ಮನೆಯಲ್ಲಿ ಈ ಫೋಟೋ ವಿಗ್ರಹಗಳನ್ನು ಇಡಬಾರದು ಲಕ್ಷ್ಮಿ ಸದಾ ನೆಲೆಸಿರುತ್ತಾಳೆ!
ಹಿಂದೂ ಧರ್ಮದಲ್ಲಿ ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು, ಆಶೀರ್ವಾದವನ್ನು ಪಡೆಯಲು ಭಕ್ತರು ನಾನಾ ವಿಧಗಳಿಂದ ಪೂಜೆ, ಪುನಸ್ಕಾರವನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿ ಲಕ್ಷ್ಮೀ ದೇವಿಯ ವಿಗ್ರಹ, ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಲಕ್ಷ್ಮೀದೇವಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸದೇ ಇದ್ದರೆ ಸಮಸ್ಯೆಗಳುಂಟಾಗುವುದು, ಹಾಗಾದರೆ ಲಕ್ಷ್ಮೀ ದೇವಿಯ ವಿಗ್ರಹಗಳನ್ನು ಹೇಗೆ? ಯಾವ ರೀತಿ ಇಡಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಲಕ್ಷ್ಮೀದೇವಿ ನಿಂತಿರುವ ಫೋಟೋ ಇಡಬಾರದು–ಪ್ರತಿಯೊಬ್ಬರ ಪೂಜಾ ಕೋಣೆಯಲ್ಲೂ ಲಕ್ಷ್ಮೀದೇವಿಯ ವಿಗ್ರಹವನ್ನಿಡುವುದು ಸಾಮಾನ್ಯ. ಆದರೆ ಅನೇಕರು ನಿಂತಿರುವ ಲಕ್ಷ್ಮೀದೇವಿಯ ಪ್ರತಿಮೆಯನ್ನು ಇಡುತ್ತಾರೆ. ನಿಂತಿರು ಲಕ್ಷ್ಮೀ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇಡಬಾರದು, ಇದರಿಂದ ಯಾವುದೇ ಫಲ ದೊರೆಯುವುದಿಲ್ಲ. ಯಾವಾಗಲೂ ಕುಳಿತಿರುವ ಲಕ್ಷ್ಮೀ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇಡಬೇಕು.
ಮಹಾವಿಷ್ಣುವಿನೊಂದಿಗಿರುವ ಲಕ್ಷ್ಮಿ–ಪುರಾಣದ ಪ್ರಕಾರ ಲಕ್ಷ್ಮೀದೇವಿಯು ಚಂಚಲೆಯಾಗಿರುವುದರಿಂದ, ನಿಂತಿರುವ ಮೂರ್ತಿಯನ್ನು ಇಡುವುದರಿಂದ ಲಕ್ಷ್ಮೀಯು ಆ ಮನೆಯಲ್ಲಿ ದೀರ್ಘಕಾಲ ನೆಲೆಸುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾಗಿ ಕುಳಿತಿರುವ ಲಕ್ಷ್ಮೀದೇವಿಯ ಫೋಟೋವನ್ನು ಇಟ್ಟರೆ ಸದಾ ಕಾಲ ನೆಲೆಸಿರುತ್ತಾಳೆ ಎನ್ನಲಾಗುತ್ತದೆ. ಮನೆಯಲ್ಲಿ ಸತಿ ಪತಿಯಲ್ಲಿ ಪ್ರೀತಿಯು ಹೆಚ್ಚಾಗಬೇಕೆಂದರೆ ಆದಿಶೇಷನ ಮೇಲೆ ಪವಡಿಸಿರುವ ಮಹಾವಿಷ್ಣುವಿನ ಪಾದದ ಬಳಿ ಕುಳಿತಿರುವ ಲಕ್ಷ್ಮೀದೇವಿಯ ಫೋಟೋ ಇರಿಸಬೇಕು.
ಲಕ್ಷ್ಮಿ ಹಾಗೂ ಗಣೇಶ–ಲಕ್ಷ್ಮೀ ದೇವಿಯ ವಾಹನವು ಗೂಬೆ, ಗೂಬೆಯು ಕತ್ತಲೆ ಹಾಗೂ ರಾತ್ರಿಯನ್ನು ಪ್ರತಿನಿಧಿಸುವುದರಿಂದ, ಗೂಬೆಯ ಮೇಲೆ ಕುಳಿತಿರುವ ಲಕ್ಷ್ಮೀದೇವಿಯ ಫೋಟೊವನ್ನು ಬಳಸಬಾರದು. ಕೆಲವೊಂದು ಮನೆಯಲ್ಲಿ ಲಕ್ಷ್ಮೀಯ ಜೊತೆಯಲ್ಲಿ ಗಣೇಶನ ವಿಗ್ರಹವನ್ನು ಇಡುತ್ತಾರೆ. ಆದರೆ ಹೀಗೆ ಇಡಬಾರದು, ಲಕ್ಷ್ಮೀದೇವಿಯೊಂದಿಗೆ ವಿಷ್ಣುವಿನ ಚಿತ್ರವಿರುವ ಫೋಟೋವನ್ನು ಇಡಬಹುದು, ಇದು ಅತ್ಯಂತ ಶ್ರೇಷ್ಠವಾದುದು. ದೀಪಾವಳಿಯಂದು ಮಾತ್ರ ಲಕ್ಷ್ಮೀದೇವಿಯೊಂದಿಗೆ ಗಣೇಶನನ್ನು ಪೂಜಿಸಬೇಕು. ದೀಪಾವಳಿಯಂದು ಲಕ್ಷ್ಮೀದೇವಿಯನ್ನು ಗಣೇಶನೊಂದಿಗೆ ಪೂಜಿಸಿದರೆ ಸಂತೋಷ ಸಮೃದ್ಧಿಯು ನೆಲೆಸುವುದು. ಸದಾ ಕಾಲ ಮನೆಯಲ್ಲಿ ಸಮೃದ್ಧಿ, ಸಂಪತ್ತು ನೆಲೆಸಲು ಮಹಾವಿಷ್ಣು ಹಾಗೂ ಲಕ್ಷ್ಮೀ ಗರುಡನಮೇಲೆ ಕುಳಿತಿರುವ ಫೋಟೋವನ್ನು ಇರಿಸಬೇಕು.
ವಾಸ್ತು ಪ್ರಕಾರ ಲಕ್ಷ್ಮೀದೇವಿಯ ವಿಗ್ರಹ–ಲಕ್ಷ್ಮೀದೇವಿಯ ವಿಗ್ರಹ ಅಥವಾ ಫೋಟೋವನ್ನು ಗೋಡೆಗೆ ಒರಗಿಸಿ ಇಡಬಾರದು. ವಾಸ್ತು ಪ್ರಕಾರ ದೇವರ ವಿಗ್ರಹ ಹಾಗೂ ಗೋಡೆಯ ಮಧ್ಯೆ ಅಂತರವಿರಬೇಕು. ಲಕ್ಷ್ಮೀ ದೇವಿಯನ್ನು ಮನೆಯಲ್ಲಿ ಇಟ್ಟು ಪೂಜಿಸುವಾಗ ಸರಿಯಾದ ದಿಕ್ಕಿನಲ್ಲಿ ಇಟ್ಟು ಪೂಜಿಸಬೇಕು. ಲಕ್ಷ್ಮೀ ದೇವಿಯ ವಿಗ್ರಹವನ್ನು ಯಾವಾಗಲೂ ಉತ್ತರ ದಿಕ್ಕಿಗೆ ಅಭಿಮುಖವಾಗಿರುವಂತೆ ಇರಿಸಬೇಕು. ಈ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಸಂಪತ್ತು ಸಮೃದ್ಧಿಯು ಹರಿದು ಬರುವುದು…