ಮನೆಯಲ್ಲಿ ಕೆಟ್ಟ ಶಕ್ತಿ ಇದೆಯೋ ಅಥವಾ ಇಲ್ಲವೋ ಎಂದು ತಿಳಿಯಲು ಈ ರೀತಿ ಮಾಡಿ!

0 0

Astrology tips:ನಿಮ್ಮ ಮನೆಯಲ್ಲಿ ದೆವ್ವಗಳು ಭೂತಗಳು ಪ್ರೇತಗಳು ಇದೆಯಾ ಇಲ್ಲವೋ ಎನ್ನುವುದನ್ನು ಕೇವಲ ಒಂದು ಗ್ಲಾಸ್ ನೀರಿನಿಂದ ಸುಲಭವಾಗಿ ಕೇವಲ ಒಂದು ದಿನದಲ್ಲಿ ಕಂಡುಹಿಡಿಯಬಹುದಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪ್ರಕಾರ ಇರುವ ವಾತಾವರಣವನ್ನು ಯಾವತ್ತಿಗೂ ಸ್ವಚ್ಛವಾಗಿ ಇರಿಸಬೇಕು. ಯಾವುದೇ ಕಾರಣಕ್ಕೂ ವಾಸಿಸುವ ಸ್ಥಾನವನ್ನು ಗಲೀಜಾಗಿ ಇಟ್ಟುಕೊಳ್ಳಬಾರದು. ವಾಸಿಸುವ ಸ್ಥಳ ಗಲೀಜಾಗಿ ಇದ್ದರೆ ಕೆಟ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳು ತಮ್ಮ ವಾಸವನ್ನು ಮಾಡಿಕೊಳ್ಳುತ್ತವೆ.

ಈ ಕಾರಣದಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ದರಿದ್ರಗಳು ಬಡತನಗಳು ವ್ಯರ್ಥವಾಗಿ ಹಣ ಖರ್ಚಾಗುವುದು. ಈ ರೀತಿ ಆಗುತ್ತಿರುತ್ತದೆ ಮತ್ತು ಜೊತೆಗೆ ರೋಗಗಳು ಕೂಡ ಕಾಡುತ್ತವೆ. ಒಂದು ವೇಳೆ ಇರುವ ಸ್ಥಾನವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಅಲ್ಲಿ ಒಳ್ಳೆಯ ಸಕಾರಾತ್ಮಕ ಪಾಸಿಟಿವ್ ಎನರ್ಜಿ ವಾಸ ಮಾಡುತ್ತವೆ. ಇದರಿಂದ ಎಲ್ಲ ರೀತಿಯ ಅನುಕೂಲ ಆಗುತ್ತದೆ.

ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಹಲವಾರು ರೀತಿಯ ತೊಂದರೆಗಳನ್ನು ನೀವು ಕಾಣುತ್ತೀರಾ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದಿಯಾ ಇಲ್ಲವೋ ಎಂದು ಈ ರೀತಿಯಾಗಿ ಕಂಡು ಹಿಡಿಯಬಹುದು. ಈ ಪ್ರಯೋಗವನ್ನು ಮಾಡಲು ನಿಮ್ಮ ಬಳಿ ಒಂದು ಗ್ಲಾಸ್ ನೀರು ಇದ್ದರೆ ಸಾಕು. ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳನ್ನು ಭೂತಪ್ರೇತ ಇದೆಯೋ ಇಲ್ಲವೋ ಎನ್ನುವುದನ್ನು ಸುಲಭವಾಗಿ ತಿಳಿಯಬಹುದು.

ಮೊದಲು ಮಲಗುವ ಮುನ್ನ ರಾತ್ರಿಯ ವೇಳೆ ಒಂದು ಗ್ಲಾಸ್ ನೀರನ್ನು ತೆಗೆದುಕೊಳ್ಳಬೇಕು. ಇದರಲ್ಲಿ ನೀವು ಒಂದು ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮನೆಯ ದೇವರ ಕೋಣೆ ಬಿಟ್ಟು ನಕಾರಾತ್ಮಕ ಶಕ್ತಿ ಇರುವ ಕೋಣೆಯಲ್ಲಿ ಇದನ್ನು ಇಡಬೇಕು. ಒಂದು ವೇಳೆ ಮುಂಜಾನೆ ಸಮಯದಲ್ಲಿ ನೀರಿನ ಬಣ್ಣ ಹಳದಿಯಾಗಿದ್ದಾರೆ ಅಥವಾ ಬೇರೆ ಬಣ್ಣಕ್ಕೆ ತಿರುಗಿದ್ದರೆ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಎಳೆದುಕೊಂಡಿದೆ ಎಂದು ಅರ್ಥ. ಸಾಮಾನ್ಯವಾಗಿ ಉಪ್ಪಿನಲ್ಲಿ ನಕಾರಾತ್ಮಕ ಶಕ್ತಿಯನ್ನು ಎಳಿದುಕೊಳ್ಳುವ ಶಕ್ತಿ ಇರುತ್ತದೆ.

Astrology tips :ಒಂದು ವೇಳೆ ನೀರಿನ ಬಣ್ಣ ಬದಲಾಗದೇ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದೆ ಎಂದು ಅರ್ಥ. ಒಂದು ವೇಳೆ ಈ ರೀತಿಯ ಪ್ರಯೋಗ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಒಂದು ವೇಳೆ ಮನೆಯಲ್ಲಿ ಹನುಮಾನ್ ಚಾಲೀಸ್ ವನ್ನು ಜಪ ಮಾಡುತ್ತಿದ್ದಾರೆ ಮನೆಯಲ್ಲಿ ಇರುವಂತಹ ನಕಾರತ್ಮಕ ಶಕ್ತಿಗಳು ಬೇಗನೆ ನಾಶಗೊಳ್ಳುತ್ತವೆ. ಈ ರೀತಿಯ ಪ್ರಯೋಗಗಳ ಮೂಲಕ ಮನೆಯಲ್ಲಿ ಇರುವ ನಕಾರತ್ಮಕ ಶಕ್ತಿಗಳನ್ನು ದೂರ ಮಾಡಬಹುದು. ನಂತರ ಸಕಾರತ್ಮಕ ಶಕ್ತಿಗಳನ್ನು ಪಡೆದುಕೊಳ್ಳಿರಿ.

Leave A Reply

Your email address will not be published.