ಲಿವರ್ ಡ್ಯಾಮೇಜ್ ಆದ್ರೆ ಏನೆಲ್ಲಾ ಸಮಸ್ಸೆಗಳಾಗ್ತಾವೆ ಗೊತ್ತಾ?ಯಾಕೃತಿನ ಅರೋಗ್ಯ ಕಾಪಾಡೋದು ಹೇಗೆ?
ಪ್ರತಿಯೊಬ್ಬರಿಗೂ ಪ್ರತಿಯೊಂದು ಅಂಗನು ತುಂಬಾನೇ ಮಹತ್ವನೇ ಬಿಡಿ.ಲಿವರ್ ಅಥವಾ ಯಾಕೃತ್ ಮಾನವ ದೇಹದ ಅತ್ಯ ಅಮೂಲ್ಯ ಅತ್ಯಂತ ಅವಶ್ಯಕ ಅಂಗ. ಇದನ್ನು ದೇಹದ ಅತೀ ದೊಡ್ಡ ಅಂಗ ಎಂದು ಹೇಳಲಾಗುತ್ತದೆ. ಚಯಪಾಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಲಿವರ್ ಹಲವಾರು ಕಾರ್ಯವನ್ನು ಮಾಡುತ್ತದೆ.ದೇಹದಲ್ಲಿ ಲಿವರ್ ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತದೆ. ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದರೆ ಮನೆಮದ್ದು ಸಹಾಯದಿಂದ ಸುಲಭವಾಗಿ ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಚುರುಕುಗೊಳಿಸಬಹುದು.
ಲಿವರ್ ನ ಪ್ರಾಮುಖ್ಯತೆ :1, ಲಿವರ್ ದೇಹಕ್ಕೆ ಬೇಕಾಗುವ ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ.2, ದೇಹದ ಹಾರ್ಮೋನ್ ಗಳನ್ನು ಬ್ಯಾಲೆನ್ಸ್ ಮಾಡುತ್ತದೆ.3,ದೇಹದಲ್ಲಿ ಇಂಮ್ಯೂನಿಟಿ ಪ್ರೊಡ್ಯೂಸ್ ಮಾಡುತ್ತದೆ.4,ರಕ್ತನಾಳಗಳಲ್ಲಿ ಬ್ಲಡ್ ಕ್ಲಾಟ್ ಆಗುವುದನ್ನು ತಡೆಗಟ್ಟುತ್ತದೆ.5, ಮುಖ್ಯವಾಗಿ ದೇಹದಲ್ಲಿ ಜೀರ್ಣಕ್ರಿಯೆಗೆ ಬೇಕಾಗುವಂತಹ ಬೈಜ್ಯೂಸ್ ಅನ್ನು ಪ್ರೊಡ್ಯೂಸ್ ಮಾಡುತ್ತದೆ.6, ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಸಂಪೂರ್ಣವಾಗಿ ಹೊರಹಾಕುತ್ತದೆ.7, ದೇಹದಲ್ಲಿರುವ ಕೊಲೆಸ್ಟ್ರಾಲ್ ಹೊರಹಾಕಲು ಸಹಾಯ ಮಾಡುತ್ತದೆ.
ಲಿವರ್ ಅನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಯಾವ ಯಾವ ಮನೆಮದ್ದು ಬಳಸಬೇಕು ಎಂದರೆ :ಲಿವರ್ ಆರೋಗ್ಯ ಹೆಚ್ಚಿಸಲು ಫ್ರೆಶ್ ಆದ ಜ್ಯೂಸ್ ಕುಡಿಯಬೇಕು. ಅದರಲ್ಲೂ ಸೋರೆಕಾಯಿ ಲಿವರ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಫ್ಯಾಟಿ ಲಿವರ್ ಹಾಗೂ ಲಿವರ್ ನಲ್ಲಿ ಇಂಪ್ಲಾಮೆಷನ್ ಆಗಿದ್ದರೆ ಅದನ್ನು ಕಡಿಮೆ ಮಾಡುವ ಗುಣ ಸೋರೆಕಾಯಿ ಜ್ಯೂಸ್ ನಲ್ಲಿ ಇದೆ.ಇದು ಕಿಡ್ನಿ ಮತ್ತು ಫ್ರೀ ರೆಡಿಕಲ್ಸ್ ಯಿಂದ ಪ್ರೊಟೆಕ್ಟ್ ಮಾಡುತ್ತದೆ.ದೇಹದಲ್ಲಿ ಇರುವ ಟಾಕ್ಸಿನ್ ಅನ್ನು ಹೊರ ಹಾಕಲು ಸೋರೆಕಾಯಿ ಸಹಾಯ ಮಾಡುತ್ತದೆ.ಅದರಿಂದ ಸೋರೆಕಾಯಿ ಲಿವರ್ ಗೆ ತುಂಬಾ ಒಳ್ಳೆಯದು.
ಸೋರೆಕಾಯಿ, ಕೊತ್ತಂಬರಿ ಸೊಪ್ಪು ಒಂದು ಚಮಚ ಅರಿಶಿಣ, ಅಮೃತ ಬಳ್ಳಿ ಜ್ಯೂಸ್ ಅನ್ನು ಹಾಕಬೇಕು,ಅರ್ಧ ಚಮಚ ಬ್ಲಾಕ್ ಸಾಲ್ಟ್ ಹಾಕಬೇಕು ಮತ್ತು ಒಂದು ಚಮಚ ನಿಂಬೆ ರಸ ಹಾಕಿ. ಇದನ್ನೆಲ್ಲಾ ಮಿಕ್ಸಿ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಸೋರೆ ಕಾಯಿ ಜ್ಯೂಸ್ ಅನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿಯಬೇಕು.ಇದನ್ನು ತಿಂಗಳಿಗೆ 4 ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.ಇದರಲ್ಲಿ ಬಳಸಿರುವ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು.ಈ ಜ್ಯೂಸ್ ಕುಡಿಯುವುದರಿಂದ ಒಳ್ಳೆಯ ಎನರ್ಜಿ ಬರುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಮೂಲಂಗಿ ಕೂಡ ಲಿವರ್ ಅನ್ನು ಶುದ್ದಿ ಮಾಡುವುದಕ್ಕೆ ತುಂಬಾ ಒಳ್ಳೆಯದು. ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಲಿವರ್ ನ ಶುದ್ಧಿಕರಣ ಮಾಡಬಹುದು.ಲಿವರ್ ಅನ್ನು ಡಿಟಕ್ಸಿಫೈಡ್ ಮಾಡಬಹುದು. ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಮತ್ತು ಫೈಬರ್ ಅಂಶ ಅಧಿಕವಾಗಿದೆ.ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.ಇದರಿಂದ ಲಿವರ್ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.
ಮೂಲಂಗಿ ಜ್ಯೂಸ್ : ಮೂಲಂಗಿ, ಮೂಲಂಗಿ ಸೊಪ್ಪು ಅನ್ನು ಮಿಕ್ಸ್ ಮಾಡಿ ಮತ್ತು ಬಿಟ್ರೋಟ್, ಶುಂಠಿ ಹಾಕಿ ಜ್ಯೂಸ್ ಮಾಡಿಕೊಳ್ಳಿ.ಇದನ್ನು ಊಟದ ನಂತರ ಕುಡಿಯಬೇಕು.ಇದನ್ನು ಕುಡಿಯುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ.ಅಷ್ಟೇ ಅಲ್ಲದೆ ಒಣ ದ್ರಾಕ್ಷಿ ಜ್ಯೂಸ್ ಕೂಡ ಲಿವರ್ ಗೆ ತುಂಬಾ ಒಳ್ಳೆಯದು.ಇದನ್ನು ತಿಂಗಳಿಗೆ 4 ಬಾರಿ ಕುಡಿದರೆ ಒಳ್ಳೆಯ ರಿಸಲ್ಟ್ ನಿಮಗೆ ತಿಳಿಯುತ್ತದೆ.ಇದನ್ನು ಡಯಾಬಿಟಿಸ್ ಸಮಸ್ಯೆ ಇರುವವರು ಸೇವಿಸಬಾರದು.