ಹೃದಯಘಾತವಾದಾಗ ನೀಡುವ ಪ್ರಥಮ ಚಿಕಿತ್ಸೆ!
Kannada health Tips :ಹೃದಯ ಕಾರ್ಯವನ್ನು ನಿಲ್ಲಿಸಿದ ತಕ್ಷಣ ಉಸಿರಾಟ ಕ್ರಿಯೆ ಸ್ಥಬ್ದವಾಗುತ್ತದೆ.ಹೃದಯದ ಒಂದು ಭಾಗದಲ್ಲಿ ಸುಗಮ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದರಿಂದ ಹೀಗಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ.ಹೃದಯಾಘಾತ ದಿಢೀರೆಂದು ಆಗುವುದಿಲ್ಲ. ಹೃದಯಾಘಾತವಾಗುವ ಮೊದಲು ದೇಹದಲ್ಲಿ ಸಾಕಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳನ್ನು ಕಡೆಗಣಿಸಿದರೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಮೊದಲಿಗೆ ಏನೋ ಆಲಸ್ಯವಿರುತ್ತದೆ. ತುಂಬಾ ಸುಸ್ತಾಗುತ್ತದೆ. ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ.
ಸ್ವಲ್ಪ ದೂರ ನಡೆದರೆ ದಣಿವಾಗಿ ಸುಧಾರಿಸಿಕೊಳ್ಳಬೇಕು ಎನಿಸುತ್ತದೆ. ಆದರೆ ಜ್ವರ ಅಥವಾ ಇತರ ಕಾಯಿಲೆ ಯಾವುದು ಇರುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸುಸ್ತಾಗಲು ಕಾರಣ ಏನು ಎಂಬುದೇ ಗೊತ್ತಾಗುವುದಿಲ್ಲ. ಇದಲ್ಲದೇ ಉಸಿರಾಟ ತೀವ್ರಗತಿಯಲ್ಲಿ ಕಂಡುಬರುತ್ತದೆ. ಇದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಹೀಗೆ ಆಗುವುದರಿಂದ ಉಸಿರಾಡಲು ಕಷ್ಟವಾಗುತ್ತದೆ. ಜೊತೆಗೆ ಮೈ ಬೆವರುತ್ತದೆ ಮತ್ತು ತಲೆಸುತ್ತು ಉಂಟಾಗುತ್ತದೆ. ಹೃದಯಾಘಾತವಾಗುವ ಕೆಲವು ವಾರಗಳ ಮುಂಚೆಯೇ ಸ್ವಲ್ಪ ಎದೆ ನೋವು ಬಂದಿರುತ್ತದೆ. ಅದೇನು ಮೆಲ್ಲನೆಯ ನೋವಷ್ಟೇ ಎಂದು ಯಾರೂ ಗಮನಕ್ಕೆ ತಂದುಕೊಂಡಿರುವುದಿಲ್ಲ. ಅಲ್ಲದೇ ಭುಜ, ಕುತ್ತಿಗೆ ಮತ್ತು ಬೆನ್ನಿನಲ್ಲೂ ನೋವು ಉಂಟಾದ ಅನುಭವ ಆಗಿರುತ್ತದೆ. ಇವೆಲ್ಲಾ ಹೃದಯಾಘಾತ ಉಂಟಾಗುವ ಮುನ್ಸೂಚನೆಗಳು. ಇವುಗಳನ್ನು ಅಲಕ್ಷಿಸಬಾರದು. ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು.
ಪೌಷ್ಟಿಕ ಆಹಾರ ತರಕಾರಿ ಹಣ್ಣು ಸೇವನೆ ಧೂಮಪಾನದಿಂದ ದೂರ, ನಿತ್ಯ ವ್ಯಾಯಾಮ,ವೇಗದ ನಡಿಗೆ, ಸೈಕಲ್ ಸವಾರಿ, ಈಜು ಇತ್ಯಾದಿ ಹವ್ಯಾಸಗಳನ್ನು ರೂಡಿಸಿದರೆ ಹೃದಯ ಕಾಯಿಲೆಯಿಂದ ಪಾರಾಗಬಹುದು.ಎದೆಯಲ್ಲಿ ನೋವು ಕಾಣಿಸಿ ಮೈ ಬೆವರಿದರೆ ಜೋರಾಗಿ ಕೆಮ್ಮಬೇಕು.
ಹೃದಯಘಾತವಾಗಿ ವ್ಯಕ್ತಿ ನೆಲಕ್ಕೆ ಕುಸಿದರೆ ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡುವುದು ಅಗತ್ಯ.ವಾಹನ ಬರುವವರಿಗೂ ವ್ಯಕ್ತಿಯ ಎದೆಯನ್ನು ಅದುಮಬೇಕು ಅಥವಾ ಜೋರಾಗಿ ಗುದ್ದು ನೀಡಬಹುದು.ಸಾಧ್ಯವಾದಲ್ಲಿ ಹೃದಯಘಾತವಾದ ವ್ಯಕ್ತಿಯ ಬಾಯಿಗೆ ನಿಮ್ಮ ಬಾಯಿ ಇಟ್ಟು ಊದುವ ಪ್ರಯತ್ನ ಮಾಡಿ. ಈ ಪ್ರಥಮ ಚಿಕಿತ್ಸೆ ಮುಗಿಯುವುದರ ಒಳಗಾಗಿ ಆಸ್ಪತ್ರೆಯನ್ನು ತಲುಪಬೇಕು.ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.