ಬೆಳಗ್ಗೆ ಎದ್ದ ತಕ್ಷಣ ನೋಡಬೇಕಾದ, ನೋಡಬಾರದ ವಸ್ತುಗಳು!

ಬೆಳಗ್ಗೆ ಎದ್ದ ತಕ್ಷಣ ಹಲವಾರು ರೀತಿಯ ವಸ್ತುಗಳನ್ನು ನೋಡುತ್ತೀರಾ. ಆದರೆ ಬೆಳಗ್ಗೆ ಎದ್ದ ತಕ್ಷಣ ಯಾವ ಯಾವ ವಸ್ತುಗಳನ್ನು ನೋಡಬಾರದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಆರಂಭ ಅದ್ಭುತವಾಗಿದ್ದಾರೆ ಅಂದುಕೊಂಡ ಕೆಲಸ ಅದರಲ್ಲಿ ಅರ್ಧ ಮುಗಿದು ಹೋಗಿರುತ್ತದೆ.ಅಂದರೆ ಮೊದಲು ಯಾವ ಮನಸ್ಥಿಯಿಂದ ಕೆಲಸ ಶುರು ಮಾಡುತ್ತಿರೋ ಅದೇ ರೀತಿ ದಿನ ಪೂರ್ತಿಯಾಗಿ ಇರುತ್ತದೆ.

ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಬಹಳಷ್ಟು ಒಳ್ಳೆಯ ವಸ್ತುಗಳನ್ನು ನೋಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ಕೂಡಲೇ ಈ ಕೆಲವು ನೋಡಬಾರದು. ಒಂದು ವೇಳೆ ನೋಡಿದರೆ ಇಡೀ ದಿನದ ಕೆಲಸ ಹಾಳು ಎಂದು ಹೇಳುತ್ತಾರೆ.

1, ಬೆಳಗ್ಗೆ ಎದ್ದ ತಕ್ಷಣ ಮುರಿದ ಪಾತ್ರೆಗಳನ್ನು ನೋಡಬಾರದು. ಹರಿದುಹೋದ ಬಟ್ಟೆಯನ್ನು ಮತ್ತು ಬಟ್ಟೆಯ ಗಂಟನ್ನು ಸಹ ನೋಡಬಾರದು .ಒಂದು ವೇಳೆ ಬೆಳಗ್ಗೆ ಎದ್ದ ಕೂಡಲೇ ಇದನ್ನು ನೋಡಿದರೆ ಇಡೀ ದಿನ ಮಾನಸಿಕ ಕಿರಿಕಿರಿ ಆಗುತ್ತದೆ ಜೊತೆಗೆ ನೆಮ್ಮದಿ ಇರುವುದಿಲ್ಲ.

2, ಕೆಲವರಿಗೆ ಎದ್ದ ತಕ್ಷಣ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ಅಭ್ಯಾಸ ಇದೆ. ಆದರೆ ಇದು ಬಹಳಷ್ಟು ಕೆಟ್ಟದು. ಈ ರೀತಿ ಮಾಡುವುದರಿಂದ ಇಡೀ ದಿನ ಅಹಿತಕರವಾದ ಘಟನೆಗಳು ನಡೆಯುತ್ತವೆ.ಆದ್ದರಿಂದ ಹಿರಿಯರು ಹೇಳಿಕೊಟ್ಟಿರುವಂತೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಎರಡು ಕೈಯನ್ನು ಜೋಡಿಸಿ ನಮಸ್ಕಾರ ಮಾಡಬೇಕು ಹಾಗೂ ಅಗೈಯನ್ನು ನೋಡಿ ” ಕರಾಗ್ರೆ ವಾಸತೇ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರೆಮುಲೆ ಸ್ಥಿತಗೌರಿ ಪ್ರಭಾತೆ ಕರದಕ್ಷಣಂ” ಅಂತ ಮಂತ್ರವನ್ನು ಹೇಳಿ ಕೈಯನ್ನು ನೋಡಿ.ಈ ರೀತಿ ಮಾಡುವುದರಿಂದ ತುಂಬಾನೆ ಒಳ್ಳೆಯದು.ಈ ರೀತಿ ಮಾಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಬರುತ್ತದೆ.ಇನ್ನು ಬೆಳಗ್ಗೆ ಎದ್ದ ತಕ್ಷಣ ಸೂಜಿ ದಾರ ಎಣ್ಣೆ ಮತ್ತು ಪಾತ್ರೆಗಳನ್ನು ನೋಡಲೇ ಬಾರದು.ಇವುಗಳು ಶುಭ ಸೂಚಕದ ವಸ್ತುಗಳಲ್ಲ.

3, ಬೆಳಗ್ಗೆ ನಿಮ್ಮ ನೆರಳನ್ನು ಕೂಡ ನೋಡಬಾರದು.ಒಂದು ಸೂರ್ಯದಯದ ವೇಳೆ ನಿಮ್ಮ ನೆರಳನ್ನು ಪಶ್ಚಿಮದಲ್ಲಿ ನೋಡಿಕೊಂಡರೆ ಬಹಳ ಕೆಟ್ಟ ದೋಷ ಉಂಟಾಗುತ್ತದೆ.4, ಮುಖ್ಯವಾಗಿ ಗಲೀಜು ಆಗಿರುವ ಪಾತ್ರೆಗಳನ್ನು ನೋಡಬಾರದು. ಆದ್ದರಿಂದ ಆದಷ್ಟು ರಾತ್ರಿ ಪಾತ್ರೆಗಳನ್ನು ತೊಳೆದು ಮಲಗಬೇಕು. ಒಂದು ವೇಳೆ ನೋಡಿದರೆ ಹಣಕಾಸಿನ ತೊಂದರೆ ಉಂಟಾಗುತ್ತದೆ.ಅಷ್ಟೇ ಅಲ್ಲದೆ ಈ ಎಲ್ಲ ಮಾತುಗಳನ್ನು ತಪ್ಪದೇ ಪಾಲಿಸಿ.

ಇನ್ನು ಅಷ್ಟ ಐಶ್ವರ್ಯ ಪ್ರಾಪ್ತಿ ಆಗಬೇಕು ಎಂದರೆ ಪ್ರತಿದಿನ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು.ಈ ರೀತಿ ಮಾಡಿದರೆ ವ್ಯಾಪಾರಗಳು ಸುಗಮವಾಗಿ ಆಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಆಗಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣವೇ ಈ ವಸ್ತುಗಳನ್ನು ನೋಡಿದರೆ ಬಹಳ ಅನುಕೂಲ ಆಗುತ್ತದೆ.ಈ ರೀತಿ ಪ್ರತಿದಿನ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ಚೆನ್ನಾಗಿ ಆಗುತ್ತದೆ ಮತ್ತು ನೀವು ಮಾಡುವ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಮಲಗುವ ಮುನ್ನ ಹಸಿ ಕಾಲಿನಲ್ಲಿ ಮಲಗಬಾರದು ಮತ್ತು ಬೆಳಗ್ಗೆ ಎದ್ದ ತಕ್ಷಣ ಆಗೈಯನ್ನು ನೋಡಿಕೊಳ್ಳಬೇಕು.ಎರಡು ಆಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಬೇಕು.ಓಂ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರದರ್ಶನಂ||ಬೆಳಗ್ಗೆ ಎದ್ದ ತಕ್ಷಣ ಈ ರೀತಿಯ ಕೆಲಸವನ್ನು ಮಾಡುವುದರಿಂದ ಸಾಕಷ್ಟು ಧನಲಾಭ ಹರಿಯುತ್ತದೆ ಹಾಗೂ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮಲ್ಲಿ ಇರುವ ದೋಷಗಳು ಕಳೆದುಹೋಗುತ್ತದೆ.ಈ ಮಂತ್ರವನ್ನು ತಪ್ಪದೆ ಪ್ರತಿದಿನ ಪಠಿಸಬೇಕು.

ಇನ್ನು ತುಂಬಿದ ತೆಂಗಿನಕಾಯಿ, ಪುಷ್ಪ, ನೀರು ತುಂಬಿದ ಕೊಡ,ಬ್ರಹ್ಮಣರನ್ನು ದರ್ಶನ ಮಾಡಿದರೆ ಬಹಳ ಒಳ್ಳೆಯದು.ಅಷ್ಟೇ ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ ಹಸುವಿನ ಹಿಂಭಾಗವನ್ನು ನೋಡಿದರೆ ತುಂಬಾನೇ ಒಳ್ಳೆಯದು.ಇನ್ನು ಬೆಳಗ್ಗೆ ಎದ್ದ ತಕ್ಷಣ ವಿಷ್ಣು ದೇವರ ನಾಮ ಸ್ಮರಣೆ ಮಾಡಿದರೆ ಬಹಳ ಅನುಕೂಲ.ಇನ್ನು ಬೆಳಗ್ಗೆ ಎದ್ದ ತಕ್ಷಣ ತಮ್ಮ ಮುಖವನ್ನು ತಾವು ನೋಡಿಕೊಳ್ಳಬಾರದು ಹಾಗು ಜಗಳ ಆಡುವುದನ್ನು ನೋಡಬಾರದು. ಆದಷ್ಟು ನಿಮ್ಮ ಇಷ್ಟ ದೇವರ ನಾಮ ಸ್ಮರಣೆ ಅನ್ನು ಮಾಡಿ.

Leave a Comment