ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

0 26

Mole on body parts :ಎಷ್ಟೇ ದುಡಿದರು ಅಷ್ಟೇ. ಬಂದ ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ. ಎಷ್ಟೇ ಕಷ್ಟಪಟ್ಟು ದುಡಿದರೂ ಜೀವನ ಮಾತ್ರ ಹಾಗೆ ಇದೆ. ಪ್ರತೀ ಸಲವೂ ಅದೃಷ್ಟವು ಕೈಗೊಡುತ್ತಾ ಇದೆ. ಇದರೊಂದಿಗೆ ಕೆಲವು ಸಲ ಅನಾರೋಗ್ಯದಿಂದ ಆಸ್ಪತ್ರೆಗೆ ಹಣ ಸುರಿಯಬೇಕಾಗುತ್ತದೆ. ಹೀಗೆ ಮುಂದುವರಿದರೆ ಜೀವನ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಹೀಗೆಂದು ಹಲವಾರು ಮಂದಿ ತಮ್ಮ ಕಷ್ಟನಷ್ಟಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಆದರೆ ಇದು ಅವರ ದೇಹದ ಮೇಲಿರುವ ಒಂದು ಮಚ್ಚೆಯಿಂದ ಎಂದರೆ ನೀವು ನಂಬುತ್ತೀರಾ? ಇಲ್ಲ ತಾನೇ?

ಹೌದು, ದೇಹದಲ್ಲಿರುವ ಒಂದು ಮಚ್ಚೆಯು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಯಿಂದ ನಮ್ಮ ಜೀವನದ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಬಗ್ಗೆ ತಿಳಿದುಬರುತ್ತದೆ. ಹುಟ್ಟುವಾಗಲೇ ದೇಹದ ಯಾವುದಾದರೂ ಭಾಗದಲ್ಲಿ ಮಚ್ಚೆ ಇರುವುದು.

ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಅದೃಷ್ಟ ಖುಲಾಯಿಸುವುದು ಮತ್ತು ಯಾವ ಭಾಗದಲ್ಲಿ ಇದ್ದರೆ ಸಂಪತ್ತು ಸಿಗುವುದು ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮ ದೇಹದ ಯಾವ ಭಾಗದಲ್ಲಿ ಮಚ್ಚೆಯಿದೆ ಎಂದು ನಿಮಗೆ ತಿಳಿದಿದ್ದರೆ ಈ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಏನಾಗುತ್ತದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ…

ಕಾಲಿನಲ್ಲಿ ಮಚ್ಚೆಯಿದ್ದರೆ…ಕಾಲಿನಲ್ಲಿ ಮಚ್ಚೆಯಿರುವಂತಹ ವ್ಯಕ್ತಿಯ ಮನೋಭಾವವು ತುಂಬಾ ಗೊಂದಲದಿಂದ ಕೂಡಿರುತ್ತದೆ ಎಂದು ನಂಬಲಾಗಿದೆ. ಇಂತಹ ವ್ಯಕ್ತಿಗಳು ತುಂಬಾ ಪ್ರತಿಭಾವಂತರಾದರೂ ಅವರು ತಮ್ಮ ಶಕ್ತಿಯ ಬಳಕೆ ಮಾಡಿಕೊಳ್ಳಲು ವಿಫಲರಾಗುವರು. ಇದರಿಂದಾಗಿ ಅವರ ಆತ್ಮವಿಶ್ವಾಸದ ಮಟ್ಟವು ಕುಸಿಯುವುದು.

ಎಡಭುಜದಲ್ಲಿ ಮಚ್ಚೆ–ಎಡಭುಜದ ಮೇಲೆ ಮಚ್ಚೆಯಿರುವ ವ್ಯಕ್ತಿಯು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ನಂಬಲಾಗಿದೆ. ಬಲದ ಭುಜದಲ್ಲಿ ಮಚ್ಚೆ ಇರುವ ವ್ಯಕ್ತಿಯ ಅದೃಷ್ಟವು ಚೆನ್ನಾಗಿರುತ್ತದೆ.

ಎದೆಯ ಎಡ ಭಾಗದಲ್ಲಿ ಮಚ್ಚೆ–ದೇಹದ ಈ ಭಾಗದಲ್ಲಿ ಮಚ್ಚೆಯಿರುವಂತಹ ವ್ಯಕ್ತಿಗಳು ತಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ಒಳ್ಳೆಯ ಹಾಸ್ಯ ಪ್ರವೃತ್ತಿ ಕೂಡ ಇರುವುದು.

ಎದೆಯ ಮಧ್ಯ ಭಾಗದಲ್ಲಿ ಮಚ್ಚೆ–ಎದೆಯ ಮಧ್ಯ ಭಾಗದಲ್ಲಿ ಮಚ್ಚೆಯಿರುವಂತಹ ಅರ್ಥವೆಂದರೆ ಇಂತವರು ಪೂರ್ವಜರ ಸಂಪತ್ತನ್ನು ಒಟ್ಟುಗೂಡಿಸಿಕೊಂಡಿರುವುದಿಲ್ಲ. ಅವರು ತಮ್ಮ ಜೀವನದಲ್ಲಿ ತುಂಬಾ ಸಂಕಷ್ಟವನ್ನು ಎದುರಿಸುವರು. ಅದರಲ್ಲೂ ಪ್ರೀತಿಪ್ರೇಮದ ಜೀವನದಲ್ಲಿ ಸಮಸ್ಯೆಯಾಗಬಹುದು.

ಎದೆಯ ಬಲಭಾಗದ ಕೆಳಗೆ–ದೇಹದ ಈ ಭಾಗದಲ್ಲಿ ಮಚ್ಚೆ ಇರುವಂತಹ ವ್ಯಕ್ತಿಯು ಒಳ್ಳೆಯ ಅದೃಷ್ಟ ಹಾಗೂ ಸಂಪತ್ತನ್ನು ಪಡೆದಿರುವರು. ಅವರು ತುಂಬಾ ಅದೃಷ್ಟವಂತರಾಗಿರುತ್ತಾರೆ ಮತ್ತು ಅವರೊಂದಿಗೆ ಇರುವವರು ಕೂಡ ಅದೃಷ್ಟವಂತರಾಗುವರು.

ಬಲ ಭುಜದಲ್ಲಿ ಮಚ್ಚೆ–ಬಲದ ಭುಜದಲ್ಲಿ ಮಚ್ಚೆ ಇರುವಂತಹ ಜನರು ಜೀವನದಲ್ಲಿ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುತ್ತಾರೆ. ಇವರು ತಮ್ಮ ಕುಟುಂಬ, ಅದರಲ್ಲೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅವರು ಜವಾಬ್ದಾರಿ ಇರುವವರು ಎಂದು ನಂಬಲಾಗಿದೆ.

ಕೈ ಅಥವಾ ಬೆರಳಿನಲ್ಲಿ ಮಚ್ಚೆ–ದೇಹದ ಈ ಭಾಗದಲ್ಲಿ ಮಚ್ಚೆ ಇರುವಂತಹವರು ತುಂಬಾ ಆಸೆಬುರುಕರು ಮತ್ತು ಸ್ವಾವಲಂಬಿಯಾಗಿರುತ್ತಾರೆ. ಅವರು ಇತರರ ಸಲಹೆಗಳನ್ನು ಕ್ಯಾರೇ ಮಾಡಲ್ಲ ಮತ್ತು ತಮ್ಮ ಹೃದಯ ಹೇಳಿದಂತೆ ಕೇಳುತ್ತಾರೆ. ಅವರು ಬೇರೆಯವರಿಂದ ನೆರವು ಕೂಡ ಪಡೆಯುವುದಿಲ್ಲ.

ಹೊಟ್ಟೆಯಲ್ಲಿ ಮಚ್ಚೆ–ಹೊಟ್ಟೆಯ ಮೇಲೆ ಮಚ್ಚೆ ಇರುವಂತವರು ತುಂಬಾ ಆಸೆಬುರುಕರು ಎಂದು ನಂಬಲಾಗಿದೆ. ಅವರು ತಮ್ಮ ಪ್ರೀತಿಪಾತ್ರರೊಂದಿಗೆ ವ್ಯವಹರಿಸುವಾಗಲೂ ತುಂಬಾ ಸ್ವಾರ್ಥಿಗಳಾಗಿರುತ್ತಾರೆ. ಅವರು ತಮಗೆ ಮಾತ್ರ ಮಹತ್ವ ನೀಡುವರು. ಇದರಿಂದ ಅವರು ತುಂಬಾ ಕೋಪಿಷ್ಠರು ಎಂದು ನಂಬಲಾಗುತ್ತದೆ.

ಮೂಗಿನ ಮೇಲೆ ಮಚ್ಚೆ–ಮೂಗಿನ ಮೇಲೆ ಮಚ್ಚೆ ಇರುವಂತವರು ತುಂಬಾ ಕ್ರಿಯಾತ್ಮಕ ಹಾಗೂ ಕಲಾವಿದರಾಗಿರುತ್ತಾರೆ ಎಂದು ನಂಬಲಾಗಿದೆ. ಕಲೆ ಹಾಗೂ ಇತರ ಕೆಲವೊಂದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುತ್ತಾರೆ. ಅವರು ಎಲ್ಲವರನ್ನು ತುಂಬಾ ಸುಲಭವಾಗಿ ಮಾಡುವರು ಹಾಗೂ ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಜೀವನದಲ್ಲಿ ಅವರ ಅದೃಷ್ಟ ಒಳ್ಳೆಯದಿರುತ್ತದೆ.

ದವಡೆ ಭಾಗದಲ್ಲಿ ಮಚ್ಚೆ–ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹ ವ್ಯಕ್ತಿಗೆ ತುಂಬಾ ದುರಾದೃಷ್ಟವಿದೆಯೆಂದು ನಂಬಲಾಗಿದೆ. ಇಂತಹ ವ್ಯಕ್ತಿಯು ಜೀವನಪೂರ್ತಿ ಯಾವುದಾದರೂ ಅನಾರೋಗ್ಯ ಮತ್ತು ಇತರ ಕಾಯಿಲೆಯಿಂದ ಬಳಲುತ್ತಾನೆಂದು ನಂಬಲಾಗಿದೆ. ಇದರಿಂದ ಆ ವ್ಯಕ್ತಿಯು ತುಂಬಾ ತಿಕ್ಕಲು ಸ್ವಭಾವದವನಾಗಿರುತ್ತಾನೆ. ಆತ ಬೇಗನೆ ತಾಳ್ಮೆ ಕಳೆದುಕೊಳ್ಳುವ ವ್ಯಕ್ತಿಯಾಗಿರುತ್ತಾನೆ.

ಎಡಕೆನ್ನೆ ಮೇಲೆ ಮಚ್ಚೆ–ಎಡ ಕೆನ್ನೆ ಮೇಲೆ ಮಚ್ಚೆ ಇರುವ ವ್ಯಕ್ತಿಯು ತುಂಬಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ ಮತ್ತು ಬೇಗನೆ ಖಿನ್ನತೆಗೂ ಒಳಗಾಗಬಹುದು ಎಂದು ನಂಬಲಾಗಿದೆ. ಬಲಕೆನ್ನೆಯ ಮೇಲೆ ಮಚ್ಚೆ ಇರುವಂತಹ ವ್ಯಕ್ತಿಗಳು ತುಂಬಾ ಮುಂಗೋಪಿ ಸ್ವಭಾವದವರಾಗಿರುತ್ತಾರೆ ಎಂದು ನಂಬಲಾಗಿದೆ.

ಪಾದದಲ್ಲಿ ಮಚ್ಚೆ–ಪಾದದ ಮೇಲೆ ಮಚ್ಚೆ ಇರುವಂತಹ ವ್ಯಕ್ತಿಗಳು ಪ್ರಯಾಣ ಮಾಡಲು ತುಂಬಾ ಇಷ್ಟಪಡುವರು ಮತ್ತು ತುಂಬಾ ಸಾಹಸಿ ಪ್ರವೃತ್ತಿಯವರಾಗಿರುವರು. ತಮ್ಮ ಊರು ಬಿಟ್ಟು ಹೋಗಿ ಬೇರೆ ಕಡೆಯಲ್ಲಿ ಮಾಡುವಂತಹ ಕೆಲಸವನ್ನು ಇವರು ಇಷ್ಟಪಡುವುದಿಲ್ಲ. ಅಂತಹ ಕೆಲಸವನ್ನು ಇವರು ನಿರಾಕರಿಸುತ್ತಾರೆ.

ಗಲ್ಲದ ಮೇಲೆ ಮಚ್ಚೆ–ದೇಹದ ಈ ಭಾಗದಲ್ಲಿ ಮಚ್ಚೆ ಇರುವಂತವರು ಬೇಗನೆ ಕುಪಿತರಾಗುವ ಮನೋಭಾವದವರು. ಇದು ಅವರ ದೌರ್ಬಲ್ಯವೂ ಆಗಿರುವುದರಿಂದ ಆರ್ಥಿಕ ಸಂಕಷ್ಟಕ್ಕೂ ಗುರಿಯಾಗುವರು. ಇತರರು ಬೀಸಿದ ಬಲೆಗೆ ಅವರು ಸುಲಭವಾಗಿ ಬೀಳುವರು. ಇದರಿಂದ ಅವರ ಜೀವನವು ತುಂಬಾ ಸಂಕಷ್ಟಕ್ಕೊಳಗಾಗುವುದು.Mole on body parts :

Leave A Reply

Your email address will not be published.