ಕಳಸದ ಪ್ರಾಮುಖ್ಯತೆ ಅದರ ಫಲಗಳು!

ಮನಸ್ಸಿಗೆ ಬಂದಂತೆ ಪೂಜೆ ಪುನಸ್ಕಾರ ಮಾಡುತ್ತೇವೆ.ಅದರೆ ಇಲ್ಲಿ ವಿಧಿ ವಿಧಾನಗಳನ್ನು ಹಂಚಿಕೊಳ್ಳುತ್ತಾ ಇದ್ದೇವೆ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಪಂಚಾ ದೇವತೆ ಗಳಾದ ಸೂರ್ಯ ಗಣೇಶ ದುರ್ಗಾ ಶಿವ ಮತ್ತು ವಿಷ್ಣು ದೇವತೆಗಳನ್ನು ತಪ್ಪದೆ ನೆನೆಯಬೇಕು. ಇದರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ದೇವಿ ದುರ್ಗೆಗೆ ದರ್ಬೆಯನ್ನು ಹಾಕಬಾರದು. ತುಳಸಿ ಹಾರವನ್ನು ಶಿವನಿಗೆ, ಗಣೇಶನಿಗೆ ಮತ್ತು ಭೈರವನಿಗೆ ಎಂದು ಹಾಕಬಾರದು. ದೇವರ ಮನೆಯಲ್ಲಿ ತುಂಬಾ ದೇವರ ಫೋಟೋ ಇಟ್ಟರು ಸಹ ಕಳಸ ಇಲ್ಲದ ಪೂಜಾ ಮಂದಿರ ಅಷ್ಟೊಂದು ಸಾರ್ಥಕತೆಯನ್ನು ಪಡೆಯುವುದಿಲ್ಲ ಎಂದು ಶಾಸ್ತ್ರ ಪುರಾಣದಲ್ಲಿ ಹೇಳುತ್ತಾರೆ.

ಕಳಸ ಎಂದರೆ ತಾಮ್ರದ ಚೊಂಬಿನಲ್ಲಿ ನೀರನ್ನು ತುಂಬಿ ಎಲೆಯನ್ನು ಇಟ್ಟು ಕಾಯಿ ಇಡುವುದು ಅಷ್ಟೇ ಕಳಸವಲ್ಲ. ಮನೆಯ ಪೂಜಾ ಮಂದಿರದಲ್ಲಿ ಒಂದು ಸಣ್ಣ ಚೊಂಬಿನಲ್ಲಿ ಗಂಗಾಜಲವನ್ನು ಇಡಬೇಕು.ಹೀಗೆ ಇದ್ದರೆ ಮಾತ್ರ ಅಲ್ಲಿ ಇರುವ ದೇವತೆಗಳ ಆಹ್ವಾನ ಕಳಸದ ಸ್ವರೂಪದಲ್ಲಿ ಇರುತ್ತದೆ. ಮಹಾ ಲಕ್ಷ್ಮಿ ಪೂಜೆ ಸತ್ಯ ನಾರಾಯಣ ಪೂಜೆ ವರಮಹಾಲಕ್ಷ್ಮಿ ಪೂಜೆಗೂ ಕಳಸವನ್ನು ಪ್ರತಿಷ್ಟಪಾನೇ ಮಾಡುತ್ತೇವೆ.

ಯಾವ ಉದ್ದೇಶಕ್ಕಾಗಿ ಕಳಸ ಪ್ರತಿಷ್ಟಪಾನೇ ಮಾಡುತ್ತಾರೆ ಎಂದರೆ ..?ಕಳಸ ಪ್ರತಿಷ್ಟಪನೆ ಮಾಡುವುದರಿಂದ ಕಳಸದ ನೀರಿನಲ್ಲಿ ದೇವರುಗಳು ಅನುಷ್ಠಾನ ಆಗುತ್ತದೆ. ಕಳಸದಲ್ಲಿ 5 ವೀಳ್ಯದೆಲೆ ಅಥವಾ 5 ಮಾವಿನ ಎಲೆ ಇಡುತ್ತೇವೆ. ಈ 5 ಎಲೆಗಳು 5 ಪಂಚೆದ್ರಿಯ ಸಮಯ ಎಂದು ಹೇಳುತ್ತಾರೆ ಹಾಗು ಕಳಸದ ಮೇಲೆ ಇಡುವ ಕಾಯಿ ಸಾಕ್ಷಾತ್ ದೇವರ ಮುಖ ಇದ್ದ ಹಾಗೆ ಎಂದು ಹೇಳುತ್ತಾರೆ. ಈ ರೀತಿಯಾಗಿ ಕಳಸವನ್ನು ಪ್ರತಿಷ್ಟಪಾನೇ ಮಾಡಿದಾಗ ಕಳಸದ ರೂಪದಲ್ಲಿ ದೇವರು ಜೀವಂತವಾಗಿ ಆಹ್ವಾನ ಆಗಿದ್ದರೆ ಎಂದು ಅರ್ಥ.

ಈ ರೀತಿ ಕಳಸ ಪ್ರತಿಷ್ಟಪಾನೇ ಮಾಡಿ ಪೂಜೆ ಮಾಡಿದರೆ ಎಲ್ಲಾ ಪೂಜೆಗಳು ಉತ್ತಮ ಫಲವನ್ನು ಕೊಡುತ್ತವೆ.ಪೂಜೆ ಮುಗಿದ ನಂತರ ಈ ಕಳಸದ ನೀರನ್ನು ಯಾರು ತುಳಿಯದೆ ಇರುವ ಜಾಗಕ್ಕೆ ತೆಂಗಿನಮರ ಅಥವಾ ಯಾರು ಆ ಸ್ಥಳಕ್ಕೆ ಹೋಗದೆ ಇರುವ ಗಿಡಕ್ಕೆ ಹಾಕಬೇಕು ಅಥವಾ ಹತ್ತಿರ ಇರುವ ನದಿಗೆ ವಿಸರ್ಜನೆ ಮಾಡಬೇಕು.

ಕಳಸದ ನೀರನ್ನು ಹೊರಗಡೆ ಹಾಕುವ ಮೊದಲು ಮನೆಯಲ್ಲಿ ಇರುವವರು ಆ ಕಳಸದ ನೀರನ್ನು ಒಮ್ಮೆ ಪ್ರೊಕ್ಷಣೆ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಹಾಗು ನಿಮ್ಮಲ್ಲಿ ಎಲ್ಲಾ ದರಿದ್ರಗಳು ಹೋಗುತ್ತವೆ ಹಾಗು ಲಕ್ಷ್ಮಿ ಅನುಗ್ರಹದಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಕೂಡ ದೂರ ಆಗುತ್ತದೆ. ಹಾಗಾಗಿ ಒಂದು ಎಲೆಯನ್ನು ತೆಗೆದುಕೊಂಡು ಕಳಸದ ನೀರನ್ನು ಪ್ರೊಕ್ಷಣೆ ಮಾಡಿಕೊಂಡರೆ ಬಹಳಷ್ಟು ಪುಣ್ಯ ಪ್ರಾಪ್ತಿ ಆಗುತ್ತದೆ.

ಕಳಸದ ಕಾಯಿಯನ್ನು ದೇವರ ಮುಖ ಎಂದು ಅಂದುಕೊಳ್ಳುತ್ತೇವೆ. ಹಾಗಾಗಿ ಆ ಕಾಯಿಯನ್ನು ಒಡೆಯಬಾರದು. ಅದನ್ನು ಯಾವುದಾದರು ನದಿಗೆ ವಿಸರ್ಜನೆ ಮಾಡಬೇಕು. ನದಿ ಇಲ್ಲವಾದರೆ ದೇವಸ್ಥಾನದಲ್ಲಿ ಹೋಮ ನಡೆಯುತ್ತಿದ್ದರೆ ಆ ಕಾಯಿಯನ್ನು ಕೊಡಬೇಕು. ಇದರಿಂದ ಉತ್ತಮ ಫಲವನ್ನು ಪಡೆಯುತ್ತಿರಿ. ಈ ರೀತಿಯಾಗಿ ದೇವರ ಕೋಣೆಯಲ್ಲಿ ಪ್ರತಿಷ್ಟಪನೆ ಮಾಡಬೇಕು. ಮನೆಯಲ್ಲಿ ಯಾವುದಾದರು ಪೂಜೆ ಇದ್ದರೆ ಕಳಸ ಪ್ರತಿಷ್ಟಿಸುವಾಗ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ದೇವರ ಅನುಗ್ರಹ ನಿಮಗೆ ಉತ್ತಮ ರೀತಿಯಲ್ಲಿ ಆಗುತ್ತದೆ ಹಾಗು ಇದರಿಂದಾಗಿ ಉತ್ತಮ ಫಲಗಳನ್ನು ಪಡೆಯುತ್ತಿರಿ.

Leave A Reply

Your email address will not be published.