ಮೂಗು ಹೇಳುತ್ತೆ ಮನುಷ್ಯನ ಸ್ವಭಾವ!

0 0

ಮಾನವನ ದೇಹದಲ್ಲಿರುವ ಅಂಗಗಳು ಆತನ ಭವಿಷ್ಯ, ಸ್ವಭಾವವನ್ನು ಹೇಳುತ್ತವೆ. ಮೂಗಿನಲ್ಲೂ ಅನೇಕ ರಹಸ್ಯವಿದೆ. ಮೂಗು ಮನುಷ್ಯನ ಸ್ವಭಾವವನ್ನು ಹೇಳುತ್ತದೆ.ಗಿಳಿ ಕೊಕ್ಕಿನಂತ ಮೂಗನ್ನು ಹೊಂದಿರುವ ವ್ಯಕ್ತಿ ಅರ್ಹತೆಯುಳ್ಳ, ಜವಾಬ್ದಾರಿಯುತ ಮತ್ತು ದೃಢನಿಶ್ಚಯ ಹೊಂದಿರುವ ವ್ಯಕ್ತಿಯಾಗಿರುತ್ತಾನೆ. ಅಧಿಕಾರ ಪಡೆಯಲು ಪ್ರಯತ್ನಿಸುವ ವ್ಯಕ್ತಿ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಾನೆ.

ದಪ್ಪ ಮೂಗು ಇರುವವರು ಬಲಶಾಲಿಗಳು ಮತ್ತು ತೆಳ್ಳಗಿನ ಮೂಗು ಇರುವವರು ದುರ್ಬಲರು ಎಂದು ಹೇಳಲಾಗುತ್ತದೆ.ಮಧ್ಯದಲ್ಲಿ ದಪ್ಪದಾಗಿರುವ ಮೂಗನ್ನು ಹೊಂದಿರುವ ವ್ಯಕ್ತಿ ಶ್ರೀಮಂತರು, ಪ್ರತಿಭಾವಂತರು, ಧೈರ್ಯಶಾಲಿಗಳು, ಕಮಾಂಡರ್‌ಗಳು ಮತ್ತು ಅಧಿಕಾರಿಗಳಾಗುವ ಗುಣ ಹೊಂದಿರುತ್ತಾರೆ.ದೊಡ್ಡ ಮುಖದ ಮೇಲೆ ಸಣ್ಣ ಮೂಗು ಅಥವಾ ಸಣ್ಣ ಮುಖದ ಮೇಲೆ ದೊಡ್ಡ ಮೂಗು ಇರುವ ವ್ಯಕ್ತಿಗಳು ಅನುಮಾನಾಸ್ಪದ ಸ್ವಭಾವ ಹೊಂದಿರುತ್ತಾರೆ.

ತೆಳ್ಳಗಿನ ಮೂಗಿನ ದೊಡ್ಡ ಹೊಳ್ಳೆಗಳು ಮತ್ತು ದಪ್ಪ ಮೂಗಿನ ಸಣ್ಣ ಹೊಳ್ಳೆಗಳನ್ನು ಹೊಂದಿರುವ ವ್ಯಕ್ತಿಗಳು ದುರ್ಬಲ ಹೃದಯ ಮತ್ತು ದುರ್ಬಲ ಮನಸ್ಸನ್ನು ಹೊಂದಿರುತ್ತಾರೆ.ನೇರ, ತೆಳ್ಳಗಿನ, ಉದ್ದ ಮೂಗಿನ ವ್ಯಕ್ತಿಗಳು ಕಲಾತ್ಮಕ ಸ್ವಭಾವ ಹೊಂದಿರುತ್ತಾರೆ. ಸದಾ ಉತ್ಸಾಹದಲ್ಲಿರುತ್ತಾರೆ.ತೆಳ್ಳಗೆ ಮತ್ತು ಉದ್ದವಾಗಿದ್ದರೂ ಮೂಗು ವಕ್ರವಾಗಿದ್ದರೆ ಅವರು ಸ್ವಾರ್ಥಿ, ನಿರ್ದಯ ಗುಣ ಹೊಂದಿರುತ್ತಾರೆ.

Leave A Reply

Your email address will not be published.