Kannada News ಮನುಷ್ಯನ ದೇಹಕ್ಕೆ ಅತ್ಯಮೂಲ್ಯವಾದ ಆಹಾರವೆಂದರೆ ನೀರು ಅದು ನಮಗೆ ತುಂಬಾ ಮುಖ್ಯವಾದದ್ದು ಇತ್ತೀಚೆಗೆ ಜನರು ಫಿಲ್ಟರ್ ನೀರು ಕುಡಿಯುವುದನ್ನು ಹೆಚ್ಚಾಗಿದೆ ಜನರು ಪ್ಲಾಸ್ಟಿಕ್ ಬಳಕೆ ಮಾಡುವುದು ತುಂಬಾ ಜಾಸ್ತಿಯಾಗಿದೆ ಅದರಲ್ಲಿ ಕುಡಿದರೆ ಏನಾಗುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ ಅದನ್ನು ಕುಡಿಯುವುದರಿಂದ ತುಂಬಾನೇ ಕ ತೊಂದರೆಗಳು ಉಂಟಾಗುತ್ತದೆ ಆದರೆ ಜನರು ಮಿನರಲ್ ವಾಟರ್ ಮತ್ತು ಫಿಲ್ಟರ್ ವಾಟರ್ ಅನ್ನು ಕುಡಿಯುತ್ತಾರೆ ಸಿಹಿ ಆಗಿದೆ ಅಂತ ಈ ನೀರಿನಲ್ಲಿ ಯಾವುದೇ ಅಂಶಗಳು ಇರುವುದಿಲ್ಲ ಆ ನೀರನ್ನು ಅಂಶವನ್ನು ಕಂಡುಹಿಡಿಯುವ ಮಾಪನ ಟೋಟಲ್ ಡಿ ಸಾಲ ಡಾ ಸಾಲಿಡ್(TDS) ಟಿಡಿಎಸ್ ಅನ್ನು 200 ರಿಂದ 350 ರವರೆಗೆ ಇದ್ದಾರೆ ಅದು ನೀರು ಚೆನ್ನಾಗಿದೆ ಮತ್ತು 200 ರಿಂದ 400 ರವರೆಗೆ ಚೆನ್ನಾಗಿಲ್ಲ ಅಂತ ಅಲ್ಲ ಪರವಾಗಿಲ್ಲ ಅದು TDS 150 ಇದ್ದರೆ ಮಿನರಲ್ಸ್ ನೀರಿನಲ್ಲಿ ಕಡಿಮೆ ಇರುತ್ತದೆ.
TDS ಕಡಿಮೆ ಇದ್ದರೆ ಹೃದಯದ ಸಮಸ್ಯೆ ಬರುತ್ತದೆ ಮತ್ತು ಕೂದಲು ಉದುರುವುದು ಬರುತ್ತದೆ ಹೆಚ್ಚಾಗಿದೆ ಪ್ಲಾಸ್ಟಿಕ್ ಬಾಟಲಿ ಉಪಯೋಗಿಸುವುದರಿಂದ ನೀರನ್ನು ಅಲ್ಲಿರುವ ಮಿನರಲ್ಸ್ ಗಳು ಕಡಿಮೆಯಾಗುತ್ತದೆ ಪ್ಲಾಸ್ಟಿಕ್ ತಯಾರಿಸುವಾಗ ಅಲ್ಲಿನೀರನ್ನು ತುಂಬುವಾಗ ಮಿನರಲ್ಸ್ ಅಂಶ ಕಳೆದುಕೊಳ್ಳುತ್ತದೆ ಫಿಲ್ಟರ್ ಮಾಡದೆ ನೀರನ್ನು ಕುಡಿದರೆ ಅಲ್ಲಿರುವ ಕ್ಯಾಲ್ಸಿಯಂ ಮೆಗ್ನೀಷಿಯಂ ಮತ್ತು ಖನಿಜ ಲವಣಾಂಶಗಳು ಮನುಷ್ಯನ ದೇಹಕ್ಕೆ ಮತ್ತು ಮೂಳೆಗಳಿಗೆ ಚರ್ಮಕ್ಕೆ ತುಂಬಾ ಆರೋಗ್ಯಕರವಾಗಿರುತ್ತದೆ ಆ ನೀರನ್ನು ಕುಡಿದರೆ ಫಿಲ್ಟರನ್ನು ಪ್ಲಾಸ್ಟಿಕ ಬಾಟಲ್ ಕುಡಿದರೆ ಅನೇಕ ರೋಗಗಳು ಬರುತ್ತದೆ.
ನೀರು ಕಲುಷಿತಗೊಳ್ಳುತ್ತದೆ–ನೀರನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಕೊಂಡು ಬಿಸಿಲಿಗೆ ಹೋಗುವುದರಿಂದ ನೀರಿನಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗಿ ನೀರು ಕಲುಷಿತಗೊಳ್ಳುತ್ತದೆ. ಇದನ್ನು ಸೇವಿಸಿದರೆ ವಾಂತಿ, ತಲೆನೋವಿನಂತಹ ಅನಾರೋಗ್ಯ ಕಾಡುತ್ತದೆ. ಅಲ್ಲದೆ ಪ್ಲಾಸ್ಟಿಕ್ ಅನ್ನು ಪಾಲಿಥೈಲಿನ್ ಟೆರಾಫ್ತಲೇಟ್ ಎನ್ನುವ ವಸ್ತುವಿನಿಂದ ತಯಾರಿಸಲಾಗುತ್ತದೆ. ತಾಪಮಾನದ ಕಾರಣದಿಂದ ನೀರು ವಿಷಯುಕ್ತವಾಗವಂತೆ ಇದು ಮಾಡುತ್ತದೆ. ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ.
ಪಿಸಿಓಎಸ್ ಸಮಸ್ಯೆ ಸಾಧ್ಯತೆ–ಪ್ಲಾಸ್ಟಿಕ್‌ನಿಂದ ನೀರು ಕಲುಷಿತಗೊಂಡಿರುತ್ತದೆ. ಇದರಿಂದ ಸ್ತನ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚು. ಅಲ್ಲದೆ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಪಿಸಿಓಎಸ್ ಸಮಸ್ಯೆ ಹಾಗೂ ಅಂಡೋತ್ಪತ್ತಿಯ ಸಮಸ್ಯೆಗೂ ಪ್ಲಾಸ್ಟಿಕ್ ಬಾಟಲಿ ನೀರು ಕಾರಣವಾಗುತ್ತದೆ ಎನ್ನುತ್ತದೆ ಹಲವು ಅಧ್ಯಯನಗಳು.ಇದೂ ಅಲ್ಲದೆ ಪ್ಲಾಸ್ಟಿಕ್ ಬಾಟಲಿಗಳು ಹಲವು ಬಣ್ಣಗಳಲ್ಲಿರುತ್ತದೆ. ಈ ಬಣ್ಣಗಳು ಬಿಸಿಲಿನ ತಾಪಕ್ಕೆ ನೀರಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯಕ್ಕೆ ಇನ್ನಷ್ಟು ಹಾನಿಯನ್ನು ಉಂಟು ಮಾಡುತ್ತವೆ.
ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ–ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ಅಪಾಯಕಾರಿ ರಾಸಾಯನಿಕ ಅಂಶಗಳು ಸೇರಿಕೊಳ್ಳುತ್ತವೆ. ಪ್ಲಾಸ್ಟಿಕ್‌ನಲ್ಲಿನ ಡಯಾಕ್ಸಿನ್ ಎನ್ನುವ ವಿಷಕಾರಿ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವಂತೆ ಮಾಡುತ್ತದೆ. ಇದು ಸ್ತನ ಕ್ಯಾನ್ಸರ್‌ಗೂ ಕಾರಣವಾಗುವಂತೆ ಮಾಡುತ್ತದೆ. ನೀರು ದೇಹಕ್ಕೆ ಅವಶ್ಯಕ ಆದರೆ ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರು ಅಪಾಯವನ್ನೇ ತಂದೊಡ್ಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾದ ಮೇಲೆ ಹಲವು ರೀತಿಯ ಅನಾರೋಗ್ಯ ದೇಹದಲ್ಲಿ ಕಾಣಿಸಿಕೊಳ್ಳುವುದು ಸಹಜ.
ಕ್ಯಾನ್ಸರ್ ಅಪಾಯ ಹೆಚ್ಚು–ಸಾಮಾನ್ಯವಾಗಿ ಪ್ಲಾಸ್ಟಿಕ್ ಬಾಟಲಿಗಳು ಒಂದು ಬಾರಿ ಬಳಕೆಗೆ ಯೋಗ್ಯವಾಗಿರುತ್ತದೆ. ಅದನ್ನೇ ಪದೇ ಪದೇ ಬಳಸಿದರೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಹಾಗೂ ಬೊಜ್ಜಿನ ಸಮಸ್ಯೆಗಳು ಕೂಡ ಕಾಲಕ್ರಮೇಣ ದೇಹವನ್ನು ಆಕ್ರಮಿಸಿಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಶೇಖರಣೆ ಮಾಡಿದ ನೀರನ್ನು ಕುಡಿಯುವ ಮುನ್ನ ಎಚ್ಚರ. ಬಿಸ್ಲರಿ ಬಾಟಲಿಗಳನ್ನಾದರೂ ನೀರು ಕುಡಿದ ಮೇಲೆ ಮತ್ತೆ ಕುಡಿಯುವ ನೀರಿಗಾಗಿ ಮರುಬಳಕೆ ಮಾಡಬೇಡಿ.
ವೀರ್ಯಾಣುಗಳ ಸಂಖ್ಯೆ ಕುಂದುವಿಕೆ–ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಸೇವಿಸುವುದರಿಂದ ಪ್ಲಾಸ್ಟಿಕ್‌ನಲ್ಲಿರುವ ಥಾಲೆಟ್ಸ್ ಎಂಬ ರಾಸಾಯನಿಕ ಅಂಶವು ವೀರ್ಯಗಳ ಉತ್ಪಾದನೆಯನ್ನು ಕುಂದಿಸುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳಿದೆ. ಅಲ್ಲದೆ ಇದು ಲಿವರ್ ಕ್ಯಾನ್ಸರ್‌ಗೆ ಕೂಡ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.ಅಲ್ಲದೆ ನ್ಯೂಯಾರ್ಕ್‌ನಲ್ಲಿ ನಡೆದ ಅಧ್ಯಯನವೊಂದು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳಿವೆ. ಇವು 5 ಮಿಲಿ ಮೀಟರ್‌ಗಳಿಗಿಂತ ಚಿಕ್ಕದಾಗಿದ್ದು, ನೀರನ್ನು ಕಲುಷಿತಗೊಳಿಸಿ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.Kannada News