನು ಯೋಚಿಸುವ ಅಗತ್ಯವಿಲ್ಲ.
ವಾಸ್ತುಶಾಸ್ತ್ರ ಎಂಬುದು ವಿಜ್ಞಾನ ಮತ್ತು ಜೀವನದ ಮಿಳಿತ. ಅದರಲ್ಲಿ ಯಾವ ದಿಕ್ಕಿಗೆ ತಲೆಹಾಕಿ ಮಲಗಬೇಕು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವನ್ನು ಮಾಡಲಾಗಿದೆ. ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಹಾಕಿ ಮಲಗಬೇಡಿ. ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆಹಾಕಿ ಮಲಗುವುದು ಖಂಡಿತಾ ಉತ್ತಮ ಅಲ್ಲ. ಆ ದಿಕ್ಕಿಗೆ ತಲೆಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ ಅದರ ಜೊತೆಗೆ ಬಹಳ ತೊಂದರೆಗಳು ನಿಮಗೆ ಪ್ರತಿನಿತ್ಯ ಉಂಟಾಗುತ್ತದೆ. ಆದ್ದರಿಂದ ನಿದ್ರಿಸುವುದಕ್ಕೆ ಈ ದಿಕ್ಕನ್ನು ಸಲಹೆ ಮಾಡುವುದಿಲ್ಲ.
ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ ದಕ್ಷಿಣಕ್ಕೆ ಚಲಿಸುತ್ತದೆ. ತಲೆಯನ್ನು ಉತ್ತರಕ್ಕೆ ಇಟ್ಟಾಗ ಆಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸ ಆಗುತ್ತದೆ. ಆದ್ದರಿಂದ ಉತ್ತರಕ್ಕೆ ತಲೆಹಾಕದಂತೆ ಮಲಗಬೇಕು. ಮನೆಯ ಹಿರಿಯರು, ಯಜಮಾನ ಯಜಮಾನಿ ದಕ್ಷಿಣಕ್ಕೆ ತಲೆಹಾಕಿ ಮಲಗುವುದು ಅತ್ಯುತ್ತಮ ಹಲವು ಪದ್ಧತಿ ಹಾಗೂ ಸಂಸ್ಕೃತಿಯ ಪ್ರಕಾರ ಈ ದಿಕ್ಕಿಗೆ ತಲೆ ಇರಿಸಿಕೊಳ್ಳುವುದು ಸರಿ.
ಬೆಳಗ್ಗೆ ಎದ್ದ ತಕ್ಷಣ ನೋಡಬೇಕಾದ, ನೋಡಬಾರದ ವಸ್ತುಗಳು!
ವಾಸ್ತು ಪ್ರಕಾರ ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಜೊತೆಗೆ ಸಂತೋಷವೂ ಸಿಕ್ಕಿ ಕನಸುಗಳು ಈಡೇರುತ್ತವೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನ ಆಗುತ್ತಿವೆ, ಪೂರ್ತಿ ಮಾಡಲು ಆಗುತ್ತಿಲ್ಲ ಅನಿಸಿದರೆ ದಕ್ಷಿಣ ದಿಕ್ಕಿಗೆತಲೆ ಇಟ್ಟು ಮಲಗಿ.
ದಕ್ಷಿಣಕ್ಕೆ ಮಲಗುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು. ಪೂರ್ವಕ್ಕೆ ಮಲಗಿ ಹೊಸ ಚೈತನ್ಯವನ್ನು ಪಡೆಯಿರಿ. ಪೂರ್ವಕ್ಕೆ ತಲೆಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆ ನಿದ್ದೆ ಆಗುತ್ತದೆ. ಹೊಸ ಚೈತನ್ಯ ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೂ ಬಹಳ ಒಳ್ಳೆಯದು. ಅನಾರೋಗ್ಯದಿಂದ ಬಳಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀನಿ ಅನ್ನೋರಿಗೆ ಪೂರ್ವ ದಿಕ್ಕು ಬಹಳ ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಲಿತ ವಿಷಯ ಗಳು ನೆನಪಿನಲ್ಲಿ ಉಳಿಯುತ್ತದೆ.ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮಕ್ಕಳು ಸ್ವಲ್ಪ ಪೂರ್ವಕ್ಕೆ ಮಲಗಿದರೆ ಒಳ್ಳೆಯದು. ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮಕ್ಕಳು ಸ್ವಲ್ಪ ಪೂರ್ವಕ್ಕೆ ಮಲಗಿದರೆ ಒಳ್ಳೆಯದು.
ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಪಶ್ಚಿಮಕ್ಕೆ ತಲೆಹಾಕಿ ಮಲಗುವುದು ತುಂಬ ಒಳ್ಳೆಯದೇನಲ್ಲ. ಆದರೂ ಯಶಸ್ಸು ಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆರಂಭಿಸಿದ ಮೇಲೆ ಜೀವನ ದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತದೆ. ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಮೇಲೆ ಆಗುತ್ತಿದ್ದರೆ ಅದರಿಂದ ಆಚೆ ಬರಬಹುದು.
ಹೆಸರು ಕೀರ್ತಿ ಯಶಸ್ಸು ಪಡೆಯಲು ಪಶ್ಚಿಮ ದಿಕ್ಕು ಬಹಳ ಒಳ್ಳೆಯದು. ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ತುಂಬಾ ಕೆಟ್ಟದು. ಇದರಿಂದ ಯಾವುದೇ ರೀತಿಯ ಒಳ್ಳೆಯ ಫಲಗಳನ್ನು ಕಾಣಬಹುದು ಅನ್ನೋದಕ್ಕೆ ಸಾಧ್ಯಇಲ್ಲ. ಇನ್ನು ವೈಜ್ಞಾನಿಕವಾಗಿ ಕೂಡ ಇದು ಸಾಬೀತಾಗಿದೆ. ಉತ್ತರ ದಿಕ್ಕಿಗೆ ಕಡಾ ಖಂಡಿತವಾಗಿ ತಲೆಹಾಕಿ ಮಲಗಬೇಡಿ. ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಮನೆಯಲ್ಲಿ ಸದಾ ಜಗಳಗಳು ಉಂಟಾಗುತ್ತೆ. ನಿಮ್ಮ ಕೆಲಸ ಕಾರ್ಯಗಳು ಆಗುವುದಿಲ್ಲ. ಎಲ್ಲ ರೀತಿಯಲ್ಲೂ ಸಮಸ್ಯೆಗಳು ಒಂದರ ಹಿಂದೆ ಒಂದು ಬರೋದು ಖಚಿತ.