ಕುಂಕುಮದ ಡಬ್ಬ;ಇಂದು ಸಂಪ್ರದಾಯದಲ್ಲಿ ಕುಂಕುಮ ಅನ್ನುವುದು ಒಂದು ಶ್ರೇಷ್ಠವಾದ ವಸ್ತು ಎಂದು ಹೇಳಬಹುದು ಇದು ವಿಶೇಷವಾಗಿ ಮದುವೆಯಾದ ಹೆಣ್ಣು ಮಕ್ಕಳಿಗೆ ಕುಂಕುಮ ಅನ್ನೋದು ತುಂಬಾ ಶ್ರೇಷ್ಠ ಎಂದು ಹೇಳಬಹುದು ತಾಳಿ ಕಟ್ಟುವ ಮೊದಲು ಮದುವೆಯಲ್ಲಿ ಕುಂಕುಮವನ್ನು ಇಡುತ್ತಾರೆ ಇದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ಹೆಣ್ಣು ಮುತ್ತೈದೆ ಆಗಿರುವ ತನಕವೂ ಸಹ ಕುಂಕುಮವು ಹಾಕಿಯ ಹಣೆಯ ಮೇಲೆ ಇರಬೇಕು ಎಂದು ಹಿಂದೂ ಸಂಪ್ರದಾಯ ಹೇಳುತ್ತದೆ ಅದೇ ಇತ್ತೀಚಿನ ಆಧುನಿಕ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಬಟ್ಟೆಗೆ ಸರಿಯಾಗುವುದಿಲ್ಲ ಎಂದು ಕುಂಕುಮ ಮತ್ತು ಕರಿಮಣಿಯನ್ನು ತೆಗೆದಿಟ್ಟು ಹೋಗುವುದನ್ನು ನಾವು ಕಾಣಬಹುದು ಇದು ಕೇವಲ ಹಿಂದು ಸಂಪ್ರದಾಯದಲ್ಲಿ ಮಾತ್ರ ಅಲ್ಲದೆ ವೈಜ್ಞಾನಿಕವಾಗಿಯೂ ಸಹ ಕುಂಕುಮ ಬಹಳ ಒಳ್ಳೆಯದು ಹಿಂದೂ ಸಂಪ್ರದಾಯ ಪ್ರಕಾರ ಯಾವ ಹೆಣ್ಣು ಮಗಳು ಕುಂಕುಮಕ್ಕೆ ಸರಿಯಾದ ರೀತಿಯ ಪಾಲನೆ ಮಾಡುವುದಿಲ್ಲವೋ ಆ ಹೆಣ್ಣು ಮಗಳ ಗಂಡನಿಗೆ ತುಂಬಾ ಕಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ
ಕುಂಕುಮವನ್ನು ಯಾವಾಗಲೂ ಸಹ ಖರೀದಿ ಮಾಡಿ ತೆಗೆದುಕೊಳ್ಳಬೇಕು ವಿಶೇಷವಾಗಿ ಹೆಣ್ಣು ಮಕ್ಕಳು ನಿಮ್ಮ ಒಂದು ಹಣದಲ್ಲಿ ಖರೀದಿ ಮಾಡಿ ಆ ಕುಂಕುಮವನ್ನು ಹಚ್ಚಬೇಕು.ಬೇರೆ ಹೆಣ್ಣು ಮಗಳು ತೆಗೆದುಕೊಂಡ ಕುಂಕುಮವನ್ನು ನೀವು ಯಾವುದೇ ಕಾರಣಕ್ಕೂ ಹಚ್ಚಬಾರದು.ಬೇರೆ ಕಡೆಗಳಿಂದ ಗಿಫ್ಟ್ ರೀತಿಯಲ್ಲಿ ಬಂದ ಕುಂಕುಮವನ್ನು ಯಾವುದೇ ಕಾರಣಕ್ಕೂ ನೀವು ಬಳಸಬಾರದು ಇದರಿಂದ ನಿಮಗೆ ಮತ್ತು ನಿಮ್ಮ ಗಂಡನಿಗೆ ಸಾಕಷ್ಟು ರೀತಿಯ ತೊಂದರೆಗಳು ಬರುತ್ತದೆ
ಮಹಿಳೆಯರು ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಕುಂಕುಮವನ್ನು ಇಟ್ಟುಕೊಳ್ಳಬಾರದು ಇದನ್ನು ಸರಿಯಾಗಿ ಪಾಲಿಸದಿದ್ದರೆ ಸಾಕಷ್ಟು ರೀತಿಯ ತೊಂದರೆಗಳು ನಿಮಗೆ ಬರುತ್ತದೆ.ನೀವು ನಿಮ್ಮ ಮುಟ್ಟಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಹ ಹೆಣ್ಣು ಮಕ್ಕಳು ಕುಂಕುಮವನ್ನು ಇಟ್ಟುಕೊಳ್ಳಲೇಬಾರದು ನಿಮಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ
ಮನೆಯಲ್ಲಿ ಕುಂಕುಮವು ಬೀಳುವುದು ತುಂಬಾ ಕೆಟ್ಟದು ಎಂದು ಹೇಳಲಾಗುತ್ತದೆ ಈ ಕಾರಣದಿಂದ ಆದಷ್ಟು ಮಕ್ಕಳ ಕೈಗೆ ಕುಂಕುಮವು ಸಿಗಬಾರದ ರೀತಿಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು.ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಬರುವ ಕುಂಕುಮಗಳನ್ನು ಮಹಿಳೆಯರು ಬಳಸುತ್ತಾರೆ ಇದನ್ನು ಯಾವುದೇ ಕಾರಣಕ್ಕೂ ಮಾಡಬಾರದು
ಕೈತಪ್ಪಿ ಏನಾದರೂ ನಿಮ್ಮ ಕೈಯಿಂದ ಕುಂಕುಮಗಳು ಕೆಳಗೆ ಬಿದ್ದಿ ಹೋದರೆ ನೀವು ತಕ್ಷಣ ಅದನ್ನು ಹಾಕುವುದನ್ನು ಮಾಡಬಾರದು ಪಾರ್ವತಿ ದೇವಿಗೆ ಕ್ಷಮೆ ಕೇಳಬೇಕು.ನೀವು ನಿಮ್ಮ ಕುಂಕುಮದ ಡಬ್ಬದಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕಾಗುತ್ತದೆ ಇದರಿಂದ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ ಇದರಿಂದ ನಿಮಗೆ ಪಾರ್ವತಿಯ ಅನುಗ್ರಹ ದೊರೆಯುತ್ತದೆ ಮತ್ತು ಲಕ್ಷ್ಮಿ ದೇವಿಯ ಅನುಗ್ರಹವು ಸಹ ದೊರೆಯುತ್ತದೆ.