ಎಳ್ಳಿನ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯವಿದು!

0 10

ಅಡಿಗೆ ಮನೆಯಲ್ಲಿರುವಂತಹ ಸಾಂಬಾರ್ ಪದಾರ್ಥಗಳು ತುಂಬಾನೇ ಆರೋಗ್ಯಕಾರಿ ಹಲವು ಚಿಕಿತ್ಸಾ ಗುಣಗಳನ್ನು ಹೊಂದಿರುತ್ತದೆ. ಇಂತಹ ಒಂದು ಸಾಂಬಾರು ಪದಾರ್ಥ ಎಂದರೆ. ಅದು ಎಳ್ಳು..ಎಳ್ಳು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದು. ಇದರಲ್ಲಿ ವಿಟಮಿನ್ ಬಿ. ಸಿ. ಸಿಂತಾಲ್. ಮನಿಯ . ತಾಮ್ರ ಮೆಗ್ನೀಷಿಯಂ. ಕಬ್ಬಿನಾಂಶ ಮತ್ತು ಪಾಸ್ಪರ ಅಂಶ ವಿದೆ. ಇದು ಉಷ್ಣಗುಣವನ್ನು ಹೊಂದಿರುವುದರಿಂದ. ಚಳಿಗಾಲದಲ್ಲಿ ಇದರ ಸೇವನೆ ಹೆಚ್ಚಾಗಿ ಮಾಡಲಾಗುತ್ತದೆ.

ಎಳ್ಳು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿಯೋಣ. ಸರಿಯಾದ ಸಮಯ ಯಾವುದು ದಿನದಲ್ಲೇ ಎಷ್ಟು ಎಳ್ಳಿನ ಸೇವನೆ ಮಾಡಬೇಕು. ಎಳ್ಳಿನಿಂದ ಲಾಭಗಳೇನು ಹಾಗೆಯೇ ಎಳ್ಳಿನ ಸೇವನೆಯಿಂದ ಆಗುವ ತೊಂದರೆಗಳೇನು. ಅನ್ನೋದನ್ನ ತಿಳಿದುಕೊಳ್ಳೋಣ.

ಕಪ್ಪು ಎಳ್ಳು ಹಾಗೂ ಬಿಳಿ ಎಳ್ಳು ಎರಡು ಕೂಡ ಪೋಷಕಾಂಶ. ಆಧಾರ ಎಂದೇ ಹೇಳಬಹುದು. ಈ ಪೋಷಕಾಂಶಗಳಿಂದ ನಮಗೆ ಉತ್ತಮ ಲಾಭ ಯಾವಾಗ ದೊರೆಯುತ್ತದೆ ಎಂದರೆ. ಇದರ ಸೇವನೆ ಸರಿಯಾದ ಸಮಯದಲ್ಲಿ ಮಾಡಿದರೆ ಮಾತ್ರ. ಆದ್ದರಿಂದಲೇ ಮೊದಲು ಎಳ್ಳು ಸೇವಿಸುವ ಸರಿಯಾದ ಸಮಯದ ಬಗ್ಗೆ ತೆಗೆದುಕೊಳ್ಳೋಣ.

ಸಾಮಾನ್ಯವಾಗಿ ಎಳ್ಳಿನ ಸೇವನೆಯನ್ನು ಯಾವಾಗ ಬೇಕಾದರೂ ಮಾಡಬಹುದು. ಆದರೆ ಎಳ್ಳಿನ ಸೇವನೆಯನ್ನು ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಮಾಡಿದರೆ. ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಲಾಭ ದೊರೆಯುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕೆನಿಲ್ಲ ಮಧ್ಯಾಹ್ನ ಊಟದ ಬಳಿಕ ಎಳ್ಳಿನ ಸೇವನೆ ಮಾಡಬಹುದು. ಕೆಲವರಿಗೆ ಮಧ್ಯಾಹ್ನದ ನಂತರ ಸಿಹಿ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಬೇಡದ ಸಿಹಿ ಪದಾರ್ಥಗಳನ್ನು.ಸೇವಿಸುವುದಕ್ಕಿಂತ. ಎಳ್ಳಿನ ಚಿಕ್ಕಿ ಅಥವಾ ಎಳ್ಳಿನ ಉಂಡೆಯನ್ನು ಸೇವಿಸಬಹುದು.ಹಾಗೆ ರಾತ್ರಿ ಸಮಯದಲ್ಲಿ ಕೂಡ ಎಳ್ಳನ್ನು ಸೇವನೆ ಮಾಡಬಹುದು.

ರಾತ್ರಿ ಊಟದ ನಂತರ ಎಳ್ಳಿನ ಲಡ್ಡನ್ನು ಸೇವಿಸಬಹುದು. ಇದರಿಂದ ಕೂಡ ಉತ್ತಮ ಲಾಭ ದೊರೆಯುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾದರೆ ಎಳ್ಳನ್ನು ಒಂದು ಚಮಚ ಚೆನ್ನಾಗಿ ಜಗಿದು ಸೇವಿಸಿ. ನಂತರ ಬಿಸಿ ನೀರು ಅಥವಾ ಬಿಸಿ ಹಾಲು ಕುಡಿದರೆ ಆರೋಗ್ಯಕ್ಕೆ ಉತ್ತಮ ಲಾಭ ದೊರೆಯುತ್ತದೆ. ಇವಿಷ್ಟು ಎಳ್ಳನ್ನು ಸರಿಯಾದ ಸಮಯದ ಬಗ್ಗೆ.

ಇವಾಗ ಎಳ್ಳನ್ನು ಸೇವಿಸುವ ದೊರೆಯುವ ಲಾಭಗಳೇನು ಅವು ಹೇಗೆ. ಹೇಗೆಲ್ಲಾ ಎಳ್ಳನ್ನು ಬಳಕೆ ಮಾಡಬಹುದು ಎಂದು ತಿಳಿಯೋಣ. ಕ್ಯಾಲ್ಸಿಯಂ ಮತ್ತು ಜಿಂಕ್ ಎಳ್ಳಿನಲ್ಲಿ ಇರುವುದರಿಂದ ಇದು ನಮ್ಮ ಮೂಳೆಗಳಿಗೆ ಬಹಳ ಉತ್ತಮ. ಕೀಲು ನೋವುಗಳ ಸಮಸ್ಯೆ ಇರುವವರು. ಎಳ್ಳು ಬಹಳ ಒಳ್ಳೆಯದು. ಅದರಲ್ಲೂ ಕೀಲು ನೋವು ಇರುವವರು ಒಣ ಅರಿಶಿಣ, ಶುಂಠಿ, ಮೆಂತ್ಯ, ಅಶ್ವಗಂಧ, ಇವೆಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು. ಇದರ ಪುಡಿ ತಯಾರಿಸಿಕೊಂಡು. ಈ ಪುಡಿಯನ್ನು ರಾತ್ರಿ ಒಂದು ಚಮಚ. ಬೆಳಗ್ಗೆ ಒಂದು ಚಮಚ. ಹಾಲಿನಲ್ಲಿ ಅಥವಾ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ. ಉತ್ತಮ ಪರಿಹಾರ ದೊರೆಯುತ್ತದೆ.

ಇದು ಚರ್ಮದ ಆರೈಕೆಗೆ ಬಹಳ ಉತ್ತಮ ಇದರ ಸೇವನೆಯಿಂದ ಚರ್ಮದಲ್ಲಿ ಕಾಂತಿ ಹೆಚ್ಚುತ್ತದೆ. ಹಾಗೆ ಅರ್ಥ ಚಮಚದಷ್ಟು. ಎಳ್ಳನ್ನು ಎರಡು ಚಮಚ ಹಾಲಿನಲ್ಲಿ ನೆನೆಸಿ. ಇದರ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತೊಳೆದರಿದ ಮುಖದ ಕಾಂತಿ ದುಪ್ಪಟ್ಟು ಹೆಚ್ಚಾಗುತ್ತದೆ.

ಎಳ್ಳಿನಲ್ಲಿ ಒಮೆಗಾ 3. ಒಮೇಗಾ 6. ಒಮೆಗಾ 9. ಫ್ಯಾಟಾ ಆಸಿಡ್ ಇದೆ. ಇದು ಕೂದಲನ್ನು ಸದೃಢವಾಗಿಸುತ್ತದೆ. ಇದರ ಸೇವನೆಯಿಂದ ಕೂದಲು ಸಂಪಾಗಿ ಬೆಳೆಯುತ್ತದೆ. ಇಂದು ಬರೀ ಸೇವನೆಯಿಂದ ಅಷ್ಟೇ ಅಲ್ಲ ಎಳ್ಳೆಣ್ಣೆಯಿಂದ. ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದರುವ ಸಮಸ್ಯೆ ದೂರವಾಗುತ್ತದೆ. ಕೂದಲಿಗೂ ಉತ್ತಮ ಪೌಷಕಾಂಶ ಪೋಷಣೆ ದೊರೆಯುತ್ತದೆ.

ಮಲಬದ್ಧತೆಗೆ ಉತ್ತಮ ಯಾರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತಪ್ಪದೇ ಎಳ್ಳಿನ ಸೇವನೆ ಮಾಡಿದರೆ ಉತ್ತಮ. ಇದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಮಲಬದ್ಧತೆ ಇರುವವರು ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಎಳ್ಳನ್ನು ಜಗಿದು ಸೇವಿಸಿ ಬಿಸಿ ನೀರನ್ನು ಕುಡಿಯಿರಿ.

ಇನ್ನು ಪೈಲ್ಸ್ ಸಮಸ್ಯೆ ಇರುವವರೆಗೂ ಕೂಡ ಒಳ್ಳೆಯದು. ಪೈಲ್ಸ್ ಸಮಸ್ಯೆ ಇರುವವರು ಒಂದು ಚಮಚ ಕಪ್ಪು ಎಳ್ಳನ್ನು ಸೇವಿಸಿ ತಣ್ಣೀರು ಕುಡಿಯುವುದರಿದ ಪೈಲ್ ಸಮಸ್ಯೆ ದೂರವಾಗುತ್ತದೆ.ನಿಶಕ್ತಿ ಆಯಾಸ ಕೂಡ ದೂರವಾಗುತ್ತದೆ. ಎಳ್ಳಿನಲ್ಲಿರುವ ಪ್ರೋಟೀನ್ ದೇಹಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದರಿಂದ ನಿಶಕ್ತಿ ದೂರವಾಗುತ್ತದೆ. ಹಾಗೂ ನಮ್ಮ ಜೀವನ ಕ್ರಿಯೆ ಚೆನ್ನಾಗಿ ಆಗುತ್ತದೆ. ಎಳ್ಳು ಹಲ್ಲುಗಳನ್ನು ಸಹ ಸದೃಢಗೊಳ್ಳಿಸುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುವುದರಿಂದ. ಎಳ್ಳಿನ ಸೇವನೆ ಹಲ್ಲುಗಳನ್ನು ಆರೋಗ್ಯವಾಗಿಡಲು ಸಹಾಯಕಾರಿ.

ಹೃದಯ ಆರೋಗ್ಯಕ್ಕೆ ಉತ್ತಮ. ಇದು ದೇಹದ ಬೇಡದ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುತ್ತದೆ. ಹಾಗೂ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಿದ್ದರೆ ಉತ್ತಮ ಆರೋಗ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಒಂದು ದಿನಕ್ಕೆ ಎಳ್ಳನ್ನು ಸೇವನೆ ಮಾಡಬೇಕು.

ಉತ್ತಮ ಆರೋಗ್ಯಕ್ಕೆ ದಿನದಲ್ಲೇ ಹತ್ತು ಗ್ರಾಂ ನಷ್ಟು ಅಂದರೆ ಒಂದು ಚಮಚ ದಷ್ಟು ಎಳ್ಳಿನ ಸೇವನೆ ಮಾಡಿದರೆ ಉತ್ತಮ ಹೆಚ್ಚೆಂದರೆ ದಿನದಲ್ಲಿ ಎರಡು ಚಮಚದಷ್ಟು ಸೇವನೆ ಮಾಡಬಹುದು. ಅದಕ್ಕಿಂತ ಅಧಿಕ ಸೇವನೆ ಬೇಡ ಯಾಕಂದರೆ ಎಳ್ಳು ಉಷ್ಣಗುಣವನ್ನು ಹೊಂದಿದೆ. ಆದ್ದರಿಂದ ಇದರ ಅಗತ್ಯಕ್ಕಿಂತ ಹೆಚ್ಚಿನ ಸೇವನೆ ಮಾಡಿದರೆ ಇದರಿಂದ ಲಾಭಕ್ಕಿಂತ ನಷ್ಟವೆ ಆಗಬಹುದು. ಹೌದು ಅಧಿಕಪ್ರಮಾಣದಲ್ಲಿ ಎಳ್ಳಿನ ಸೇವನೆ ಮಾಡುವುದರಿಂದ. ಹೊಟ್ಟೆ ನೋವು. ಲೂಸ್ ಮೋಷನ್ ಅಂತ ತೊಂದರೆ ಉಂಟಾಗಬಹುದು. ಎಳ್ಳಿನಲ್ಲಿ ಅಧಿಕ ಪ್ರಮಾಣ ನಾರಿನ ಅಂಶವಿದೆ. ಆದ್ದರಿಂದ ಇದರ ಅಧಿಕ ಸೇವನೆ ಒಳ್ಳೆಯದಲ್ಲ.ಇನ್ನು ಕಿಡ್ನಿ ಸಮಸ್ಯೆ ಇರುವವರು ಅಧಿಕ ಪ್ರಮಾಣದಲ್ಲಿ ಎಳ್ಳಿನ ಸೇವನೆ ಮಾಡಬಾರದು. ಹಾಗೆ ಗರ್ಭಿಣಿ ಮಹಿಳೆಯರು ಕೂಡ ಎಳ್ಳನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಬಾರದು..

Leave A Reply

Your email address will not be published.