ಮಖಾ / ಮಘಾ ನಕ್ಷತ್ರದವರು ಜೀವನದಲ್ಲಿ ಹೇಗಿರುತ್ತಾರೆ!
ಮಘಾ ನಕ್ಷತ್ರದ ಆಡಳಿತ ಗ್ರಹ ಕೇತು. ಮಘಾ ನಕ್ಷತ್ರದವರಿಗೆ ಒಳ್ಳೆಯ ಸ್ಥಾನಮಾನ ಸಿಗುವುದು. ಈ ನಕ್ಷತ್ರದಲ್ಲಿ ಜನಿಸಿದವರಿಗೆ ನಾಯಕತ್ವದ ಗುಣಗಳಿರುತ್ತದೆ. ಇವರು ಸಾಂಪ್ರದಾಯಿಕ ಮೌಲ್ಯಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ.
ಮಘಾ ನಕ್ಷತ್ರದಲ್ಲಿ ಜನಿಸಿದವರು ಪ್ರಭಾವಿಗಳಾಗುತ್ತಾರೆ. ಇವರು ಎಲ್ಲೇ ಹೋದರು ತಮ್ಮ ಗುರುತು ಮೂಡಿಸುತ್ತಾರೆ. ಇವರು ಶ್ರಮಜೀವಿಗಳು. ಇವರು ಸ್ವತಂತ್ರ ಮನೋಭಾವದವರು ಹಾಗೂ ಉತ್ಸಾಹಿಗಳು.’
ಇವರು ಅಸಾಧ್ಯವಾಗಿರುವುದನ್ನು ಸಾಧ್ಯ ಎಂದು ಮಾಡಿ ತೋರಿಸುವ ಗುಣದವರು. ಇವರು ಕುಟುಂಬ ಹಾಗೂ ಕೆಲಸದಲ್ಲಿ ಸ್ಥಿರತೆಯನ್ನು ಬಯಸುತ್ತಾರೆ.
ಮಘಾ ನಕ್ಷತ್ರ 2023 ರ ಪ್ರಕಾರ ನೋಡುವುದಾದರೆಮಘಾ ನಕ್ಷತ್ರ 2023 ಮಘಾ ನಕ್ಷತ್ರ 2023ರ ಭವಿಷ್ಯ ಪ್ರಕಾರ ಮಘಾ ನಕ್ಷತ್ರ ಪದ 1 ರಲ್ಲಿ ಹುಟ್ಟಿದ ಸಿಂಹರಾಶಿಯವರು ತಮ್ಮ ಮಾತಿನ ಮೇಲೆ ನಿಯಂತ್ರಣ ಇಡುವುದು ಒಳ್ಳೆಯದು. ಅನಗ್ಯತ ಮಾತುಗಳಿಂದ ದೊಡ್ಡ ಸಮಸ್ಯೆ ಉಂಟಾಗಬಹುದು. ಮಘಾ ನಕ್ಷತ್ರ ಪದ 2ರಲ್ಲಿ ಜನಿಸಿದವರು ಹೊಸ ಉದ್ಯೋಗದ ಹುಡುಕಾಟ ನಡೆಸಬಹುದು. ಮಘಾ ನಕ್ಷತ್ರ ಪದ 3ರಲ್ಲಿ ಜನಿಸಿದದವರು ಕಟ್ಟ ಚಟಗಳಿಂದಾಗಿ ಸಮಸ್ಯೆಗಳಲ್ಲಿ ಸಿಲುಕಬಹುದು. ಮಘಾ ನಕ್ಷತ್ರ ಪದ 4ರಲ್ಲಿ ಜನಿಸಿದವರು ಅನಗ್ಯತ ದುಂದುವೆಚ್ಚ ಮಾಡಬಹುದು.
ಮಘಾ ನಕ್ಷತ್ರದವರಿಗೆ ಜನವರಿ, ಫೆಬ್ರವರಿ, ಮೇ, ಜೂನ್ ಹಾಗೂ ಅಕ್ಟೋಬರ್ ತಿಂಗಳು ಅಷ್ಟು ಒಳ್ಳೆಯದಲ್ಲ. ಮಾರ್ಚ್, ಆಗಸ್ಟ್, ಡಿಸೆಂಬರ್ 2023 ತುಂಬಾ ಒಳ್ಳೆಯದಿದೆ. ಏಪ್ರಿಲ್, ಜುಲೈ, ಸೆಪ್ಟೆಂಬರ್ ಸಾಮಾನ್ಯವಾಗಿರುತ್ತದೆ.ವೃತ್ತಿ ಜೀವನ ಮಘಾ ನಕ್ಷತ್ರ 2023ರ ಭವಿಷ್ಯ ಪ್ರಕಾರ ವೃತ್ತಿ ಜೀವನದಲ್ಲಿ ನಿರಾಸೆ, ಅಸಮಧಾನ ಇರುತ್ತದೆ. ನೀವು ಬಯಸಿದಂಥ ಕೆಲಸ ಸಿಗದೇ ನಿರಾಸೆಯಾಗಬಹುದು. ಆದರೆ ಇವೆಲ್ಲಾ ಕೆಲವು ತಿಂಗಳಷ್ಟೇ, ನಂತರ ನೀವು ಬಯಸಿದ ಕೆಲಸ ಸಿಗಬಹುದು, ವೃತ್ತಿ ಜೀವನದಲ್ಲಿ ಒಳ್ಳೆಯ ಪ್ರಗತಿ ಕಾಣುವಿರಿ.
ಆದ್ದರಿಂದ ಆತುರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ವಿದೇಶದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಬಯಸಿದಂಥ ಫಲ ಸಿಗಲು ಕಷ್ಟವಾಗಬಹುದು. ಕೆಲವೇ ತಿಂಗಳುಗಳಲ್ಲಿ ವೃತ್ತಿ ಜೀವನದಲ್ಲಿ ಹೊಸ ಅಧ್ಯಾಯ ತೆರೆಯಲಿದೆ. ವರ್ಷದ ಕೊನೆಯಲ್ಲಂತೂ ಉದ್ಯೋಗಿಗಳು ಹಾಗೂ ಸ್ವಂತ ಉದ್ಯೋಗದಲ್ಲಿರುವವರು ಒಳ್ಳೆಯ ಪ್ರಗತಿ ಕಾಣುವಿರಿ.ನಿಮಗೆ ಆಗದೇ ಇರುವ ಕೆಲಸದಲ್ಲಿ ಕೈ ಹಾಕಲು ಹೋಗಬೇಡಿ. ವರ್ಷದ ಕೊನೆಯಲ್ಲಿ ಒಳ್ಳೆಯ ಅವಕಾಶಗಳು ಸಿಗಬಹುದು. ಉದ್ಯಮಿಗಳಿಗೆ ಈ ವರ್ಷ ಸರಾಸರಿಯಾಗಲಿದೆ. ನೀವು ಬಯಸಿದಷ್ಟು ಲಾಭ ಬರದೇ ಇರಬಹುದು. ಬರಬೇಕಿದ್ದ ಹಣ ನಿಮ್ಮ ಕೈ ಸೇರುವುದು. ಹೊಸ ಐಡಿಯಾಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ.
ಆರ್ಥಿಕ ಸ್ಥಿತಿ–ಮಘಾ ನಕ್ಷತ್ರ 2023ರ ಭವಿಷ್ಯ ಪ್ರಕಾರ ಆರ್ಥಿಕ ಸ್ಥಿತಿ ನೀವು ಬಯಸಿದಂತೆ ಇರಲ್ಲ, ಆದರೆ ಏಪ್ರಿಲ್ ನಂತರ ಕೈಯಲ್ಲಿ ಹಣ ಬರಲಾರಂಭಿಸುತ್ತದೆ. ನಿಮ್ಮಲ್ಲಿ ಕೆಲವರು ಹೊಸ ಮನೆಗೆ ಹೋಗಬಹುದು, ಕೆಲವರಿಗೆ ದುಬಾರಿ ಉಡುಗೊರೆಗಳು ದೊರೆಯಬಹುದು. ದುಡ್ಡಿಗೆ ಸಂಬಂದಿಸಿದ ಕೋರ್ಟ್ ವ್ಯವಹಾರಗಳಿದ್ದರೆ ಇತ್ಯರ್ಥವಾಗಲಿದೆ. ಏಪ್ರಿಲ್ ಬಳಿಕ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಉಂಟಾಗಲಿದೆ. ಹೊಸ ಉದ್ಯಮದಲ್ಲಿ ಪ್ರಾರಂಭದಲ್ಲಿ ಬೆಳವಣಿಗೆ ಕಡಿಮೆ ಇರಬಹುದು, ಆದರೆ ಚಿಂತಿಸಬೇಡಿ, ವರ್ಷದ ಕೊನೆಯಲ್ಲಿ ಲಾಭ ಹೆಚ್ಚಾಗಲಿದೆ. ಕೆಲವರು ಹೊಸ ಗಾಡಿ ಖರೀದಿಸಬಹುದು. ಹೊಸ ಉದ್ಯಮ ಪ್ರಾರಂಭಿಸಿದವರು ಲಾಭ ಗಳಿಸುವಿರಿ. ವರ್ಷದ ಕೊನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ.
ಕುಟುಂಬ-ಕೆಲಸಕ್ಕೆ ಸಂಬಂಧಿಸಿದ ಚಿಂತೆ ಮನೆಗೆ ತರಬೇಡಿ. ಮಕ್ಕಳು ಪೋಷಕರು ಹೆಮ್ಮೆ ಪಡುವ ಕಾರ್ಯ ಮಾಡುತ್ತಾರೆ, ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಲಿದೆ. ಅವಾಹಿತರಿಗೆ ಮದುವೆಯಾಗಲಿದೆ. ಸಂಗಾತಿಯೊಂದಿಗೆ ಮನಸ್ತಾಪವಾದಾಗ ಕೆಟ್ಟ ಆಲೋಚನೆಗಳಿಂದ ದೂರವಿರಬೇಕು. ನಿಮ್ಮಿಬ್ಬರ ಬಾಂಧವ್ಯ ಗಟ್ಟಿಯಾಗಿಸಲು ಪ್ರಯತ್ನಿಸಬೇಕು. ಸೆಪ್ಟೆಂಬರ್ ನಂತರ ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಲಿದೆ.
ಆರೋಗ್ಯ–ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು. ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆ ಕಾಡಬಹುದು. ಜೂನ್ -ಆಗಸ್ಟ್ ತಿಂಗಳಿನಲ್ಲಿ ಮಾನಸಿಕ ನೆಮ್ಮದಿಗೆ ಭಂಗ ಉಂಟಾಗಬಹುದು. ಆದಷ್ಟು ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ನೀಡಿ. ಈ ವರ್ಷ ನೀವು ಫಿಟ್ನೆಸ್ ಹಾಗೂ ಆರೋಗ್ಯಕರ ಆಹಾರಕ್ರಮದತ್ತ ಗಮನ ನೀಡುತ್ತೀರಿ. ಮಾನಸಿಕ ಆರೋಗ್ಯಕ್ಕೆ ಧ್ಯಾನ ಅಭ್ಯಾಸ ಮಾಡಿ.ಒಟ್ಟಿನಲ್ಲಿ ನೋಡುವುದಾದರೆ ಕೆಲವೊಂದು ಸಮಸ್ಯೆಗಳು ಬಂದರೂ ಅದು ಶ್ವಾಶ್ವತವಾಗಿರಲ್ಲ, ವರ್ಷದ ಕೊನೆಯ ತಿಂಗಳುಗಳಲ್ಲಿ ನೀವು ಸಂತೋಷವಾಗಿರುತ್ತೀರಾ ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿ ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ