ದಿನ ಪಿಸ್ತಾ ತಿನ್ನೋದ್ರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ?

0 461

ಪಿಸ್ತ ನಮ್ಮ ದೇಹಕ್ಕೆ ಬೇರೆ ಬೇರೆ ಪೋಷಕಾಂಶಗಳು ಎಲ್ಲವೂ ಸಿಗುತ್ತದೆ.ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಆಗುತ್ತೆ ದೇಹದಲ್ಲಿ ಇರುವಂತ ಕೆಟ್ಟ ಕೊಲೆಸ್ಟ್ರಾಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯ ಡ್ರೈಫ್ರೂಟ್ಸ್ ಹೇಳಬಹುದು. ಇನ್ನು ಪಿಸ್ತದಲ್ಲಿ ವಿಟಮಿನ್ ಬಿ ಸಿಕ್ಸ್ ನಮಗೆ ಹೇರಳವಾಗಿ ಸಿಗೋದ್ರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಆಗೋದಕ್ಕೆ ತುಂಬಾನೇ ಸರಾಗವಾಗಿ ಆಗುತ್ತೆ ಹಾಗೇನೇ ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗೋದಕ್ಕೆ ಇದು ತುಂಬಾನೇ ಸಹಾಯಮಾಡುತ್ತದೆ.

ನಾವು ಪ್ರತಿ ದಿನ ಪಿಸ್ತಾ ವನ್ನು ತಿನ್ನಬಹುದು. ಅದೇ ರೀತಿ ನಮ್ಮ ಮೆದುಳಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತಾನೆ ಹೇಳಬಹುದು ಮೆದುಳು ನರಮಂಡಲ ಅವುಗಳ ಎಲ್ಲಾ ಕಾರ್ಯಕ್ಕೆ ಕರೆಕ್ಟಾಗ್ ಮಾಡೋದಕ್ಕೆ ಇದು ಸಹಾಯ ಆಗುತ್ತೆ. ಅದರ ಜೊತೆಗೆ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ಬೆಸ್ಟ್ ಡ್ರೈ ಫುಡ್ಸ್ ಅಂತಾನೆ ಹೇಳಬಹುದು.ಹಾಗೇನೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ಒಳ್ಳೆಯದು. ನಾವು ಪ್ರತಿದಿನ ಐದಾರು ಪಿಸ್ತ ವನ್ನು ಕೂಡ ನಾವು ತಿನ್ನಬಹುದು.

ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ಈ ಪಿಸ್ತಾ ತುಂಬಾನೆ ಒಳ್ಳೆಯದು. ನಾವು ಆರೋಗ್ಯವಂತರಾಗಿರುವುದಕ್ಕಾಗಿ. ಬಿಳಿ ರಕ್ತ ಕಣಗಳು ತುಂಬಾನೇ ಸಹಾಯ ಮಾಡುತ್ತವೆ. ಹಾಗಾಗಿ ಬಿಳಿ ರಕ್ತ ಕಣ ಕೊರತೆ ಆಗದೆ ಈ ಫಿಸ್ತಾ ಮಾಡುತ್ತೆ.ಅದೇ ರೀತಿ ನಮ್ಮ ಚರ್ಮದ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ. ಇದರಲ್ಲಿ ನಮ ಚರ್ಮಕ್ಕೆ ಅಗತ್ಯವಾಗಿ ಬೇಕಾಗುವಂತಹ ಕೊಬ್ಬಿನ ಅಂಶ ಇರುತ್ತೆ ಈ ಪಿಸ್ತವನ್ನು ತಿನ್ನುವುದರಿಂದ. ಹಾಗಾಗಿ ಚರ್ಮ ತುಂಬಾ ಸಾಫ್ಟ್ ಆಗಿ ಇರೋದಕ್ಕೆ ತುಂಬಾನೇ ಸಹಾಯ ಆಗುತ್ತೆ.
ಕಣ್ಣಿನ ಆರೋಗ್ಯಕ್ಕೂ ಕೂಡ ಒಳ್ಳೆಯದು. ಕಣ್ಣಿನ ದೃಷ್ಟಿ ಸಮಸ್ಯೆ ಬರಬಾರದು ಅಂತ ಆದರೆ ನಾವು ಕೂಡ ಈ ಪಿಸ್ತವನ್ನು ಬಳಸಬಹುದು.

ಜೀರ್ಣ ಸಂಬಂಧಿ ಸಮಸ್ಯೆ ಇರುವರಿಗೂ ಕೂಡ ತುಂಬಾನೇ ಒಳ್ಳೆಯದು ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ. ಹಾಗೇನೇ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳುವುದಕ್ಕೆ ಕೂಡ ನಮ್ಮ ಜೀರ್ಣಾಂಗ ವ್ಯೂಹಕ್ಕೆ ಇದರ ಅಗತ್ಯ ಖಂಡಿತವಾಗಿಯೂ ಇರುತ್ತೆ.ಹಾಗೇನೆ ಕರಳಿನ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಗಳನ್ನು ಇದು ಹೆಚ್ಚಿಸುವುದರ ಮೂಲಕ. ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ.ನಾವು ಪ್ರತಿದಿನ ಐದಾರು ಪಿಸ್ತಾ ತಿಂದ್ರೆ ಕೂಡ ಸಾಕಾಗುತ್ತೆ. ನಾವು ಆರೋಗ್ಯವಂತರಾಗಿರೋದಕ್ಕೆ ಇದು ತುಂಬಾನೇ ಸಹಾಯಮಾಡುತ್ತದೆ

Leave A Reply

Your email address will not be published.