ಬಾಯಿಂದ ಜೊಲ್ಲು ರಸ ಹರಿದು ದಿಂಬು ಒದ್ದೆಯಾಗುವ ಸಮಸ್ಯೆಗೆ ಮನೆ ಮದ್ದು!

0 10,135

ಮಕ್ಕಳು ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದು ಸಾಮಾನ್ಯ. ಆದರೆ ದೊಡ್ಡವರು ಸಹ ನಿದ್ರೆ ಮಾಡುವಾಗ ಜೊಲ್ಲು ಸುರಿಸಲು ಪ್ರಾರಂಭಿಸುತ್ತಾರೆ. ಹೊರಗಡೆ ಹೋದಾಗ ಹೀಗಾದರಂತೂ ಭಾರೀ ಮುಜುಗರವಾಗುವುದು ಸಹಜ. ಮಕ್ಕಳು ಜೊಲ್ಲು ಸುರಿಸಲು ಅನೇಕ ಕಾರಣಗಳಿವೆ. ಅವರಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಆದರೆ, ವಯಸ್ಕರಾದ ಮೇಲೂ ಜೊಲ್ಲು ಸುರಿಸಿದರೆ ನಿಜವಾಗಿಯೂ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಅನೇಕ ಜನರು ಈ ಸಮಸ್ಯೆಯನ್ನು ವೈದ್ಯರ ಬಳಿ ಚರ್ಚಿಸುವುದೇ ಇಲ್ಲ. ಆದ್ದರಿಂದ ಇಲ್ಲಿ ವಯಸ್ಕರು ನಿಜಕ್ಕೂ ಜೊಲ್ಲು ಸುರಿಸುವುದಕ್ಕೆ ಕಾರಣಗಳೇನು ಮತ್ತು ಅದನ್ನು ನಿಯಂತ್ರಿಸಲು ನೀವು ಏನು ಮಾಡಬಹುದು ಎಂಬ ವಿಷಯ ಕೊಡಲಾಗಿದೆ. ಈ ಸರಳ ಪರಿಹಾರಗಳು ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದನ್ನು ಕಡಿಮೆ ಮಾಡುತ್ತದೆ ಅಥವಾ ನಿವಾರಿಸುತ್ತದೆ. ಒಂದು ವೇಳೆ ಈ ಸಮಸ್ಯೆ ತೀವ್ರವಾದರೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

​ಹೆಚ್ಚು ಲಾಲಾರಸದ ಉತ್ಪಾದನೆ: ಲಾಲಾರಸವು ನಮಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಇದು ಬಹಳಷ್ಟು ಖನಿಜಗಳನ್ನು ಹೊಂದಿದೆ ಮತ್ತು ನಮ್ಮ ಗಾಯಗಳನ್ನು ಗುಣಪಡಿಸುತ್ತದೆ. ಆದರೆ ನೀವು ಯಾವುದೇ ರೀತಿಯ ಸೋಂಕು, ಗಾಯ ಅಥವಾ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೇಹವು ಹೆಚ್ಚು ಲಾಲಾರಸವನ್ನು ಉತ್ಪಾದಿಸುತ್ತದೆ. ಇದು ನಿದ್ರೆ ಮಾಡುವ ಸಮಯದಲ್ಲಿ ಜೊಲ್ಲು ಸುರಿಸಲು ಕಾರಣವಾಗಬಹುದು.

​ಮಲಗುವ ಭಂಗಿ: ಕೆಲವರು ಮಕಾಡೆ ಮಲಗಿ ನಿದ್ರೆ ಮಾಡುವಾಗ ಬಾಯಿ ತೆರೆದು ಮಲಗುತ್ತಾರೆ. ಈ ಭಂಗಿಯು ಜೊಲ್ಲು ಸುರಿಸಲು ಕಾರಣವಾಗಬಹುದು.ಮೂಗಿನ ಹೊಳ್ಳೆ ಕಟ್ಟಿಕೊಂಡಾಗ: ಶೀತದಿಂದಾಗಿ ಮೂಗಿನ ಹೊಳ್ಳೆಗಳು ಕಟ್ಟಿಕೊಂಡಾಗ ನಿಮಗೆ ಉಸಿರಾಡಲು ಕಷ್ಟವಾಗುತ್ತದೆ. ಇದು ಅತಿಯಾದ ಜೊಲ್ಲು ಸುರಿಸುವುದಕ್ಕೆ ಕಾರಣವಾಗಬಹುದು ಮತ್ತು ತೆರೆದ ಬಾಯಿಯಿಂದ ಉಸಿರಾಡುವಾಗ ಲಾಲಾರಸವನ್ನು ಕೆಳಕ್ಕೆ ಇಳಿಸಲು ದಾರಿ ಮಾಡಿಕೊಡುತ್ತದೆ.

​ಜೊಲ್ಲು ಸುರಿಸುವುದು ನಿಲ್ಲಿಸಲು ಇಲ್ಲಿದೆ ಸುಲಭೋಪಾಯಗಳು

ಮಲಗುವ ಭಂಗಿ ಬದಲಾಯಿಸಿ: ನಿಮ್ಮ ನಿದ್ರೆಯ ಭಂಗಿಯನ್ನು ಬದಲಾಯಿಸುವುದರ ಮೂಲಕ ಜೊಲ್ಲು ಸುರಿಸುವುದನ್ನು ನಿಲ್ಲಿಸಲು ಸುಲಭವಾದ ಮಾರ್ಗವಾಗಿದೆ ಮತ್ತು ಮೊದಲನೆಯ ಪರಿಹಾರವಾಗಿದೆ. ನಿಮ್ಮ ಹೊಟ್ಟೆಯ ಮೇಲೆ ಮಲಗುವ ಬದಲು, ನಿಮ್ಮ ಬೆನ್ನಿನ ಮೇಲೆ ಮಲಗಲು ಪ್ರಯತ್ನಿಸಿ. ಈ ರೀತಿಯಾಗಿ ನಿಮ್ಮ ಬಾಯಿಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಲಾಲಾರಸವು ನಿಮ್ಮ ಹೊರಬರುವುದಿಲ್ಲ.

​ಸಿಟ್ರಸ್ ಹಣ್ಣುಗಳನ್ನು ಸೇವಿಸಿ: ಸಿಟ್ರಸ್ ಹಣ್ಣುಗಳು ಲಾಲಾರಸವನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ ಮತ್ತು ಜೊಲ್ಲು ಸುರಿಸುವುದನ್ನು ಸಮರ್ಥವಾಗಿ ತಡೆಯಬಹುದು. ನೀವು ಮಲಗುವ ಮೊದಲು ಸ್ವಲ್ಪ ನಿಂಬೆ ನೀರು ಅಥವಾ ಇತರ ಸಿಟ್ರಸ್ ಹಣ್ಣುಗಳನ್ನು ಸೇವಿಸಬಹುದು.

​ಮೌಖಿಕ ಉಪಕರಣವನ್ನು ಬಳಸುವುದು: ಮಂಡಿಬುಲರ್ ಎಂದು ಕರೆಯಲ್ಪಡುವ, ಬಾಯಲ್ಲಿ ಇಟ್ಟುಕೊಳ್ಳಬಹುದಾದ ಮೌಖಿಕ ಉಪಕರಣವನ್ನು ಬಳಸುವ ಮೂಲಕ ಜೊಲ್ಲು ಸುರಿಸುವುದು ಮತ್ತು ಗೊರಕೆ ಹೊಡೆಯುವುದನ್ನು ತಡೆಯಬಹುದು. ಇದನ್ನು ನಿಮ್ಮ ನಾಲಿಗೆಯಲ್ಲಿ ಸರಿಯಾದ ಸ್ಥಳದಲ್ಲಿ ಇಡಬೇಕಾಗುತ್ತದೆ. ನೀವು ಅದನ್ನು ಆನ್‌’ಲೈನ್‌’ನಲ್ಲಿ ಖರೀದಿಸಬಹುದು ಅಥವಾ ಮೆಡಿಕಲ್ ಶಾಪ್’ನಲ್ಲಿ ಪಡೆಯಬಹುದು. ನಿಮಗೆ ಹೆಚ್ಚು ಆರಾಮವಾಗಿ ನಿದ್ರೆ ಮಾಡಲು ಮತ್ತು ಜೊಲ್ಲು ಸುರಿಸುವುದನ್ನು ತಡೆಯಲು ಮತ್ತು ಗೊರಕೆಯನ್ನು ಕಡಿಮೆ ಮಾಡಲು ಈ ಉಪಕರಣವು ಸಹಾಯ ಮಾಡುತ್ತದೆ.

ಭಾಷಣ ಮಾಡುವ ಚಿಕಿತ್ಸೆಯನ್ನು ಪ್ರಯತ್ನಿಸಿ: ಹೌದು, ಇದನ್ನು ಕೇಳಿ ನಿಮಗೆ ಆಶ್ಚರ್ಯವಾದರೂ, ಇದು ನಿಜ. ಭಾಷಣ ಚಿಕಿತ್ಸೆಯಲ್ಲಿ, ನಿಮ್ಮ ನಾಲಿಗೆ ಮತ್ತು ಬಾಯಿಯ ಸ್ನಾಯುಗಳನ್ನು ಪರಿಪೂರ್ಣ ಸ್ಥಾನದಲ್ಲಿರಲು ಮತ್ತು ನಿಮ್ಮ ತುಟಿಗಳನ್ನು ಒಟ್ಟಿಗೆ ಹಿಡಿದಿಡಲು ನಿಮ್ಮ ಮನಸ್ಸಿಗೆ ತರಬೇತಿ ನೀಡಬಹುದು. ಇಷ್ಟು ಮಾತ್ರವಲ್ಲ, ನಿಮ್ಮ ಬಾಯಿಯ ಮೇಲೆ ನಿಯಂತ್ರಣ ಹೊಂದಲು ಸಹಾಯ ಮಾಡುವ ಇತರ ವ್ಯಾಯಾಮಗಳನ್ನು ಸಹ ಮಾಡಬಹುದು.

​ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ: ಕೆಲವೊಮ್ಮೆ, ಸ್ಲೀಪ್ ಅಪ್ನಿಯಾ ಎಂಬ ಸಮಸ್ಯೆಯು ನಿದ್ದೆ ಮಾಡುವಾಗ ನಿಮಗೆ ಗೊರಕೆ ಮತ್ತು ಉಸಿರಾಟದಂತಹ ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಗಂಟಲು ನೋವು, ಹಗಲಿನಲ್ಲಿ ಅರೆನಿದ್ರಾವಸ್ಥೆ ಮತ್ತು ಒತ್ತಡಕ್ಕೂ ಕಾರಣವಾಗಬಹುದು. ಇದನ್ನು ನಿರ್ಲಕ್ಷಿಸಬಾರದು ಮತ್ತು ನೀವೇ ಪರಿಶೀಲಿಸಬೇಕು. ಸ್ಲೀಪ್ ಅಪ್ನಿಯಾ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Leave A Reply

Your email address will not be published.