ವೃಷಭ ರಾಶಿ ವರ್ಷ ಭವಿಷ್ಯ 2023! ಅದೃಷ್ಟ ಎಂದರೆ ಹಿಗಿರಬೇಕು! ಆಕಸ್ಮಿಕ ಐಷಾರಾಮಿ ಪ್ರಾಪ್ತಿ!   

0 0

2023ರ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷವನ್ನು ಅತ್ಯುತ್ತಮವಾಗಿ ಬರ ಮಾಡಿಕೊಂಡು ವರ್ಷ ಪೂರ್ತಿ ಸಂತೋಷದ ಕ್ಷಣಗಳನ್ನು ಕಳೆಯಲು ಜನರು ಉತ್ಸುಹಕರಾಗಿದ್ದಾರೆ. ಹೊಸ ವರ್ಷದೊಂದಿಗೆ ಹೊಸ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸಿದ್ಧರಾಗಿರುವವರಿಗೆ ಮುಂದಿನ ವರ್ಷದ ಭವಿಷ್ಯ ಹೇಗಿರಲಿದೆ ಎನ್ನುವ ಕುತೂಹಲವಿರಬಹುದು.

ವೃಷಭ ರಾಶಿಯವರಿಗೆ ಮುಂದಿನ ವರ್ಷ ಪ್ರೇಮ ಜೀವನ, ಆರ್ಥಿಕ ಜೀವನ, ವೈಯಕ್ತಿಕ, ವ್ಯಾಪಾರ, ಆರೋಗ್ಯ, ಮದುವೆ, ಆಸ್ತಿ, ಜಾತಕ ಹೇಗಿರಲಿದೆ ಎನ್ನುವ ಪ್ರಶ್ನೆ ಕಾಡುತ್ತಿರಬಹುದು. ಹಾಗಾದರೆ ಮುಂದಿನ ವರ್ಷ ವೃಷಭ ರಾಶಿ ಭವಿಷ್ಯ ಹೇಗಿರಲಿದೆ..? ಎನ್ನುವುದನ್ನು ವಿಸ್ತಾರವಾಗಿ ತಿಳಿಯೋಣ.

ವೃಷಭ: ಪ್ರೀತಿಯ ಜಾತಕ 2023

ವೃಷಭ ರಾಶಿಯವರ ಪ್ರೀತಿಯ ಜಾತಕದ ಪ್ರಕಾರ ವೃಷಭ ರಾಶಿಯ ವ್ಯಕ್ತಿಗಳು ಪ್ರೀತಿಯ ಸಂಬಂಧಗಳಲ್ಲಿ ಹೊಂದಾಣಿಕೆಯನ್ನು ಅನುಭವಿಸುತ್ತಾರೆ. ವಿಶೇಷವಾಗಿ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಈ ರಾಶಿಯವರು ಪ್ರೀತಿಯಲ್ಲಿ ಉತ್ತಮ ಅನುಭವವನ್ನು ಪಡೆಯುತ್ತಾರೆ. ಸಂಬಂಧದಲ್ಲಿ ಒಬ್ಬರಿಗೊಬ್ಬರು ಉತ್ತಮ ನಂಬಿಕೆಯನ್ನು ಹೊಂದಿದ್ದು, ಈ ರಾಶಿಯವರು ಪ್ರೀತಿಸಿದವರನ್ನು ಮದುವೆಯಾಗಬಹುದು. ಪ್ರೀತಿಯಲ್ಲಿ ಇರದವರು ಸಹ ಈ ವರ್ಷ ಮದುವೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ ತಿಂಗಳಿನಲ್ಲಿ ನಿಮ್ಮ ಸಂಬಂಧಗಳಲ್ಲಿ ಉತ್ತಮವಾಗಿರುತ್ತದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಎಚ್ಚರಿಕೆಯಿಂದಿರಿ. ಸಂಗಾತಿ ಜೊತೆಗಿನ ಸಂವಹನ ವಾದ ವಾದಗಳನ್ನು ಉಂಟುಮಾಡಬಹುದು. ಹಾಗೂ ಅದು ಹೆಚ್ಚಾಗಬಹುದು. ಹೀಗಾಗಿ ಡಿಸೆಂಬರ್‌ನಲ್ಲಿ ವೃಷಭ ರಾಶಿಯ ವ್ಯಕ್ತಿಗಳು ಪ್ರೀತಿ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಇನ್ನು 2023ರ ವರ್ಷವಿಡೀ ನಿಮ್ಮ ಸಂಬಂಧದ ಬಗ್ಗೆ ನೀವು ಉತ್ತಮ ಭಾವನೆಯನ್ನು ಹೊಂದಿರುತ್ತೀರಿ. ನಿಮ್ಮ ಸಂಗಾತಿಯೊಡನೆ ಉತ್ತಮ ಸಂಬಂಧವನ್ನು ಮುಂದುವರಿಸುತ್ತೀರಿ.

ವೃಷಭ: ಉದ್ಯೋಗ ಜಾತಕ 2023

ವೃಷಭ ರಾಶಿಯವರ ಉದ್ಯೋಗ ಜಾತಕ 2023ರ ಪ್ರಕಾರ, ವೃಷಭ ರಾಶಿಯ ಜನರು ಕೆಲಸದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು 2023ರ ವರ್ಷ ಒಂದು ಉತ್ತಮ ಅವಕಾಶವಾಗಿದೆ. ಈ ರಾಶಿಯ ಜನರು ಜನವರಿ ತಿಂಗಳಲ್ಲಿ ಅಂದರೆ ವರ್ಷದ ಆರಂಭದಲ್ಲಿ ವರ್ಗಾವಣೆಯಂತಹ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ಉದ್ಯೋಗದಲ್ಲಿ ನೀವು ಶ್ರದ್ಧೆಯಿಂದ ತೊಡಗಿಕೊಂಡು ಅತ್ಯುತ್ತಮವಾಗಿರುವುದನ್ನು ನೀಡಲು ಗಮನಹರಿಸಬೇಕು. ಈ ವರ್ಷದ ಜೂನ್ ಮತ್ತು ನವೆಂಬರ್ ನಡುವೆ ಉದ್ಯೋಗದಲ್ಲಿ ಏರಿಳಿತಗಳು ಉಂಟಾಗಬಹುದು. ಕೆಲವು ನಿರ್ಣಾಯಕ ಉದ್ಯೋಗಗಳನ್ನು ಹೊಂದಿರುವ ಜನರು ಈ ಸಮಯದಲ್ಲಿ ಇಲಾಖೆ ಬದಲಾವಣೆಗಳು ಮತ್ತು ವರ್ಗಾವಣೆಗಳನ್ನು ಎದುರಿಸಬೇಕಾಗಬಹುದು. ಈ ರಾಶಿಯವರು 2023ರಲ್ಲಿ ಉದ್ಯೋಗ ಬದಲಾವಣೆಗಳಿಗೆ ಮತ್ತು ಹೊಸ ಉದ್ಯೋಗವನ್ನು ಹುಡುಕುವ ಸಾಧ್ಯತೆಗಳಿವೆ.

ವೃಷಭ: ಶಿಕ್ಷಣ ಜಾತಕ 2023

ವೃಷಭ ರಾಶಿಯವರ ಶಿಕ್ಷಣ ಜಾತಕ 2023ರ ಪ್ರಕಾರ, ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷದ ಮೊದಲ ಮೂರು ತಿಂಗಳು ಉತ್ತಮವಾಗಿರುತ್ತದೆ. ಗುರು ಅಥವಾ ಶ್ರೀ ಬೃಹಸ್ಪತಿ ಮಹಾರಾಜರ ಅನುಗ್ರಹದಿಂದ, ನೀವು ನಿಮ್ಮ ಅಧ್ಯಯನದಲ್ಲಿ ಆಸಕ್ತಿಯನ್ನು ಮುಂದುವರಿಸುತ್ತೀರಿ. ಅದು ನಿಮಗೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಮತ್ತು ನಿಮ್ಮ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುತ್ತದೆ. ವೃತ್ತಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಆಶಯ ಕೊನೆಗೂ ಈ ವರ್ಷ ಈಡೇರಲಿದೆ. ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ಈ ವರ್ಷ ನೀವು ಯಶಸ್ಸನ್ನು ಕಾಣಬಹುದು. ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳಿಗೆ ಫಲಿತಾಂಶ ಪಡೆಯುತ್ತಾರೆ ಮತ್ತು ಹೆಚ್ಚು ಆಸಕ್ತಿ ಹೊಂದಿರುವ ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶ ಪಡೆಯುವ ಸಾಧ್ಯತೆ ಇದೆ. ಈ ವರ್ಷ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವಕರ ಕನಸುಗಳು ಈಡೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೃಷಭ ರಾಶಿಯ ವಿದ್ಯಾರ್ಥಿಗಳು ಏಪ್ರಿಲ್ ಮತ್ತು ಜೂನ್ ನಡುವೆ ತಮ್ಮ ರಾಷ್ಟ್ರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.

ವೃಷಭ: ಆರ್ಥಿಕ ಜಾತಕ 2023

ವೃಷಭ ರಾಶಿಯವರ ಆರ್ಥಿಕ ಜಾತಕ 2023ರ ಪ್ರಕಾರ, ವೃಷಭ ರಾಶಿಯ ಜನರು 2023ರಲ್ಲಿ ಇಡೀ ವರ್ಷ ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತಗಳನ್ನು ಅನುಭವಿಸುತ್ತಾರೆ. ಜನವರಿಯಿಂದ ಏಪ್ರಿಲ್ ನಡುವೆ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ಹೊಸ ವರ್ಷವು ಉತ್ತಮವಾಗಿ ಪ್ರಾರಂಭವಾಗುತ್ತದೆ. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಅನೇಕ ವೆಚ್ಚಗಳು ಹೆಚ್ಚಾಗುತ್ತವೆ. ಧಾರ್ಮಿಕ ಮತ್ತು ಶುಭ ಕಾರ್ಯಗಳಿಗಾಗಿ ಸಾಕಷ್ಟು ಖರ್ಚು ಇರುತ್ತದೆ. ಇದರ ಜೊತೆಗೆ ನಿಮಗೆ ತಿಳಿಯದಂತೆ ಅನಗತ್ಯ ವೆಚ್ಚಗಳು ಉಂಟಾಗುತ್ತವೆ. ಅಕ್ಟೋಬರ್‌ನಿಂದ ಡಿಸೆಂಬರ್ವರೆಗೆ ವೆಚ್ಚಗಳು ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದರಿಂದ ಮ್ಮ ಆದಾಯವು ಹೆಚ್ಚಾಗಲು ಆರಂಭವಾಗುತ್ತದೆ. ಈ ವರ್ಷ ವೃಷಭ ರಾಶಿಯ ಜನರು ಪ್ರವಾಸ ಹಾಗೂ ಕೆಲವು ಕಾಯಿಲೆಗಳ ಚಿಕಿತ್ಸೆಗಾಗಿ ಹಣ ಖರ್ಚು ಮಾಡಬೇಕಾಗುವ ಸಾಧ್ಯತೆಗಳಿವೆ.

ವೃಷಭ: ಕುಟುಂಬ ಜಾತಕ 2023

ವೃಷಭ ರಾಶಿಯವರ ಕುಟುಂಬ ಜಾತಕ 2023ರ ಪ್ರಕಾರ, ವೃಷಭ ರಾಶಿಯ ಜನರು 2023ರಲ್ಲಿ ಕುಟುಂಬ ಜೀವನವು ಉತ್ತಮವಾಗಿರುತ್ತದೆ. ವರ್ಷದ ಆರಂಭದಲ್ಲಿ ನಿಮ್ಮ ಆದ್ಯತೆಯು ನಿಮ್ಮ ಕುಟುಂಬವಾಗಿರುತ್ತದೆ. ನಿಮ್ಮ ಸಂಪೂರ್ಣ ಗಮನವನ್ನು ನಿಮ್ಮ ಕುಟುಂಬದ ಸಂತೋಷಕ್ಕಾಗಿ ನೀಡುತ್ತೀರಿ. ಕೆಲಸ ಸೇರಿದಂತೆ ಇತರ ಮಾನಸಿಕ ಒತ್ತಡದ ಹೊರತಾಗಿಯೂ, ಕುಟುಂಬವನ್ನು ಸಂತೋಷವಾಗಿಡಲು ನೀವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೀರಿ. ಏಪ್ರಿಲ್‌ನಿಂದ ಆಗಸ್ಟ್ ನಡುವೆ ಮನೆಯಲ್ಲಿ ಮನಸ್ಥಾಪಗಳು ಉಂಟಾಗಬಹುದು. ಪ್ರೀತಿ ಪಾತ್ರರಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್‌ನಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. 2023ರಲ್ಲಿ ವೃಷಭ ರಾಶಿಯವರ ಮನೆಯಲ್ಲಿ ಶುಭ ಕಾರ್ಯ ನಡೆಯಲಿದ್ದು, ಧಾರ್ಮಿಕ ಮನಸ್ಥಿತಿ ಇರುತ್ತದೆ. 2023ರಲ್ಲಿ ಮನೆಯಲ್ಲಿ ಉತ್ಸಾಹದ ವಾತಾವರಣವಿದ್ದು, ಧನಾತ್ಮಕ ಶಕ್ತಿ ಇರುತ್ತದೆ.

ವೃಷಭ: ವಿವಾಹ ಜಾತಕ 2023

ವೃಷಭ ರಾಶಿಯವರ ವಿವಾಹ ಜಾತಕ 2023ರ ಪ್ರಕಾರ, 2023ರಲ್ಲಿ ಮದುವೆ ವಿಚಾರದಲ್ಲಿ ಏರಿಳಿತಗಳು ಉಂಟಾಗಬಹುದು. ವರ್ಷದ ಆರಂಭದಲ್ಲಿ ರಾಹು ಹನ್ನೆರಡನೇ ಮನೆಯಲ್ಲಿರುವುದರಿಂದ ವೈಯಕ್ತಿಕ ಸಂಬಂಧಗಳಲ್ಲಿಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಮಂಗಳನ ಹಿಮ್ಮುಖ ಅಂಶದ ಪರಿಣಾಮ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಮನಸ್ತಾಪ ಉಂಟಾಗಬಹುದು. ಏಳನೇ ಮನೆಯಲ್ಲಿ ಗುರು ಇರುವುದರಿಂದ ಕೆಟ್ಟ ಸಂದರ್ಭಗಳು ಉಂಟಾಗದಿದ್ದರೂ ಸಹ, ಈ ಬಗ್ಗೆ ಗಮನ ಹರಿಸಬೇಕಾಗುತ್ತದೆ. ವರ್ಷದ ಮಧ್ಯದಲ್ಲಿ ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗಲಿದೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವಿನ ಸಂಬಂಧ ಏಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗೆ ಉತ್ತಮವಾಗಿರುತ್ತದೆ. ಸಂಗಾತಿಯೊಡನೆ ಉತ್ತಮ ಸಮಯ ಕಳೆಯಲು ಸಾಕಷ್ಟು ಅವಕಾಶಗಳಿರುತ್ತದೆ. ಇದರಿಂದ ನಿಮ್ಮ ಸಂಬಂಧವೂ ಉತ್ತಮವಾಗಿರುತ್ತದೆ. ವರ್ಷದ ಕೊನೆಯ ಮೂರು ತಿಂಗಳುಗಳು ಎಂದಿನಂತೆ ಇರಲಿದ್ದು, ನಿಮ್ಮ ಜೀವನ ಸಂಗಾತಿಯ ಯೋಗಕ್ಷೇಮ ಮತ್ತು ಅವರ ಭಾವನೆಗಳನ್ನು ಪರಿಗಣಿಸಿ ನೀವು ನಡೆದುಕೊಳ್ಳಬೇಕಾಗುತ್ತದೆ.

ವೃಷಭ: ವ್ಯವಹಾರ ಜಾತಕ 2023

ವೃಷಭ ರಾಶಿಯವರ ವ್ಯವಹಾರ ಜಾತಕ 2023ರ ಪ್ರಕಾರ,ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವರ್ಷ ಫಲಪ್ರದವಾಗಲಿದೆ. ನಿಮ್ ಕಂಪನಿಯು ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ ಮತ್ತು ವಿದೇಶಿ ಸಂಬಂಧಿತ ವ್ಯಾಪಾರ ಬೆಳವಣಿಗೆಗೆ ಅವಕಾಶಗಳಿವೆ. ಜನವರಿ 17ರ ನಂತರ ನಿಮ್ಮ ವ್ಯವಹಾರವು ಉತ್ತಮವಾಗಿ ಮುಂದುವರಿಯುವ ಸಾಧ್ಯತೆಯಿದೆ. ನೀವು ಯಾವುದೇ ಬಹುರಾಷ್ಟ್ರೀಯ ಸಂಸ್ಥೆಗಳು ಅಥವಾ ವಿದೇಶಿ ರಾಷ್ಟ್ರಗಳನ್ನು ಸಂಪರ್ಕಿಸಿದರೆ ನಿಮ್ಮ ಸಂಸ್ಥೆಯು ಈ ವರ್ಷ ಇನ್ನಷ್ಟು ಬೆಳೆಯುವ ಅವಕಾಶವಿದೆ. ವ್ಯವಹಾರದದಲ್ಲಿ ನೀವು ಹೆಚ್ಚು ಸಮಯ ಕಳೆಯವುದರಿಂದ ಕುಟುಂಬದ ಸಂಬಂಧಗಳಲ್ಲಿ ಅಸಮಾಧಾನ ಮೂಡಬಹುದು. ಆದರೆ ನಿಮ್ಮ ಗಮನವು ಕಂಪನಿಯನ್ನು ಬೆಳೆಸುವುದರ ಮೇಲೆ ಮಾತ್ರ ಇರುತ್ತದೆ. ವೃಷಭ ರಾಶಿ ಭವಿಷ್ಯ 2023ರ ಪ್ರಕಾರ ವರ್ಷದ ಮಧ್ಯೆದಲ್ಲಿ ಆರ್ಥಿಕ ಯಶಸ್ಸನ್ನು ಪಡೆಯಬಹುದು. ಬಳಿಕ ಪರಿಸ್ಥಿತಿಯನ್ನು ವಿಶ್ಲೇಷಿಸಿ ಕಂಪನಿಯನ್ನು ನೀವು ಸೂಕ್ತ ಮಾರ್ಗದಲ್ಲಿ ಮುಂದುವರಿಸಬಹುದು.

ವೃಷಭ: ವಾಹನ ಮತ್ತು ಆಸ್ತಿ ಜಾತಕ 2023

ವೃಷಭ ರಾಶಿಯವರ ವಾಹನ ಮತ್ತು ಆಸ್ತಿ ಜಾತಕ 2023ರ ಪ್ರಕಾರ, ಈ ವರ್ಷವು ಆಸ್ತಿ ಲಾಭಕ್ಕಾಗಿ ಉತ್ತಮ ವರ್ಷವೆಂದು ಸಾಬೀತುಪಡಿಸಬಹುದು. ಈ ವರ್ಷ ನಿಮ್ಮ ವೆಚ್ಚಗಳು ಗಣನೀಯವಾಗಿರುತ್ತವೆ. ಈ ವರ್ಷ ನೀವು ಸ್ಥಿರ ಮತ್ತು ಚಿರ ಆಸ್ತಿಯನ್ನು ಖರೀದಿಸಬಹುದು. ಶನಿ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಮೇನಿಂದ ಜುಲೈ ತಿಂಗಳ ನಡುವೆ ನೀವು ದೊಡ್ಡ ಪ್ರಮಾಣದ ಆಸ್ತಿಯನ್ನು ಖರೀದಿಸಬಹುದು. ಅದು ನಿಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸುತ್ತದೆ. ಈ ಮಧ್ಯೆ, ದೊಡ್ಡ ವಾಹನವನ್ನು ಖರೀದಿಸುವ ಅವಕಾಶಗಳು ಸಹ ಇರುತ್ತದೆ. ಇದರಿಂದ ನಿಮಗೆ ಸಂತೋಷವಾಗುತ್ತದೆ. ಶುಕ್ರನ ಅನುಗ್ರಹವು ನಿಮಗೆ ಸಂಪೂರ್ಣವಾಗಿ ಅಗತ್ಯವಾಗಿರುತ್ತದೆ ಏಕೆಂದರೆ ಅದು ನಿಮ್ಮ ರಾಶಿಯ ಅಧಿಪತಿ ಮತ್ತು ವಾಹನವನ್ನು ಹೆಚ್ಚು ನಿಯಂತ್ರಿಸುವ ಗ್ರಹವಾಗಿದೆ. ಶುಕ್ರನ ಅನುಗ್ರಹದಿಂದ ಮೇ ಮತ್ತು ಜುಲೈ ತಿಂಗಳುಗಳು ವಾಹನ ಖರೀದಿಸಲು ಅನುಕೂಲಕರವಾದ ಸಮಯವಾಗಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

ವೃಷಭ: ಸಂಪತ್ತು ಮತ್ತು ಲಾಭ ಜಾತಕ 2023

ವೃಷಭ ರಾಶಿಯವರ ಸಂಪತ್ತು ಮತ್ತು ಲಾಭ ಜಾತಕ 2023ರ ಪ್ರಕಾರ, ಮುಂದಿನ ವರ್ಷವು ವೃಷಭ ರಾಶಿಯವರಿಗೆ ಆರ್ಥಿಕ ಏರಿಳಿತಗಳಿಂದ ತುಂಬಿರುತ್ತದೆ. ಜನವರಿಯಿಂದ ಏಪ್ರಿಲ್ ವರೆಗೆ ಆರ್ಥಿಕವಾಗಿ ಅತ್ಯುತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ವಿವಿಧ ಮಾರ್ಗಗಳಿಂದ ಹಣವನ್ನು ಪಡೆಯುವ ಅವಕಾಶಗಳಿರುತ್ತದೆ. ಆದಾಯ ಹೆಚ್ಚಿಸಲು ನೀವು ನಿಮ್ಮ ಕೆಲಸದ ಜೊತೆಗೆ ಬೇರೆ ವ್ಯವಹಾರವನ್ನು ಪ್ರಾರಂಭಬಹುದು. ಈ ಅವಧಿಯಲ್ಲಿ ಅತ್ಯಂತ ಜಾಗರೂಕರಾಗಿರಿ ಮತ್ತು ನಿಮ್ಮ ಹಣವನ್ನು ಸೂಕ್ತವಾಗಿ ಬಳಸಬೇಕಾಗುತ್ತದೆ. ಅವಧಿಯಲ್ಲಿ ಹಣಕಾಸಿನ ವೆಚ್ಚಗಳು ಹೆಚ್ಚಾಗಬಹುದು. ಅಲ್ಲದೇ ಲಾಭಗಳು ಕಡಿಮೆ ಕಾಣಬಹುದು. ಜಾತಕ ಪ್ರಕಾರ ನೀವು ಡಿಸೆಂಬರ್‌ನಲ್ಲಿ ಬಹಳಷ್ಟು ಹಣವನ್ನು ಕಳೆದುಕೊಳ್ಳಬಹುದು. ಈ ವರ್ಷದ ಅಕ್ಟೋಬರ್ ತಿಂಗಳು ಆರ್ಥಿಕ ಅಭಿವೃದ್ಧಿಯ ಸಂಕೇತವಾಗಿದೆ, ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ಬರುವ ಸಾಧ್ಯತೆ ಇದೆ. ಆದರೆ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ವೃಷಭ: ಆರೋಗ್ಯ ಜಾತಕ 2023

ವೃಷಭ ರಾಶಿಯವರ ಆರೋಗ್ಯ ಜಾತಕ 2023ರ ಪ್ರಕಾರ, ಈ ವರ್ಷ ಆರೋಗ್ಯದ ದೃಷ್ಟಿಯಿಂದ ಸಮಸ್ಯೆಗಳು ಮುಂದುವರಿಯುವ ಸಾಧ್ಯತೆಯಿರುವುದರಿಂದ, ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗುರುಗ್ರಹದಿಂದ ಮೊದಲ ಮೂರು ತಿಂಗಳಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ ಆದರೆ ಏಪ್ರಿಲ್ ನಂತರ ಅನಾರೋಗ್ಯಕ್ಕೆ ಅವಕಾಶವಿರಬಹುದು. ಏಕೆಂದರೆ ಶನಿಯು ನಿಮ್ಮ ಹತ್ತನೇ ಮನೆಯಲ್ಲಿರುತ್ತಾನೆ ರಾಹು ಮತ್ತು ಗುರುಗಳ ಸಂಯೋಗವು ತರುವ ಗುರು-ಚಾಂಡಲ್ ದೋಷದ ಕಾರಣದಿಂದಾಗಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ, 2023ರ ಜಾತಕದ ಪ್ರಕಾರ ಜೂನ್ 17 ರಿಂದ ನವೆಂಬರ್ 4ರ ನಡುವೆ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳಿಲ್ಲದಿದ್ದರೂ, ಸಾಮಾನ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ನಿಮ್ಮ ಆರೋಗ್ಯವನ್ನು ನೀವು ಸಂಪೂರ್ಣವಾಗಿ ಕಾಳಜಿ ವಹಿಸಬೇಕು ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಸೌಲಭ್ಯವನ್ನು ಪಡೆಯಬೇಕು.

ವೃಷಭ: ಅದೃಷ್ಟ ಜಾತಕ 2023

ವೃಷಭ ರಾಶಿಯವರ ಅದೃಷ್ಟ ಜಾತಕ 2023ರ ಪ್ರಕಾರ, ಶುಕ್ರನು ವೃಷಭ ರಾಶಿಯನ್ನು ಆಳುತ್ತಾನೆ. ವೃಷಭ ರಾಶಿಯವರ ಅದೃಷ್ಟ ಸಂಖ್ಯೆಗಳು 2 ಮತ್ತು 7. ವೃಷಭ ರಾಶಿಯವರಿಗೆ 2023 ಅದ್ಭುತವಾದ ವರ್ಷವಾಗಿದ್ದು, ಅದೃಷ್ಟದಿಂದ ಹೆಚ್ಚಿನ ಪ್ರತಿಫಲಗಳನ್ನು ಪಡೆಯುತ್ತಾರೆ. ನಿಮ್ಮ ಶೃದ್ಧೆ, ಬುದ್ಧಿವಂತಿಕೆ ಮತ್ತು ದೂರದೃಷ್ಟಿ ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ನೀವು ಶ್ರಮವಹಿಸಬೇಕಾಗುತ್ತದೆ. ಇದರಿಂದ ವರ್ಷದ ಅಂತ್ಯದ ವೇಳೆಗೆ ನೀವು ಉತ್ತಮ ಸ್ಥಾನದಲ್ಲಿರಲು ಸಾಧ್ಯವಾಗುತ್ತದೆ.

Leave A Reply

Your email address will not be published.