ಮನೆಯಲ್ಲಿ ಈ ರೀತಿಯ ಗಣೇಶ ವಿಗ್ರಹವನ್ನು ಇಟ್ಟರೆ ನಿಮಗೇ ವಿಪರೀತ ರಾಜಯೋಗ!

0 51

ವಾಸ್ತು ಶಾಸ್ತ್ರದ ಪ್ರಕಾರ ಹಣಕಾಸು ವಿದ್ಯಾಭ್ಯಾಸ ಆರೋಗ್ಯ ಭಾಗ್ಯ ಗಳಿಗಾಗಿ ಮನೆಯಲ್ಲಿ ಈ ರೀತಿಯ ಗಣೇಶನನ್ನು ಇಟ್ಟು ಪೂಜೆ ಮಾಡಿದರೆ ಬಹಳ ಒಳ್ಳೆಯದು. ವಾಸ್ತು ಶಾಸ್ತ್ರದ ಪ್ರಕಾರ ಗಣೇಶನನ್ನು ಈ ರೀತಿಯಾಗಿ ಮುಖ ಮಾಡಿ ಇಟ್ಟರೆ ಐಶ್ವರ್ಯ ಹಾಗೂ ಸಿರಿವಂತಿಕೆ ಪ್ರಾಪ್ತಿ ಆಗುವುದು ನಿಶ್ಚಿತ. ನಮ್ಮ ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವುದೇ ದೇವರ ಫೋಟೋ ಅಥವಾ ವಿಗ್ರಹವನ್ನು ಯಾವ ದಿಕ್ಕಿನಲ್ಲಿ ಇಟ್ಟು ಪೂಜಿಸಿದರೆ ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ.

ಅದೇ ರೀತಿ ಗಣೇಶ ಅಥವಾ ವಿನಾಯಕ ಎಂದು ಕರೆಯುವ ದೇವರ ಫೋಟೋವನ್ನು ಅಥವಾ ಮೂರ್ತಿಯನ್ನು ಯಾವ ರೀತಿ ಇಡಬೇಕು ಜೊತೆಗೆ ಯಾವ ರೀತಿಯ ಫೋಟೋ ಇಟ್ಟರೆ ಯಾವ ರೀತಿ ಅನುಕೂಲ ಆಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಎಲ್ಲರಿಗೂ ತಿಳಿದಿರುವ ಹಾಗೆ ವಿನಾಯಕ ಸಿದ್ಧಿ ಬುದ್ಧಿ ಕೊಡುವನು ವಿಜ್ಞಾನವನ್ನು ನಿವಾರಿಸುವನು. ಅದೇ ರೀತಿ ಮನೆಯಲ್ಲಿ ಯಾವ ರೀತಿಯ ಫೋಟೋ ಎಂದು ತಿಳಿಯೋಣ.

ಎಡಕ್ಕೆ ತಿರುಗಿದ ಸೊಂಡಲಿನ ಗಣೇಶ ವಿಗ್ರಹ: ಈ ಗಣೇಶ ಮನೆಯಲ್ಲಿ ಇಡಲು ಸೂಕ್ತವಾದ ವಿಗ್ರಹ ಆಗಿದೆ. ಎಡಕ್ಕೆ ತಿರುಗಿದ ಸೊಂಡಿಲಿನ ಗಣೇಶ ವಿಗ್ರಹವು ಚಂದ್ರನ ತತ್ವವನ್ನು ಪ್ರಚೋದಿಸುತ್ತದೆ. ಹಾಗಾಗಿ ಮನೆಯನ್ನು ಶಾಂತವಾಗಿರಿಸುತ್ತದೆ. ಅಲ್ಲದೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮತ್ತು ದುಷ್ಟ ಶಕ್ತಿಯನ್ನು ನಕಾರಾತ್ಮಕ ಶಕ್ತಿಯನ್ನು ಶಮನಗೊಳಿಸುತ್ತದೆ. ಮನೆಯಲ್ಲಿ ವಿಗ್ರಹವನ್ನು ಅಥವಾ ಫೋಟೋವನ್ನು ಇಡುವಾಗ ಯಾವಾಗಲೂ ಕುಳಿತಿರುವ ವಿಗ್ರಹವನ್ನು ಇಡಬೇಕು ನಿಂತ ವಿಗ್ರಹವನ್ನು ದೇವಸ್ಥಾನದಲ್ಲಿ ಮಾತ್ರ ಇಡಲು ಸೂಕ್ತ. ಮನೆಯಲ್ಲಿ ಇಡಲೇಬಾರದು.

ಬಲಕ್ಕೆ ತಿರುಗಿದ ಸೊಂಡಿಲಿನ ಗಣೇಶ ವಿಗ್ರಹ: ಬಲಕ್ಕೆ ತಿರುಗಿದ ಸೊಂಡೇಲಿನ ಗಣೇಶ ವಿಗ್ರಹವನ್ನು ಸಿದ್ಧಿ ವಿನಾಯಕ ಎಂದು ಕರೆಯಲಾಗುತ್ತದೆ. ಈ ರೀತಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸೂಕ್ತವಲ್ಲ ಇದನ್ನು ದೇವಾಲಯಗಳಲ್ಲಿ ಮಾತ್ರ ಇಡಲಾಗುತ್ತದೆ.

ಲಾಡನ್ನು ತೆಗೆದುಕೊಳ್ಳುವ ಗಣೇಶ ವಿಗ್ರಹ: ಲಾಡನ್ನು ತನ್ನ ಸೊಂಡಿಲಿನಲ್ಲಿ ತೆಗೆದುಕೊಳ್ಳುವ ಗಣೇಶ ವಿಗ್ರಹವನ್ನು ಮನೆಯಲ್ಲಿ ಇಟ್ಟರೆ ಆರ್ಥಿಕ ವಾಗಿ ಯಶಸ್ಸು ಸಿಗುತ್ತದೆ. ಹಣಕಾಸಿನ ತೊಂದರೆ ಪರಿಹಾರವಾಗುತ್ತದೆ.

ನೇರ ಸೊಂಡಿಲಿನ ಗಣೇಶ ವಿಗ್ರಹ : ನೇರವಾಗಿರುವ ಸುಂಡಿಲಿನ ಗಣೇಶ ವಿಗ್ರಹ ಸಿಗುವುದು ತುಂಬಾ ಅಪರೂಪ ಇದನ್ನು ಇಟ್ಟು ಮನೆಯಲ್ಲಿ ಪೂಜಿಸಿದರೆ ಮಕ್ಕಳ ಆರೋಗ್ಯ ಹಾಗೂ ಬುದ್ಧಿಶಕ್ತಿ ಎರಡು ವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ.

Leave A Reply

Your email address will not be published.