ಇಂತಹ ಹೆಂಗಸರು ಮನೆಯಲ್ಲಿದ್ದರೆ, ಮನೆ ಏಳಿಗೆಯಾಗುವುದಿಲ್ಲ

Ladies mistakes in home: ಈ ರೀತಿಯ ಸ್ತ್ರೀಯರು ಮನೆಯಲ್ಲಿದ್ದರೆ ಮನೆಯಲ್ಲಿ 1 ನಿಮಿಷ ಕೂಡ ಲಕ್ಷ್ಮಿ ದೇವಿಯು ಮನೆಯಲ್ಲಿ ನಿಲ್ಲೊದಿಲ್ಲ. ಮಹಾಲಕ್ಷ್ಮಿ ದೇವಿಯು ಮನೆಯನ್ನು ಬಿಟ್ಟು ಹೋಗ್ತಾಳೆ.ಮನೆಯಲ್ಲಿ ದರಿದ್ರತನ ಅನ್ನೋದು ತುಂಬುತ್ತೆ. ಕಷ್ಟಗಳ ಮೇಲೆ ಕಷ್ಟ ಅನ್ನೋದು ಬರುತ್ತೆ.ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ತಮಗೆ ಗೊತ್ತಿದ್ದು ಗೊತ್ತಿಲ್ಲದೆ ಇಂತಹ ತಪ್ಪುಗಳನ್ನು ಮಾಡ್ತಾರೆ.ಈ ರೀತಿಯ ತಪ್ಪುಗಳು ಮಾಡೋದ್ರಿಂದನೆ ನಿಮ್ಮ ಮನೆಯಲ್ಲಿ ದುಡ್ಡು ಅನ್ನೋದು ನಿಲ್ಲೊದಿಲ್ಲ.ಹಣ ಮನೆಯಲ್ಲಿ ನಿಲ್ಲದಿರುವುದಕ್ಕೆ ಈ ತಪ್ಪುಗಳು ಯಾವುದು ತಿಳಿಸಿಕೊಡ್ತೀವಿ ನೋಡಿ

ಮೊದಲನೆಯದಾಗಿ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಕೂಡ ತಮ್ಮ ಕಾಲಿನಿಂದ ಬಾಗಿಲನ್ನು ತಳ್ಳಬಾರದು, ಮುಖ್ಯದ್ವಾರ ಆಗಿರಬಹುದು ಅಥವಾ ರೂಮಿನ ದೇವರ ಕೋಣೆಯ ಬಾಗಿಲ ಆಗಿರಬಹುದು. ಯಾವುದೇ ಬಾಗಿಲ ಆಗಿರಬಹುದು. ಅದನ್ನ ನಿಮ್ಮ ಕಾಲಿನಿಂದ ತಳ್ಳಿ ಬಾಗಿಲಿನ ಮುಚ್ಚುವುದಾಗಲಿ, ತೆರೆಯುವುದಾಗಲಿ ಮಾಡ ಬಾರದು. ಬಾಗಿಲು ಅಂದ್ರೆ ಅದು ಲಕ್ಷ್ಮಿಯ ಸಂಕೇತ ಅಂದ್ರೆ ದೇವರ ಸಂಕೇತ. ನೀವು ಅದನ್ನು ಕಾಲಿನಿಂದ ತುಳಿದು ಅಥವಾ ಒಂದು ಅವಮಾನಿಸಿದರೆ ನಿಮ್ಮ ಮನೆಗೆ ದರಿದ್ರ ಬಂದು ಬಿಡುತ್ತೆ. ಅದ್ರಿಂದ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಕಾಲಿನಿಂದ ನೀವು ಬಾಗಿಲಿನ ಓದೆಯುವುದಾಗಲಿ ಅಥವಾ ಎಳೆಯುವುದಾಗಲಿ ಮಾಡಬಾರದು.

ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

ಎರಡನೆಯದಾಗಿ ಪೊರಕೆಯನ್ನ ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆಣ್ಣುಮಕ್ಕಳು ತುಳಿಯೋದಕ್ಕೆ ಹೋಗಬಾರದು. ತಮ್ಮ ಕಾಲಿನಿಂದ ಪೊರಕೆಯನ್ನು ತುಳಿಯಬಾರದು. ಗೊತ್ತಿದ್ದೂ ಗೊತ್ತಿಲ್ಲದೆ ನೀವು ತಪ್ಪು ಮಾಡುತ್ತಿದ್ದರೆ ಇದನ್ನ ನಿಲ್ಲಿಸಬೇಕು. ಇಲ್ಲದಿದ್ದರೆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತೆ. ಲಕ್ಷ್ಮಿದೇವಿಯು ನೆಲೆಸುವುದಿಲ್ಲ, ಹೆಣ್ಣುಮಕ್ಕಳು ಹೊತ್ತಲ್ಲದ ಹೊತ್ತಿನಲ್ಲಿ ಮುಸ್ಸಂಜೆಯಲ್ಲಿ ತಟ್ಟೆಗೆ ಅನ್ನ ಹಾಕೊಂಡು ತಿಂತಾ ಇರ್ತಾರೆ. ಸುಮ್ಮನೆ ಅಥವಾ ಎಂಜಲು ಕೈಯಲ್ಲಿ ಮನೆಯಲ್ಲಿ ಅಡುಗೆ ಮಾಡಿದ ಪಾತ್ರೆಗಳ ಸ್ಪರ್ಶ ವನ್ನು ಮಾಡಿಕೊಂಡು ಅದೇ ಕೈಯಲ್ಲಿ ಬೇರೆ ವಸ್ತುಗಳನ್ನು ಮುಟ್ಟುತ್ತಾರೆ. ಇಂತಹ ಅಭ್ಯಾಸ ಇದ್ರೆ ಅದನ್ನ ಮೊದಲು ಬಿಡಬೇಕು. ಇಲ್ಲಅಂದ್ರೆ ಅದು ದಾರಿದ್ರ್ಯದ ಸಂಕೇತ.

ಯಾವುದೇ ಕಾರಣಕ್ಕೂ ನೀವು ಮಾಡಿರುವಂತಹ ಅಡುಗೆ ಪಾತ್ರೆಗಳ ಸ್ಪರ್ಶವನ್ನು ಮಾಡಬಾರದು. ಇನ್ನ ರಾತ್ರಿ ಮಲಗುವ ಮುಂಚೆಯೇ ಮನೆಯಲ್ಲಿ ಪ್ರತಿಯೊಂದು ಪಾತ್ರೆಗಳನ್ನ ತೊಳೆದು ಮಲಗಬೇಕು. ನೀವು ಹಾಗೇ ಮಲಗಿದರೆ ಅದು ಲಕ್ಷ್ಮಿದೇವಿಗೆ ಇಷ್ಟವಾದಂತಲ್ಲ ಕೆಲಸವಲ್ಲ.ಅದರಿಂದ ದರಿದ್ರತನ ಅನಿಷ್ಠತನ ಬರುತ್ತೆ, ಮನೆಗೆ ಅಶುಭ ಆಗುತ್ತೆ. ಅದರಿಂದ ನೀವು ಎಂಜಲು, ತಟ್ಟೆ, ಲೋಟ ಪಾತ್ರೆಗಳ ಸಂಪೂರ್ಣವಾಗಿ ತೊಡೆದು ಅಡುಗೆಮನೆ ಸ್ವಚ್ಛಮಾಡಿ ತದನಂತರವೇ ನಿದ್ರೆಯನ್ನು ಮಾಡಬೇಕು

ಹೆಣ್ಣು ಮಕ್ಕಳು ಮನೆಯಲ್ಲಿ ಯಾವಾಗಲೂ ಬೇಜಾರಾಗಿರುವುದು ಕೊರಗುವುದು ಅಥವಾ ಮಂಕಾಗಿರೋದು, ಅಲಂಕಾರವನ್ನು ಮಾಡಿಕೊಳ್ಳದಿರುವುದು,ಹುಚ್ಚರಂತೆ ಮನೆಯಲ್ಲಿ ಓಡಾಡಿಕೊಂಡಿರೋದು, ಕಣ್ಣೀರು ಹಾಕೋ ಕೆಲಸಗಳನ್ನು ಮಾಡಬಾರದು. ಇದು ಮನೆಯಲ್ಲಿ ಇರುವ ಸದಸ್ಯರಿಗೆ ಶ್ರೇಯಸ್ಸಲ್ಲ. ಅವರ ಆಯಸ್ಸು ಕ್ಷೀಣಿಸುತ್ತ ಬರುತ್ತೆ. ಮನೆಯಲ್ಲಿ ಹೆಣ್ಣುಮಕ್ಕಳು ಅಂದ್ರೆ ಲಕ್ಷ್ಮಿ ಸಂಕೇತ, ಮಹಾಲಕ್ಷ್ಮಿ ದೇವಿಯ ಸ್ವರೂಪ ಅಂತ ಹೆಣ್ಣುಮಕ್ಕಳು ಮನೆ ಯಾವಾಗಲೂ ಸ್ವಚ್ಛವಾಗಿಟ್ಟುಕೊಂಡು ನಗುನಗುತ್ತಾ ಇದ್ರೆ ಮನೆಯಿಂದ ಹೊರಗೆ ಹೋದಂತಹ ಯಜಮಾನ ಯಾವಾಗಲೂ ಯಶಸ್ಸಿನಿಂದ ಮನೆಗೆ ಸಂತೋಷದಿಂದ ಬರುತ್ತಾನೆ.

ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

ಅವನ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತೆ. ಆದ್ದರಿಂದ ಹೆಣ್ಣುಮಕ್ಕಳು ಮನೆಯಲ್ಲಿ ಯಾವಾಗಲೂ ಅಲಂಕಾರವನ್ನು ಮಾಡಿಕೊಂಡು ತಲೆಕೂದಲನ್ನ ಬಾಚಿಕೊಂಡು ವಿಶೇಷವಾಗಿ ಅಲಂಕಾರವನ್ನು ಮಾಡಿಕೊಂಡು ಓಡಾಡಿಕೊಂಡಿದ್ದರೆ ಮಾತ್ರ ಎಲ್ಲರಿಗೂ ಕೂಡ ಒಳ್ಳೆಯದು. ಯಾವಾಗಲೂ ತಲೆಕೂದಲನ್ನು ಬಿಟ್ಟುಕೊಂಡು ಮನೆಯಲ್ಲಿ ಓಡಾಡಬಾರದು. ಮಧ್ಯಾಹ್ನ ಹೆಣ್ಣು ಮಕ್ಕಳು ನಿದ್ರೆಯನ್ನು ಮಾಡಬಾರದು. ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮನೆಗೆ ಅದು ಅಶುಭದ ಸಂಕೇತ.

ಮನೆಯಲ್ಲಿ ಯಾವಾಗಲೂ ಜಡೆ ಕಟ್ಟಿರಬೇಕು. ಮನೆಯ ಅಂಗಳ ಮುಂಭಾಗವನ್ನು ಯಾವಾಗಲೂ ಶುಚಿತ್ವವಾಗಿ ಇಟ್ಟುಕೊಳ್ಳಬೇಕು. ರಂಗೋಲಿಯಲ್ಲಿ ಲಕ್ಷ್ಮಿ ದೇವಿಯನ್ನ ಆಹ್ವಾನಿಸಬೇಕು. ಲಕ್ಷ್ಮಿದೇವಿ ಮನೆಯ ಮುಖ್ಯದ್ವಾರದಲ್ಲಿ ಪ್ರವೇಶವನ್ನು ಮಾಡುತ್ತಿರುತ್ತಾಳೆ. ನಿಮ್ಮ ಮನೆಯ ಮುಖ್ಯದ್ವಾರ ಯಾವಾಗಲೂ ಸ್ವಚ್ಛ ಮಾಡಿಕೊಳ್ಳಬೇಕು. ಸೂರ್ಯ ಉದಯಿಸುವ ಮುನ್ನವೇ ಹೆಣ್ಣುಮಕ್ಕಳು ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿದರೆ ವಿಶೇಷವಾದಂತಹ ಫಲ ಸಿಗುತ್ತೆ.

Leave a Comment