ಸಾ ಯು ವ 40 ಸೆಕೆಂಡ್ ಮುಂಚೆ ಏನಾಗುತ್ತೆ ?

0 0

ಮನುಷ್ಯ ಸಾಯುವುದಕ್ಕು ಮುಂಚೆ ಅವನಿಗೆ ದಿವ್ಯ ದೃಷ್ಟಿ ಬರುತ್ತದೆ ಅಂತೆ ,ಈ ಇಡೀ ವಿಶ್ವವನ್ನೇಲ್ಲ ಇವನು ಕಣ್ಣು ತುಂಬಾ ನೊಡುತ್ತಾನೆ ಅಂತೆ,ಕೇಳೊಕೆ ಇದು ಬಹಳ ಆಶ್ಚರ್ಯವಾಗಿದೆ,ಅದರ ವಿವರಗಳನ್ನು ತಿಳಿಯೊಣ. ಮನುಷ್ಯ ಸತ್ತಮೇಲೆ ಆಗೊದೇನು,ಸಾಮಾನ್ಯವಾಗಿ ಅವರ ಮೃತದೇಹವನ್ನು ಅಗ್ನಿಗೆ ಆಹುತಿ ಕೊಡುತ್ತಾರೆ ಅಥವಾ ಮಣ್ಣು ಮಾಡುತ್ತೇವೆ.ಆದರೆ ಅವರ ಆತ್ಮ ಎಲ್ಲಿ ಹೋಗುತ್ತದೆ,ಎಷ್ಟು ದಿನಗಳ ವರೆಗೆ ಈ ಭೂಮಿ ಮೇಲೆ ಇರುತ್ತದೆ ,ಅಷ್ಟಕ್ಕೂ ಸತ್ತವರ ಬಗ್ಗೆ ನಮ್ಮ ಪುರಾಣಗಳು ಏನು ಹೇಳುತ್ತಿವೆ ಎಂದು ಮೊದಲು ತಿಳಿಯೊಣ.

ಸಾಧಾರಣವಾಗಿ ಮನುಷ್ಯ ಮರಣಿಸಿದ ನಂತರ ಅವರ ಆತ್ಮ ಏನಾಗುತ್ತದೆ ಎಂದು ಪ್ರತಿಯೊಬ್ಬರ ಮನಸಿನಲ್ಲಿ ಇರುತ್ತದೆ. ಈಗ ಅಲ್ಲದಿದ್ದರು ನಮ್ಮವರು ಸತ್ತಾಗ ಮಾತ್ರ ಅವರು ಎಲ್ಲಿಗೆ ಹೊಗುತ್ತಾರೆ ಏನಾಗುತ್ತಾರೊ ಅವರ ಆತ್ಮ ನಂಮೊಂದಿಗೆ ಇರುತ್ತದ ನಮಗೆ ಕಾಣಿಸುತ್ತದ,ನಮ್ಮನ್ನು ಸಂಪರ್ಕಿಸಲು ಪ್ರಯತ್ನ ಪಡುತ್ತಾರಾ,ನಮ್ಮನ್ನು ನೋಡುತ್ತಾರಾ ಈ ರೀತಿಯ ಹಲವಾರು ಪ್ರಶ್ನೆಗಳು ಎಲ್ಲರಲ್ಲಿಯೊ ಸಹಜವಾಗಿ ಬರುತ್ತದೆ.

ಇದೇ ಪ್ರಶ್ನೆ ನಮ್ಮ ಹಿಂದೂಗಳನ್ನು ಕೇಳಿದರೆ ಸತ್ತವರ ಆತ್ಮ ಯಮ ಧರ್ಮ ರಾಜರ ಬಳಿ ಹೊಗುತ್ತದೆ ಎಂದು ಸುಲಭವಾಗಿ ಹೇಳುತ್ತಾರೆ, ಇದು ನಿಜಾನ ಆದರೆ ಆತ್ಮ ಅಲ್ಲಿವರೆಗೆ ಹೇಗೆ ಪ್ರಾಯಾಣಿಸುತ್ತದೆ ಮುಂತಾದ ವಿಷಯಗಳ ಬಗ್ಗೆ ತಿಳಿಸುತ್ತೇವೆ.ಮನುಷ್ಯನ ಮರಣದ ನಂತರ ನಡೆಯುವ ಪರಿಣಾಮಗಳ ಬಗ್ಗೆ ಹಿಂದೊ ಶಾಸ್ತ್ರದ ಪ್ರಕಾರ ಗರುಡ ಪ್ರಾಣದೊಳಗೆ ವಿವರಿಸಲಾಗಿದೆ. ಅದರ ಪ್ರಕಾರ ಇನ್ನೂ ಕೆಲವೇ ನಿಮಿಷಗಳಲ್ಲಿ ಮನುಷ್ಯ ಮರಣಿಸುತ್ತಾನೆ ಎಂಬ ಸಮಯದಲ್ಲಿ ಅವರಿಗೆ ಈಡೀ ಸೃಷ್ಟಿ ಎಲ್ಲವು ಕಾಣುತ್ತದೆ ಅಂತೆ ಅವರಿಗೆ ಆ ಸಮಯದಲ್ಲಿ ದಿವ್ಯ ದೃಷ್ಟಿ ಲಭಿಸುತ್ತದೆ ಅಂತೆ‌.ಆ ದಿವ್ಯ ದೃಷ್ಟಿಯಿಂದ ಆ ವ್ಯಕ್ತಿ ಪ್ರಪಂಚವೆಲ್ಲವನ್ನು ಅರ್ಥ ಮಾಡಿಕೊಳ್ಳಿತ್ತಾನೆ ಅಂತೆ,ಆದರೆ ಇದನ್ನು ಇತರರಿಗೆ ಹೇಳಲು ಹಂಚಿಕೊಳ್ಳಲು ಅವರಿಂದ ಸಾದ್ಯ ಆಗುವುದಿಲ್ಲ. ಅವರಿಂದ ಮಾತನಾಡುವುಕ್ಕು ಆಗುವುದಿಲ್ಲ. ನಾವು ಸಹ ಅದೇ ಸಮಯದಲ್ಲಿ ಅವರ ಬಾಯಲ್ಲಿ ಹಾಲು, ಅಥವಾ ನೀರು ಹಾಕುತ್ತೇವೆ.

Leave A Reply

Your email address will not be published.