Shakuna Shastra :ಪ್ರಾತತ್ಕಾಲದಲ್ಲಿ ಪ್ರಕೃತಿಯನ್ನು ನೋಡುವುದೇ ಒಂದು ಅಂತ. ಪ್ರಕೃತಿಯಲ್ಲಿ ಅನೇಕ ಜೀವರಾಶಿಗಳು ಇವೆ. ನಾವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದಾಗ ಸುತ್ತಮುತ್ತಲಿನ ವಾತಾವರಣ ತಂಪಾಗಿ ಪ್ರಶಾಂತವಾಗಿ ಹಕ್ಕಿಗಳ ಕಲರವ ದಿಂದ ಕೂಡಿರುತ್ತದೆ. ಹೀಗೆ ನಾವು ಎದ್ದಾಗ ಅನೇಕ ಪಕ್ಷಿಗಳನ್ನು ನೋಡುತ್ತೇವೆ ಅಲ್ವೇ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಅನೇಕ ಪಕ್ಷಗಳನ್ನು ನಾವು ನೋಡುತ್ತಾ ಆನಂದಿಸುತ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತಿರುವಂತೆ.
ಪಕ್ಷಿಗಳ ಮತ್ತು ಧರ್ಮಕ್ಕೂ ಮಹತ್ವದ ಸಂಬಂಧ ಇದೆ ಹಿರಿಯರು ಹೇಳುವುದುಂಟು. ಇನ್ನು ನಮ್ ಧರ್ಮದ ಪ್ರಕಾರ ಪಕ್ಷಿಗಳು ಮತ್ತು ಪ್ರಾಣಿಗಳು ದೇವಾನುದೇವತೆಗಳಿಗೆ ವಾಹನವಾಗಿ ಕಂಡು ಬಂದಿದವೆ.
ದೇವರ ಪೂಜೆ ಜೊತೆಗೆ ವಾಹನವಾಗಿರುವ ಪಕ್ಷಿ ಪ್ರಾಣಿಗಳ ಪೂಜೆಗೂ ಕೂಡ ಜರುಗುತ್ತೆ ಅಲ್ವೇ ವಾಹನಗಳ ಪೂಜೆ ಮಾಡಿದರೆ ಫಲ ಪ್ರಾಪ್ತಿ ಆಗುತ್ತೆ. ಅಂದರೆ ದೇವಾನುದೇವತೆಗಳ ವಾಹನಗಳಾದ ಪಶು ಪಕ್ಷಿ ಗಳ ಮತ್ತು ಪ್ರಾಣಿಗಳ ಪೂಜೆ ಮಾಡೋದ್ರಿಂದ ಕೂಡ ಸತ್ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಹೇಳುತ್ತಾರೆ.
ಇನ್ನು ಈ ಪಕ್ಷಿಗಳ ಬಗ್ಗೆ ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ, ಮನೆಗೆ ಅಚಾನಕ್ಕಾಗಿ ಗಿಳಿ ಬಂದರೆ ದನ ಲಾಭ ಆಗುತ್ತೆ ಅಂತ ಹೇಳ್ತಾರೆ, ನಾಯಿ ದನ ಕುರಿ ಗಳಿಗೆ ಆಹಾರ ನೀಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಂದರೆ ಪ್ರಾಣಿ ಪ್ರೀತಿಯನ್ನು ತೋರಿಸ್ಬೇಕು ಅಂತ ಹೇಳ್ತಾರೆ. ಇದರ ಜೊತೆಗೆ ಅವುಗಳಿಗೆ ನೀರು ಸಹ ಕುಡಿಸಬೇಕು ಅಂತ ಹೇಳ್ತಾರೆ, ಪಕ್ಷಿಗಳಿಂದ ನಮಗೆ ಮುನ್ಸೂಚನೆ ಸಿಗುತ್ತದಂತೆ. ಪಕ್ಷಿಗಳ ಸೇವೆಗಳಿಂದ ಅವರ ಆಶೀರ್ವಾದಕ್ಕೂ ಒಳ್ಳೆದಾಗುತ್ತದೆ ಅಂತ ಹೇಳಲಾಗುತ್ತದೆ.
ಕಾರ್ತಿಕೇಯನ ವಾಹನ ನವಿಲು ಸರಸ್ವತಿ ಹಂಸದ ಮೇಲೆ ಕುಳಿತುಕೊಂಡಿರುತ್ತಾಳೆ, ವಿಷ್ಣುವಿನ ವಾಹನ ಗರುಡ ಶನಿ ದೇವರ ವಾಹನಕ್ಕಾಗಿ, ಇನ್ನೂ ಗ* (ಗೂಬೆ ) ಶ್ರೀ ಮಹಾಲಕ್ಷ್ಮಿಯ ವಾಹನ,. ಗ* ಏನಾದ್ರೂ ಕಾಣಿಸಿಕೊಂಡರೆ ಮನೆಗೆ ನೆಂಟರು ಬರುತ್ತಾರೆ ಅಂತ ನಂಬಿಕೆ ಕೂಡ ಇದೆ. ಕಾಗೆ ಕೂಗಿದ್ರು ಕೂಡ ಮನೆಗೆ ನೆಂಟರು ಬರುತ್ತಾರೆ ಅಂತ ಹೇಳ್ತಾರೆ, ಕಾಗೆ ಕೂಗುವ ವಿಧಾನದಲ್ಲೂ ಬದಲಾವಣೆ ಇರುತ್ತದೆ. ಸ್ನೇಹಿತರೆ ಹೇಳ್ತಾರೆ, ಕಾಗೆ ಕೂಗಿದ್ರೆ ಪೂರ್ವಜರು ತುಪ್ತರಾಗಿಲ್ಲ ಅಂತ ಕೂಡ ಹೇಳುತ್ತಾರೆ.
ಮನೆಯಲ್ಲಿ ಪಾರಿವಾಳಗಳು ಏನಾದ್ರೂ ಬಂದ್ರೆ ಮನೆಯಲ್ಲಿ ಕಳ್ಳತನ ಆಗುವ ಸಂಕೇತ ಹೇಳುತ್ತಾರೆ, ಕುಟುಂಬ ಸದಸ್ಯರ ನಡುವೆ ಜಗಳ ಜರುಗುವ ಸಾಧ್ಯತೆ ಇದೆ ಅಂತ ಹೇಳುತ್ತಾರೆ. ಹೀಗೆ ನಾವು ಪ್ರತಿನಿತ್ಯ ಸುತ್ತಮುತ್ತ ನೋಡುವ ಪಕ್ಷಿಗಳ ಕೂಡ ಹೇಳುತ್ತಾವೆ. ಇವು ನಮಗೆ ಕೆಲವು ಮುನ್ಸೂಚನೆಗಳನ್ನು ಕೊಡುತ್ತವೆ ಎಂದು ನಮ್ಮ ಹಿರಿಯರಲ್ಲಿ ಒಂದು ಗಾಢವಾದ ನಂಬಿಕೆ ಇದೆ. ಆ ನಂಬಿಕೆಯಿಂದಲೇ ಕೆಲವೊಂದು ಸಲ ಆ ಮುನ್ಸೂಚನೆಗಳು ನಿಜ ಕೂಡ ಆಗುತ್ತದೆ ಎಂದು ಹೇಳುತ್ತಾರೆ