ಮೂಗಿನಲ್ಲಿ ರಕ್ತ ಯಾಕೆ ಬರುತ್ತೆ? ಇದನ್ನು ತಡೆಗಟ್ಟಲು ಯಾವ ಮನೆಮದ್ದು ಉತ್ತಮ?

Kannada Health tips :ಬೇಸಿಗೆ ಕಾಲದಲ್ಲಿ ಸಾಕಷ್ಟು ಜನರಿಗೆ ಮೂಗಿನಲ್ಲಿ ರಕ್ತಸ್ರವ ಆಗುತ್ತಿರುತ್ತದೆ. ಈ ಮೂಗಿನಲ್ಲಿ ರಕ್ತಸ್ರವ ಆಗುವುದನ್ನು ತಡೆಗಟ್ಟುವ ವಿಧಾನಗಳು ಯಾವುವು ಎಂದು ತಿಳಿಸಿಕೊಡುತ್ತೇವೆ.ಹಲವಾರು ಕಾರಣಗಳಿಂದ ಮೂಗಿನಲ್ಲಿ ರಕ್ತ ಸ್ರವ ಆಗುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಲು ಮತ್ತು ಬಿಳಿ ರಕ್ತ ಕಣಗಲು ಸರಿಯಾಗಿ ಕೆಲಸ ಮಾಡದೇ ಇದ್ದರೆ ಆಗ ಕೂಡ ಮೂಗಿನಲ್ಲಿ ರಕ್ತ ಸ್ರವ ಆಗಬಹುದು ಮತ್ತು ನಮ್ಮ ರಕ್ತದ ಕಣಗಲು ಸರಿಯಾದ ಪ್ರಮಾಣದಲ್ಲಿ ಇಲ್ಲದಿದ್ದರೂ ಕೂಡ ಮೂಗಿನಲ್ಲಿ ರಕ್ತಸ್ರವ ಉಂಟಾಗುತ್ತದೆ.ಇನ್ನು ಅತಿಯಾದ ಉಷ್ಣತೆ ಉಂಟಾದರೆ ಮೂಗಿನಲ್ಲಿ ರಕ್ತ ಬರುತ್ತದೆ.ಹಾಗಾಗಿ ಸಾಕಷ್ಟು ಜನರಿಗೆ ಬೇಸಿಗೆ ಸಮಯದಲ್ಲಿ ಮೂಗಿನಲ್ಲಿ ರಕ್ತಸ್ರವ ಉಂಟಾಗುತ್ತದೆ.

ಮನೆಮದ್ದು ಗಳು–ಮೂಗಿನಲ್ಲಿ ರಕ್ತ ಬರಬಾರದು ಎಂದರೇ ರಾತ್ರಿ ಮಲಗುವಾಗ ಶುದ್ಧವಾದ ತುಪ್ಪವನ್ನು 2-3 ಹನಿಯನ್ನು ಮೂಗಿನಲ್ಲಿ ಹಾಕಿಕೊಂಡು ಮಲಗಬೇಕು.ಈ ರೀತಿ ಮಾಡಿದರೇ ಮೂಗಿನ ಒಳಗೆ ಇರುವ ವಲಸು ಕೂಡ ಹೊರ ಬರುತ್ತದೆ.ಇನ್ನು ಮೂಗಿನ ಒಳಗೆ ಇರುವ ಕೂದಲನ್ನು ಯಾವುದೇ ಕಾರಣಕ್ಕೂ ತೆಗೆಯಬೇಡಿ.

ಇನ್ನು ಮೂಗಿನಲ್ಲಿ ರಕ್ತ ಸ್ರವ ಉಂಟಾದರೇ ಮೂಗಿನ ಮೇಲೆ ಐಸ್ ಇಡುವುದರಿಂದ ರಕ್ತ ಬೇಗ ಹೆಪ್ಪುಗಟ್ಟುತ್ತದೆ.ಇದರಿಂದ ಮೂಗಿನಿಂದ ಬರುವ ರಕ್ತ ಸ್ರವ ಕಡಿಮೆಯಾಗಲು ಸಹಾಯವಾಗುತ್ತದೆ.

ಇನ್ನು ವಾರದಲ್ಲಿ 2-3 ಬಾರಿ ತಲೆ ಸ್ನಾನವನ್ನು ಮಾಡಬೇಕು. ಅತಿಯಾದ ಬಿಸಿ ನೀರಿನಿಂದ ಸ್ನಾನ ಮಾಡಬಾರದು. ತಣ್ಣೀರಿನಿಂದ ತಲೆ ಸ್ನಾನ ಮಾಡುವುದರಿಂದ ಮೂಗಿನಿಂದ ಬರುವ ರಕ್ತ ಸ್ರವವನ್ನು ತಡೆಗಟ್ಟಬಹುದು.

Kannada Health tips ಇನ್ನು ಮಧ್ಯಾಹ್ನ ಊಟವನ್ನು ಮಾಡುವಾಗ ದೇಹಕ್ಕೆ ತಂಪಾಗುವ ಸೌತೆಕಾಯಿ, ಮಜ್ಜಿಗೆ ಸೇವನೆ ಮಾಡಿ ಹಾಗು ಮೂಗಿನಲ್ಲಿ ರಕ್ತ ಸ್ರವ ಉಂಟಾದರೇ ಜೋರಾಗಿ ಸೀನು ಮಾಡಬೇಡಿ. ಆದಷ್ಟು ಬಾಯಿಯಿಂದ ಸೀನುವುದು ಒಳ್ಳೆಯದು. ಇನ್ನು ಧೂಮಪಾನ, ಮಧ್ಯಾಪನ ಕೆಟ್ಟ ಅಭ್ಯಾಸಗಳಿಂದ ದೂರ ಇರುವುದು ಒಳ್ಳೆಯದು. ಸಾಕಷ್ಟು ನೀರು ಕುಡಿಯುವುದು ಮತ್ತು ದೇಹಕ್ಕೆ ತಂಪಾಗುವ ಪದಾರ್ಥ ಗಳನ್ನು ಸೇವನೆ ಮಾಡಿ. ಆದಷ್ಟು ಬೇಸಿಗೆಯಲ್ಲಿ ಎಳೆನೀರು, ಕಲ್ಲಂಗಡಿ, ಕರ್ಬುಜ, ಪಾನಕ ಹಾಗು ಮಜ್ಜಿಗೆ ಸೇವನೆ ಮಾಡುವ ಮೂಲಕ ನಿಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಿ.

Leave A Reply

Your email address will not be published.