ಮನೆಯ ಒಳಗೆ ಪಾರಿವಾಳ ಬಂದರೆ ಏನರ್ಥ ತಿಳಿಯಿರಿ!
Kannada Astrology:ಸಾಮಾನ್ಯವಾಗಿ ಮನೆಯ ಒಳಗೆ ಗುಬ್ಬಚ್ಚಿ, ಪಾರಿವಾಳ, ಪಕ್ಷಿಗಳು ಮನೆ ಒಳಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಆದರೆ ಕೆಲವರಿಗೆ ಈ ಪಕ್ಷಿಗಳು ಮನೆಯೊಳಗೆ ಬಂದರೆ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದು ಆಗುತ್ತದೆಯೇ ಎಂಬ ಸಂಶಯ ಬರುತ್ತದೆ. ಹಾಗಾದರೆ ಪಾರಿವಾಳ ಪಕ್ಷಿ ಮನೆಯೊಳಗೆ ಬಂದರೆ ಶುಭವೋ ಅಶುಭವೋ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪಾರಿವಾಳ ಪಕ್ಷಿಗಳು ಕೂಡ ದೇವರ ಸೃಷ್ಟಿಯಾದ ಕಾರಣ ಅದಕ್ಕೆ ಆಹಾರವನ್ನು ನೀಡಿದರೆ ಯಾವುದೇ ತಪ್ಪಾಗುವುದಿಲ್ಲ, ಆದ್ದರಿಂದ ಈ ಪಕ್ಷಿಗೆ ಒಂದು ವೇಳೆ ತೃಪ್ತಿಯಾದರೆ ನಿಮಗೆ ಒಳ್ಳೆಯದಾಗುತ್ತದೆಯೋ ಹೊರತು ಎಂದಿಗೂ ಕೆಡುಕು ಆಗುವುದಿಲ್ಲ. ಒಂದು ವೇಳೆ ಅಟ್ಟದ ಮೇಲೆ ಅಥವಾ ಟೆರೆಸ್ ಮೇಲೆ ಪಾರಿವಾಳಕ್ಕೆ ಧಾನ್ಯಗಳನ್ನು ಹಾಕಿದರೆ ಹಾಗೂ ಪಾರಿವಾಳ ಧಾನ್ಯವನ್ನು ತಿಂದು ಹೋದಮೇಲೆ ಆ ಜಾಗವನ್ನು ಸ್ವಚ್ಛಗೊಳಿಸಿದರೆ ಆಗ ರಾಹುವಿನ ಕೆಟ್ಟ ದೃಷ್ಟಿ ಅಥವಾ ದುಷ್ಪರಿಣಾಮ ಬೀರುವುದಿಲ್ಲ.
ಒಂದು ವೇಳೆ ಮನೆಯೊಳಗೆ ಎರಡು ಪಾರಿವಾಳಗಳು ಬಂದು ಒಂದಕ್ಕೊಂದು ಕಿತ್ತಾಡುತ್ತಿದ್ದರೆ ಆಗ ಅದರಿಂದ ಕೆಟ್ಟ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲದೆ ಈ ರೀತಿಯಾದಾಗ ಮನೆಯ ಇಬ್ಬರು ಸದಸ್ಯರ ನಡುವೆ ಜಗಳ ನಡೆಯುತ್ತದೆ ಎಂಬ ಸೂಚನೆಯನ್ನು ಕೊಡುತ್ತದೆ.
ಒಂದು ವೇಳೆ ಮನೆಯ ಒಳಗೆ ಪಾರಿವಾಳ ಬಂದು ಒಂಟಿ ಕಾಲಿನ ಮೇಲೆ ನಿಂತುಕೊಂಡರೆ ಮನೆಯಲ್ಲಿ ಯಾವುದಾದರೊಂದು ಕೆಟ್ಟ ಸನ್ನಿವೇಶ ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯ ಸಮಸ್ಯೆ ಉದ್ಭವವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.