ಅಪ್ಪಿತಪ್ಪಿಯು ಈ ದಿಕ್ಕಿಗೆ ಮಲಗಬೇಡಿ ಯಾವ ದಿಕ್ಕು ಸರಿ ನೋಡಿ!

0 537

Sleeping Direction :ನಿದ್ರೆಯನ್ನು ಮಾಡಬೇಕಾದರೆ ಈ ಎರಡು ನಿಯಮಗಳನ್ನು ಪಾಲಿಸಿದರೆ ನಿಮಗೆ ಇರುವ ಸಕಲ ದಾರಿದ್ರ ದೋಷಗಳು ತೋಲಾಗಿ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ. ನೀವು ಮಾಡತಕ್ಕಂತಹ ಪ್ರತಿಯೊಂದು ಈ ಸಣ್ಣ ಪುಟ್ಟ ಕೆಲಸ ಕಾರ್ಯದಲ್ಲೂ ವಿಶೇಷವಾಗಿ ಅಖಂಡ ಯಶಸ್ಸು ಫಲಪ್ರಾಪ್ತಿಯಾಗುತ್ತದೆ. ಕುಬೇರ ದೇವ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹದಿಂದ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು. ನಿದ್ರೆಯನ್ನು ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು ಮತ್ತು ನಿದ್ದೆ ಮಾಡುವಾಗ ಈ ಕೆಲವು ಬದಲಾವಣೆ ಮಾಡಿಕೊಂಡರೆ ಅತ್ಯದ್ಭುತವಾಗಿ ಜೀವನ ಬದಲು ಆಗುತ್ತದೇ.

1,ಯಾವುದೇ ಕಾರಣಕ್ಕೂ ನಿದ್ರೆಯನ್ನು ಮಾಡಬೇಕಾದರೆ ಒದ್ದೆ ಕಾಲುಗಳನ್ನು ಇಟ್ಕೊಂಡು ನಿದ್ರೆಯನ್ನು ಮಾಡಬಾರದು. ಒದ್ದೆ ಕಾಲನ್ನು ವರೆಸಿಕೊಂಡು ನಂತರ ಮಲಗಬೇಕು.2, ಯಾವುದೇ ಕಾರಣಕ್ಕೂ ಕತ್ತಲು ಇರುವ ಕೋಣೆಯಲ್ಲಿ ಮಲಗಬಾರದು. ಸ್ವಲ್ಪ ಆದರೂ ಬೆಳಕು ಇರಬೇಕು.ಈ ರೀತಿ ಮಲಗಿದರೆ ಪಾಸಿಟಿವ್ ಎನರ್ಜಿ ಸೃಷ್ಟಿ ಆಗುತ್ತದೆ.

3, ಯಾರಾದರೂ ನಿದ್ದೆ ಮಾಡುವಾಗ ಸಡನ್ ಆಗಿ ಎಚ್ಚರಗೊಳಿಸಬೇಡಿ.ಇನ್ನು ಸೂರ್ಯೋದಯ ಸಮಯದಲ್ಲಿ ನಿದ್ದೆ ಮಾಡುವುದು ಮತ್ತು ಮಾಡುತ್ತಿದರೆ ಇವತ್ತೇ ನಿಲ್ಲಿಸಿ.ಈ ರೀತಿ ಮಾಡಿದರೆ ಆರ್ಥಿಕ ಸಂಕಷ್ಟ ಮತ್ತು ಅನಾರೋಗ್ಯ ಬಾದೆ ಉಂಟಾಗುತ್ತದೆ.

4, ನಿದ್ದೆ ಮಾಡುವಾಗ ತಲೆಯನ್ನು ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದು. ಒಂದು ವೇಳೆ ಈ ರೀತಿ ಮಲಗಿದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ.ಇದರಿಂದ ನಿಮ್ಮ ಆಯುಷ್ಯಕ್ಕೂ ತೊಂದರೆ ಹೆಚ್ಚಾಗುತ್ತದೆ. ಯಾವುದೇ ಕಾರಣಕ್ಕೂ ಉತ್ತರಕ್ಕೆ ತಲೆಯನ್ನು ಹಾಕಿ ನಿದ್ದೆಯನ್ನು ಮಾಡಬಾರದು.ವಿಶೇಷವಾಗಿ ಕುಬೇರ ದೇವರ ಅನುಗ್ರಹ ಮತ್ತು ಲಕ್ಷ್ಮೀದೇವಿ ಅನುಗ್ರಹ ಪಡೆಯಲು ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿ ಮಲಗಬೇಕು.ಬೆಳಗ್ಗೆ ಎದ್ದಾಗ ಉತ್ತರ ದಿಕ್ಕು ನೋಡಿದರೆ ಅದು ಕುಬೇರ ದೇವರ ದಿಕ್ಕು. ಇದರಿಂದ ನಿಮಗೆ ಅಭಿವೃದ್ಧಿ ಹೆಚ್ಚಾಗುತ್ತದೆ.

5, ಇನ್ನು ಮಕ್ಕಳು ಪೂರ್ವಕ್ಕೆ ತಲೆಯನ್ನು ಹಾಕಿ ಮಲಗಬೇಕು.ಈ ರೀತಿ ಮಲಗಿದರೆ ನೆನಪಿನ ಶಕ್ತಿ ವೃದ್ಧಿ ಆಗುತ್ತದೇ.ಇನ್ನು ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿದರೆ ಕೆಟ್ಟ ಆಲೋಚನೆಗಳು ಹೆಚ್ಚಾಗುತ್ತದೆ. ಹಾಗಾಗಿ ನೀವು ಮಲಗುವಾಗ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಮತ್ತು ಬೆಳೆಗ್ಗೆ ಏಳುವಾಗ ಉತ್ತರ ದಿಕ್ಕನ್ನು ನೋಡಬೇಕು.ಈ ಎರಡು ನಿಯಮ ಪಾಲಿಸುತ್ತ ನಿದ್ರೆ ಮಾಡಿದರೆ ನಿಮಗೆ ಇರುವ ಸಕಲ ದಾರಿದ್ರ ದೋಷಗಳು ದೂರ ಆಗುತ್ತದೆ.

Leave A Reply

Your email address will not be published.