ಬಾವಲಿ ಪಕ್ಷಿ ಆಕಸ್ಮಿಕವಾಗಿ ಮನೆ ಒಳಗೆ ಬಂದರೆ ಏನನ್ನು ಸೂಚಿಸುತ್ತದೆ.

0 16

bat came inside house astrology in kannada : ಬಾವಲಿ ಪಕ್ಷಿಯನ್ನು ನಾವು ರಾಕ್ಷಸರ ಸ್ವರೂಪಕ್ಕೆ ಹೋಲಿಸುತ್ತೇವೆ. ಹಾಗೆಯೇ ದುಷ್ಟಶಕ್ತಿಗಳಿಂದ ನೊಂದಿರುವಂತವರಿಗೆ ಪ್ರಯೋಗ ಮಾಡಿ ಉಚ್ಚಾಟನೆಯನ್ನು ಮಾಡುವುದಕ್ಕೂ ಸಹ ಇದನ್ನು ಉಪಯೋಗಿಸುತ್ತಾರೆ. ಪುರಾಣ ಗ್ರಂಥಗಳಿಂದಲೂ ನೋಡಿಕೊಂಡು ಬಂದರು ಈ ಪಕ್ಷಿಯನ್ನು ರಾಕ್ಷಸರ ಸ್ವರೂಪ ಎಂದೇ ಹೇಳಲಾಗುತ್ತದೆ. ಆದ್ದರಿಂದ ಒಂದು ವೇಳೆ ಈ ಪಕ್ಷಿಯು ನಿಮ್ಮ ಮನೆ ಒಳಗೆ ಪ್ರವೇಶವಾಗುತ್ತಿದೆ ಮತ್ತು ಅದರ ವಾಸಸ್ಥಳವನ್ನು ನಿಮ್ಮ ಮನೆಯಲ್ಲಿ ಮಾಡಿಕೊಂಡಿದೆ ಎಂದರೆ, ಆ ಮನೆಯಲ್ಲಿ ದುಷ್ಟಶಕ್ತಿಗಳು ಜಾಸ್ತಿ ಇವೆ ಎಂಬುದನ್ನು ಸೂಚಿಸುತ್ತದೆ. ಇದರ ಜೊತೆಗೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಜಾಸ್ತಿ ಇರುತ್ತದೆ ಎಂಬುದನ್ನು ಸೂಚಿಸುತ್ತದೆ. ಕನಸಿನಲ್ಲಿ ಎಮ್ಮೆ ಬಂದರೆ!

ಹಾಗಾಗಿ ಆ ಮನೆಯಲ್ಲಿ ವಾಮಾಚಾರ, ತಾಂತ್ರಿಕ ಪ್ರಯೋಗ ಆಗಿದೆ ಎಂಬುದನ್ನು ತಿಳಿಸುತ್ತದೆ. ಆ ವ್ಯಕ್ತಿಯ ಮನೆಯ ಮೇಲೆ ವಾಮಾಚಾರವಾಗಿರುವುದರಿಂದ ಮುಖ್ಯವಾಗಿ ಮನೆ ಯಜಮಾನನ ಆರ್ಥಿಕ ಪರಿಸ್ಥಿತಿ, ದೈಹಿಕವಾಗಿನೊಂದು, ಅನಾರೋಗ್ಯಕ್ಕೀಡಾಗಿ ಸಾಯುವ ಒಂದು ಸನ್ನಿವೇಶವನ್ನು ಸಹ ತೋರಿಸುತ್ತದೆ.

bat came inside house astrology in kannada ಬಾವಲಿ ಪಕ್ಷಿ ಮನೆಯೊಳಗೆ ಪ್ರವೇಶವಾದರೆ ಅಲ್ಲಿ ಮೃತ್ಯುವಿದೆ ಎಂಬ ಅರ್ಥವನ್ನು ನೀಡುತ್ತದೆ. ಬಾವಲಿಯು ತೀರ ಕೆಟ್ಟ,ನೀಚ, ದರಿದ್ರ ತನವನ್ನು ತರುವ ಪಕ್ಷಿ. ಆದ್ದರಿಂದ ನಿಮ್ಮ ಮನೆಯ ಅಕ್ಕಪಕ್ಕ ಎಲ್ಲೇ ಇದ್ದರೂ ಸಹ ನಿಯಂತ್ರಣ ಮಾಡಿಕೊಳ್ಳಿ.ಸುಮ್ಮಸುಮ್ಮನೆ ಬಾವಲಿ ಪಕ್ಷಿಯು ಮನೆಗೆ ಪ್ರವೇಶ ಮಾಡುವುದಿಲ್ಲ. ಏನಾದರೂ ಆ ಮನೆಗೆ ವಾಮಾಚಾರವಾಗಿದ್ದರೆ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿದ್ದರೆ ಆ ಸಮಯದಲ್ಲಿ ಪ್ರವೇಶ ಮಾಡುತ್ತದೆ.

ಇದಕ್ಕೆ ಪರಿಹಾರವೆಂದರೆ, ಬಾವಲಿ ಪಕ್ಷಿಯು ಬಂದ ಸಮಯವನ್ನು ಬರೆದಿಟ್ಟುಕೊಳ್ಳಿ, ಒಂದು ದಿನ ಬರುತ್ತದೆಯೋ ಅಥವಾ ಪ್ರತಿನಿತ್ಯ ಬರುತ್ತದೆಯೊ ಎಂಬುದನ್ನು ಯೋಚನೆ ಮಾಡಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆ ಪಕ್ಷಿ ಪ್ರವೇಶ ಮಾಡಿದ ಸಮಯದಲ್ಲಿ ಯಾವ ಲಗ್ನ ನಡೆಯುತ್ತಿದೆ ಎಂಬುದು ಪ್ರಶ್ನಾ ಶಾಸ್ತ್ರದಲ್ಲಿ ತಿಳಿಯುತ್ತದೆ. ಪ್ರಶ್ನಶಾಸ್ತ್ರ ದಲ್ಲಿ ತಿಳಿಯಬೇಕೆಂದರೆ ಸಮಯವನ್ನು ಸರಿಯಾಗಿ ಬರೆದು ಇಡಿ ಮತ್ತು ಜ್ಯೋತಿಷ್ಯರನ್ನು ನೀವು ಬರೆದುಕೊಂಡ ಸಮಯವನ್ನು ತೆಗೆದುಕೊಂಡು ಹೋಗಿ ಅವರನ್ನು ಕಾಣಬೇಕಾಗುತ್ತದೆ ಇದರಿಂದ ಕೊಂಚ ಪರಿಹಾರವು ಸಿಗಲಿದೆ. ಕನಸಿನಲ್ಲಿ ಎಮ್ಮೆ ಬಂದರೆ!

Leave A Reply

Your email address will not be published.