ಒಂದು ಚಿಟಿಕೆ ಹಿಂಗನ್ನು ಇದರೊಂದಿಗೆ ಸೇರಿಸಿ ಹಾಕಿ ಗಿಡದ ತುಂಬಾ ಮೊಗ್ಗು ಹೂವುಗಳು!

0 0

Kannada News :ಕೈತೋಟಲದಲ್ಲಿ ನರ್ಸರಿ ಯಿಂದ ಗಿಡಗಳನ್ನು ತೆಗೆದುಕೊಂಡು ಬಂದು ಬೆಳೆಸುತ್ತಾರೇ ಅಥವಾ ಬೀಜಗಳನ್ನು ಉಪಯೋಗಿಸಿಕೊಂಡು ಗಿಡಗಳನ್ನು ಬೆಳೆಸುತ್ತೇವೆ. ಇನ್ನು ಸೇವಂತಿಗೆ ಗಿಡ ಸಣ್ಣ ಗಿಡ ಆದರೂ ಸಾಕಷ್ಟು ಹೂವನ್ನು ಬಿಡುತ್ತದೆ. ಗಿಡದಲ್ಲಿ ಬೇಗ ಮೊಗ್ಗು ಹೂವು ಆಗುವುದಕ್ಕೆ ಏನು ಮಾಡಬೇಕು ಎಂದು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.

ಎಷ್ಟೋ ಸರಿ ನರ್ಸರಿ ಯಿಂದ ತೆಗೆದುಕೊಂಡು ಬಂದ ಗಿಡ ಚೆನ್ನಾಗಿ ಬೆಳಯುವುದಿಲ್ಲಾ.ಕಾಲ ಕಾಲಕ್ಕೆ ಪೆಸ್ಟಿಸೈಡ್ಸ್ ಅನ್ನು ಕೊಡಬೇಕಾಗುತ್ತದೆ.ಇನ್ನು ವಿಶೇಷವಾಗಿ ಬೇಕಾಗಿರುವ ಫಾರ್ಟಿಲೈಝರ್ ಮಾಡುವುದಕ್ಕೆ ಬೇಕಾಗಿರುವುದು ಅಡುಗೆ ಮನೆಯಲ್ಲಿ ಇರುವ ಹಿಂಗು. ಇದನ್ನು ಗಿಡಗಳಿಗೂ ಕೂಡ ಬಳಸಬಹುದು.

ಮೊದಲು ಒಂದು ಲೀಟರ್ ಅಷ್ಟು ನೀರನ್ನು ತೆಗೆದುಕೊಳ್ಳಿ ಹಾಗು 1 ಚಿಟಿಕೆ ಹಿಂಗು,2 ಚಮಚ ಟೀ ಪೌಡರ್ ಹಾಕಿ ಮಿಕ್ಸ್ ಮಾಡಿ(ಟೀ ಮಾಡಿದ ಟೀ ಪುಡಿಯನ್ನು ಉಪಯೋಗ ಮಾಡಿದರೇ ಬಹಳ ಒಳ್ಳೆಯದು ). ನಂತರ ಇದನ್ನು ಒಂದು ದಿನ ಪೂರ್ತಿಯಾಗಿ ಬಿಸಿಲಿನಲ್ಲಿ ಇಡಬೇಕು. ನಂತರ ಇದನ್ನು ಶೋದಿಸಿಕೊಳ್ಳಿ.ನಂತರ ಇದನ್ನು ನೇರವಾಗಿ ಗಿಡಗಳಿಗೆ ಹಾಕಬಹುದು.ಈ ರೀತಿ 15 ರಿಂದ 20 ದಿನಕ್ಕೊಮ್ಮೆ ಹಾಕಿದರೆ ಸಾಕು ಗಿಡದಲ್ಲಿ ಮೊಗ್ಗು ಮತ್ತು ಹೂವುಗಳು ಆಗುತ್ತವೆ.

Leave A Reply

Your email address will not be published.