ಮೂಳೆ ಮುರಿದಾಗ ಯಾವ ಆಹಾರ ತಿನ್ನಬೇಕು!

0 0

Foods to heal broken bones ನಡೆಯುವಾಗ, ಓಡುವಾಗ, ಅಥವಾ ಆಟವಾಡುವಾಗ ಕೆಲವೊಮ್ಮೆ ಎಡವಿ ಬೀಳುತ್ತೇವೆ. ಇದರಿಂದ ಮೂಳೆ ಮೂರಿತ ಉಂಟಾಗಬಹುದು. ಆಗ ವೈದ್ಯರ ಬಳಿ ಚಿಕಿತ್ಸೆ ಮಾಡುತ್ತೇವೆ. ಹಾಗೇ ಈ ಸಮಯದಲ್ಲಿ ಅದರ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ಮೂಳೆಗಳು ವೇಗವಾಗಿ ಸರಿಯಾಗುತ್ತದೆ.

ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

ಹಾಲು, ಮೊಸರು, ಗಿಣ್ಣು ಇತ್ಯಾದಿಗಳಲ್ಲಿ ಕ್ಯಾಲ್ಸಿಯಂ ಅಂಶವು ಅಧಿಕ ಮಟ್ಟದಲ್ಲಿದೆ. ಮೂಳೆಗಳನ್ನು ಬಲಗೊಳಿಸಲು ಪ್ರಮುಖವಾಗಿ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು ಇದು ನೈಸರ್ಗಿಕವಾಗಿ ಮೂಳೆಗಳನ್ನು ಸರಿಪಡಿಸುವುದು. ಹಾಗಾಗಿ ಇವುಗಳನ್ನು ಸೇವಿಸಿದರೆ ಮುರಿದ ಮೂಳೆಗಳು ವೇಗವಾಗಿ ಸರಿಯಾಗುವುದು

ಮೀನಿನಲ್ಲಿ ಅತ್ಯಧಿಕ ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಡಿ ಇದೆ. ನೀವು ಸೇವಿಸುವಂತಹ ಕ್ಯಾಲ್ಸಿಯಂ ಪರಿಣಾಮಕಾರಿಯಾಗಿ ಕೆಲಸ ಮಾಡಲು ವಿಟಮಿನ್ ಡಿ ಅತ್ಯಗತ್ಯ. ಮೀನಿನಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೂಳೆಗಳನ್ನು ಬಲಗೊಳಿಸಿ, ವೇಗವಾಗಿ ಚೇತರಿಸುವಂತೆ ಮಾಡುವುದು.

broken

ಸೋಂಪು ಕಾಳು ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕರವಾದ ವಿಷಯಗಳು!

ಕುಂಬಳಕಾಯಿ ಬೀಜಗಳನ್ನು ಸೇರಿಸಿಕೊಂಡರೆ ಅದರಿಂದ ಮುರಿದ ಮೂಳೆಗಳು ನೈಸರ್ಗಿಕವಾಗಿ ಸರಿಯಾಗುವುದು. ಕುಂಬಳಕಾಯಿಯಲ್ಲಿ ಇರುವಂತಹ ಖನಿಜಾಂಶಗಳು ಮೂಳೆಗಳು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು. ಅಲ್ಲದೇ ಒಂದು ವೇಳೆ ನಿಮ್ಮ ದೇಹದಲ್ಲಿ ವಿಟಮಿನ್ ಬಿ ಕೊರತೆ ಇದ್ದರೆ ಕುಂಬಳ ಬೀಜಗಳನ್ನು ತಿನ್ನುವ ಮೂಲಕ ಈ ಕೊರತೆಯನ್ನು ನೀಗಿಸಬಹುದು.

ಕೆಂಪು ಬಣ್ಣದ ಕ್ಯಾಪ್ಸಿಕಂ, ಮೊಟ್ಟೆಗಳು, ಕಪ್ಪು ಬೀನ್ಸ್ ಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳಲ್ಲಿರುವ ಅಂಶ ಮೂಳೆ ಬೆಳವಣಿಗೆಗೆ ತುಂಬಾ ಸಹಕಾರಿ. Foods to heal broken bones

Leave A Reply

Your email address will not be published.