ನೆಲ್ಲಿಕಾಯಿ ಕಷಾಯ/ಈ ಒಂದು ಸಸಿ ಹಲವು ರೋಗಗಳ ಭಂಡಾರ!

0 5,229

ಇನ್ನು ನೆಲ್ಲಿಕಾಯಿ ಗಿಡಮೂಲಿಕೆ ಕೂಡ ಲಭ್ಯವಿದೆ. ಇದನ್ನು ಚಹಾದಲ್ಲಿ ಬೆರೆಸಿ ಅಥವಾ ಕಷಾಯವಾಗಿ ಕುಡಿಯಬಹುದು. ಹಾಗೆಯೇ ಕಷಾಯ ತಯಾರಿಸುವಾಗ ಇನ್ಮುಂದೆ ನೆಲ್ಲಿಕಾಯಿಯನ್ನು ಕೂಡ ಬಳಸಿ.
ನೀವು ಆರೋಗ್ಯವಂತರಾಗಿಲು ಬಯಸಿದರೆ ಸೂಪರ್ ಫುಡ್​ ಸೇವನೆ ಅತ್ಯಗತ್ಯ. ಅದರಲ್ಲೂ ಭಾರತದಲ್ಲಿ ಕಂಡು ಬರುವ ಕೆಲ ಹಣ್ಣುಗಳ ಸೇವನೆಯ ಮೂಲಕ ಅನೇಕ ರೋಗಗಳಿಂದ ದೂರವಿರಬಹುದು. ಅವುಗಳಲ್ಲಿ ನೆಲ್ಲಿಕಾಯಿ ಕೂಡ ಒಂದು.

ಏಕೆಂದರೆ ನೆಲ್ಲಿಕಾಯಿ ನಮ್ಮ ದೇಹದ 46 ಪ್ರತಿಶತದಷ್ಟು ವಿಟಮಿನ್ ಸಿ ಮತ್ತು ಪೌಷ್ಠಿಕಾಂಶದ ಅಂಶಗಳನ್ನು ಪೂರೈಸಬಲ್ಲದು. ವಿಟಮಿನ್ ಸಿ ಹೇರಳವಾಗಿರುವ ಕಾರಣ, ಇದನ್ನು ರೋಗನಿರೋಧಕ ವರ್ಧಕವಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ಮಾತ್ರವಲ್ಲದೆ, ಈ ಸಣ್ಣ ಹಸಿರು ಹಣ್ಣನ್ನು ತಿನ್ನುವುದು ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸಹ ಬಲವಾಗಿರಿಸುತ್ತದೆ. ಹಾಗೆಯೇ ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಇದು ರಾಮಬಾಣವಾಗಿದೆ.

ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ಶೀತ ಕೆಮ್ಮನ್ನು ದೂರವಿರಿಸುತ್ತದೆ. ತಾಜಾ ನೆಲ್ಲಿಕಾಯಿಯ ರಸವನ್ನು ಹೊರತೆಗೆದು ಅದರಲ್ಲಿ ಜೇನುತುಪ್ಪ ಮತ್ತು ನಿಂಬೆ ಕುಡಿಯಿರಿ. ಹಾಗೆಯೇ ಇದರ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದಲ್ಲದೆ ಚಟ್ನಿಯ ರೂಪದಲ್ಲಿಯೂ ನೆಲ್ಲಿಕಾಯಿಯನ್ನು ಸೇವಿಸಬಹುದು.

ಇನ್ನು ನೆಲ್ಲಿಕಾಯಿ ಗಿಡಮೂಲಿಕೆ ಕೂಡ ಲಭ್ಯವಿದೆ. ಇದನ್ನು ಚಹಾದಲ್ಲಿ ಬೆರೆಸಿ ಅಥವಾ ಕಷಾಯವಾಗಿ ಕುಡಿಯಬಹುದು. ಹಾಗೆಯೇ ಕಷಾಯ ತಯಾರಿಸುವಾಗ ಇನ್ಮುಂದೆ ನೆಲ್ಲಿಕಾಯಿಯನ್ನು ಕೂಡ ಬಳಸಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು. ಹಾಗೆಯೇ ಉತ್ತಮ ರುಚಿಯನ್ನು ಸಹ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾಂಡಿ ರೂಪದಲ್ಲಿಯೂ ನೆಲ್ಲಿಕಾಯಿ ಲಭ್ಯವಿದೆ. ಹಾಗೆಯೇ ಸಿಹಿ ಪದಾರ್ಥಗಳಾಗಿ ಕೂಡ ನೆಲ್ಲಿಕಾಯಿಯನ್ನು ಬಳಸುತ್ತಿದ್ದಾರೆ. ಹೀಗಾಗಿ ಇಂತಹ ಪದಾರ್ಥಗಳತ್ತ ಹೆಚ್ಚಿನ ಗಮನ ಕೊಡಿ. ಇದರಿಂದ ರುಚಿಯ ಜೊತೆಗೆ ಆರೋಗ್ಯವನ್ನು ಸಹ ಹೆಚ್ಚಿಸಿಕೊಳ್ಳಬಹುದು.

Leave A Reply

Your email address will not be published.