ಮೂಗುತಿ ಧರಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳು ಏನು ಗೊತ್ತಾ?

0 3

ಮೂಗುತಿ ಹಿಂದೂ, ಮುಸ್ಲಿಂ ಮತ್ತು ಕೆಲವು ಆಫ್ರಿಕನ್‌ ಸಂಸ್ಕೃತಿಗಳಲ್ಲಿ ನಾವು ನೋಡಬಹುದು. ಆದರೆ ಭಾರತದಲ್ಲಿ ಮೂಗುತಿ ಧರಿಸುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಭಾರತದಲ್ಲಿ ಮಹಿಳೆಯರು ಮೂಗು ಚುಚ್ಚಿಸಿಕೊಳ್ಳುವುದು ಪ್ರಮುಖ ಸಂಪ್ರದಾಯವಾಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರ, ಮೂಗುತಿ, ಕಾಲುಂಗುರ, ಕಿವಿಯೋಲೆ ಮತ್ತು ಕುಂಕುಮವನ್ನು ಮುತ್ತೈದೆಯರ ಲಕ್ಷಣಗಳೆಂದು ಹೇಳಲಾಗುತ್ತದೆ. ಆದರೆ ಮದುವೆಯಾಗದಿದ್ದವರೂ ಕೂಡ ಮೂಗುತಿಯನ್ನು ಧರಿಸುತ್ತಾರೆ.

ಭಾರತದಲ್ಲಿ ಮೂಗುತಿ ಧರಿಸುವುದು ಪ್ರಮುಖ ಸಂಪ್ರದಾಯವಾದರೂ ಕೂಡ ಇದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಂತೆ ಮೂಗುತಿ ಧರಿಸುವ ಕಾರಣ, ಮಹತ್ವ, ಸಂಪ್ರದಾಯಗಳು ಬದಲಾಗುತ್ತದೆ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಬಹಳಷ್ಟು ಉತ್ತಮವೆಂದು ಆಯುರ್ವೇದ ಕೃತಿಯಾದ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಮೂಗುತಿಯನ್ನು ಮದುವೆ ಸಂದರ್ಭಗಳಲ್ಲಿ ತಪ್ಪದೇ ಧರಿಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿಗೆ ಕುರಿತಂತೆ ಹಲವಾರು ನಂಬಿಕೆಗಳಿವೆ. ಕೆಲವು ನಂಬಿಕೆಗಳ ಪ್ರಕಾರ ಭಾರತದಲ್ಲಿ ಮಹಿಳೆಯರು ಮೂಗುತಿ ಧರಿಸುವ ಪದ್ಧತಿಯು ಮೊಗಲರ ಆಳ್ವಿಕೆ ಕಾಲದಲ್ಲಿ ಅಂದರೆ 16ನೇ ಶತಮಾಣದಲ್ಲಿ ಅಸ್ಥಿತ್ವಕ್ಕೆ ಬಂದಿತು.

ಮೂಗುತಿಯ ಹಿನ್ನೆಲೆ:
ಉಂಗುರದಾಕಾರದ ಮೂಗುತಿ ಧರಿಸುವುದನ್ನು ಕೆಲವು ಹಳೆಯ ಹಸ್ತಪ್ರತಿಗಳಲ್ಲಿ, ವೈದಿಕ ಲಿಪಿಗಳಲ್ಲಿ ಉಲ್ಲೇಖಿಸಲಾಗಿದೆ. ಮೂಗುತಿ ಧಾರಣೆಯು ಸುಮಾರು 6000 ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಒಳಗೊಂಡಿದೆ. ಮೂಗುತಿಯು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದ್ದು, ಸುಮಾರು 1970ರ ದಶಕದಲ್ಲಿ ಹಿಪ್ಪಿಗಳಲ್ಲಿ ಮೂಗು ಚುಚ್ಚುವಿಕೆಯ ಸಂಪ್ರದಾಯ ಕಾಣಿಸಿಕೊಂಡಿತು. ಈ ಸಂಪ್ರದಾಯವನ್ನು ಸುಮಾರು 1980 ರ ದಶಕದಲ್ಲಿ ವಿರೋಧಿಸಲಾಯಿತು. ನಂತರ ಹಿಪ್ಪಿಗಳು ಭಾರತಕ್ಕೆ ವಲಸೆ ಬರಲು ಆರಂಭಿಸಿದರು ಅವರ ಈ ಸಂಪ್ರದಾಯವನ್ನು ಕಂಡು ಭಾರತೀಯರು ಆಕರ್ಷಿತರಾದರು ಹಾಗೂ ಭಾರತದಲ್ಲೂ ರೂಢಿಗೆ ಬರಲು ಆರಂಭವಾಯಿತು.

ಆರೋಗ್ಯದ ದೃಷ್ಟಿಯಲ್ಲಿ ಮೂಗುತಿ:
ಆಯುರ್ವೇದ ಪದ್ಧತಿಯಲ್ಲಿ ಮೂಗುತಿಯು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆಯೆಂದು ಹೇಳಲಾಗಿದೆ. ಮೂಗಿನ ಹೊಳ್ಳೆಯ ಬಳಿ ಮೂಗುತಿ ಧರಿಸುವುದರಿಂದ ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ನೋವು ಕಡಿಮೆಯಾಗುತ್ತದೆ. ಆದ್ದರಿಂದ ಹುಡುಗಿಯರಿಗೆ ಹಾಗೂ ವಯಸ್ಕ ಮಹಿಳೆಯರಿಗೆ ಮೂಗನ್ನು ಚುಚ್ಚಲಾಗುತ್ತದೆ ಎಂದು ಹೇಳಲಾಗಿದೆ. ಎಡ ಮೂಗಿನ ಹೊಳ್ಳೆಯಿಂದ ಹಾದುಹೋಗುವ ನಿರ್ದಿಷ್ಟ ನರಗಳು ಸ್ತ್ರೀ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧವನ್ನು ಹೊಂದಿದ್ದು, ಇದು ಸ್ತ್ರೀಗೆ ಹೆರಿಗೆಗೆ ಸಹಕಾರಿ ಎನ್ನಲಾಗಿದೆ.

ಮೂಗುತಿಯ ಮಹತ್ವ:

ಹಿಂದೂ ಸಂಪ್ರದಾಯವಾಗಿದ್ದ ಮೂಗುತಿ ಧಾರಿಸುವುದು ದಿನಗಳು ಕಳೆದಂತೆ ಅಲಂಕಾರಿಕ ವಸ್ತುಗಳಾಗಿ ಮಾರ್ಪಾಡುಗೊಂಡಿತು. ಇತ್ತೀಚಿನ ಕೆಲವು ಮಹಿಳೆಯರು ಮೂಗಿಯನ್ನು ಧಾರ್ಮಿಕ ನಂಬಿಕೆಗಳೊಂದಿಗೆ ಧರಿಸಿದರೆ, ಇನ್ನು ಕೆಲವರು ತಮ್ಮ ಅಲಂಕಾರಕ್ಕಾಗಿ ಧರಿಸುತ್ತಾರೆ. ಮತ್ತೆ ಕೆಲವರು ಮೂಗುತಿಯನ್ನು ಧರಿಸುವುದೇ ಇಲ್ಲ. ಹಿಂದೆ ಹಿಂದೂ ಧರ್ಮೀಯರ ಮನೆಯಲ್ಲಿ ಒಂದು ಹೆಣ್ಣು ಮಗುವಿಗೆ 12 ಇಲ್ಲ 13 ವರ್ಷವಾಗುತ್ತಿದ್ದಂತೆ ಆ ಮಗುವಿಗೆ ಮೂಗು ಚುಚ್ಚಿಸುತ್ತಾರೆ. ಇದರರ್ಥ ಆ ಮಗು ಮದುವೆ ವಯಸ್ಸಿಗೆ ಬರುತ್ತಿದ್ದಾಳೆ ಎನ್ನುವುದನ್ನು ಸೂಚಿಸುವುದಾಗಿ. ಹಿಂದೂ ಧರ್ಮದಲ್ಲಿ ಕಿವಿ ಚುಚ್ಚುವಿಕೆಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಮೂಗು ಚುಚ್ಚಿಸುವಿಕೆಗೂ ಕೂಡ ನೀಡಲಾಗಿದೆ.

ಭಾರತದಲ್ಲಿ ಮೂಗುತಿಯ ಮಹತ್ವ:
ಭಾರತದಲ್ಲಿ ಮೂಗುತಿಯು ವಿವಾಹವಾದ ಅಂದರೆ ಸುಮಂಗಲಿಯ ಸಂಕೇತವಾಗಿದೆ. ಸುಮಂಗಲಿಯರು ಮೂಗುತಿಯನ್ನು ಧರಿಸುತ್ತಾರೆ ನಿಜ, ಆದರೆ ಯಾವುದೇ ಓರ್ವ ಮಹಿಳೆಯ ಪತಿ ತೀರಿಕೊಂಡಾಗ ಆಕೆಯ ಮೂಗುತಿಯನ್ನು ತೆಗೆದು ಹಾಕಲಾಗುತ್ತದೆ. ಹಿಂದೂ ಧರ್ಮದಲ್ಲಿ ಮೂಗುತಿ ಧರಿಸುವುದು ಪರಶಿವನ ಪತ್ನಿ ಪಾರ್ವತಿ ದೇವಿಯನ್ನು ಗೌರವಿಸುವುದು ಎಂಬರ್ಥವನ್ನು ನೀಡುತ್ತದೆ.

ಮೂಗುತಿಯ ಪ್ರಯೋಜನ
ಕೆಲವೊಂದು ಮೂಢನಂಬಿಕೆಗಳ ಪ್ರಕಾರ, ಪತ್ನಿಯು ಉಸಿರನ್ನು ಒಳತೆಗೆದುಕೊಂಡು ಹೊರಬಿಡುವಾಗ ಅದು ಗಂಡನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಮೂಗಿಗೆ ಮೂಗುತಿಯನ್ನು ಧರಿಸಿದರೆ ಆಕೆ ಉಸಿರಾಡುವ ಗಾಳಿಯು ಲೋಹದ ಅಂಶವನ್ನು ದಾಟಿ ಹೊರಬರುತ್ತದೆ ಆಗ ಆಕೆ ಉಸಿರಾಡುವ ಗಾಳಿಯಲ್ಲಿ ಯಾವುದೇ ಅನಾರೋಗ್ಯಕ್ಕೆ ಸಂಬಂಧಿಸಿದ ಅಂಶಗಳಿರುವುದಿಲ್ಲವೆಂದು ಹೇಳಲಾಗಿದೆ.

ಸಾಮಾನ್ಯವಾಗಿ ಕುದುರೆಯನ್ನು ನಿಯಂತ್ರಿಸಲು ಮೂಗುದಾರವನ್ನು ಹಾಕುತ್ತಾರೆ. ಹಾಗೇ ಮಹಿಳೆಯರಲ್ಲಿನ ಕೋಪವನ್ನು, ಹಟವನ್ನು, ಚಂಚಲ ಸ್ವಭಾವವನ್ನು ನಿಯಂತ್ರಿಸಲು ಮೂಗುತಿಯನ್ನು ಹಾಕುತ್ತಾರೆ. ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ತಮಗೆ ಇಷ್ಟವಾಗುವಂತಹ ವಿನ್ಯಾಸದಲ್ಲಿ ಮೂಗುತಿಯನ್ನು ಧರಿಸುತ್ತಾರೆ

Leave A Reply

Your email address will not be published.