ಹಿಂದೂ ಧರ್ಮದ ಪ್ರಕಾರ ನಾಯಿ ಸಾಕುವುದು ಧರ್ಮವೇ ಅಥವಾ ಅಧರ್ಮವೇ?
ಕೆಲವರಿಗೆ ಸಾಕು ಪ್ರಾಣಿಗಳನ್ನು ಸಾಕುವ ಹವ್ಯಾಸ ಇರುತ್ತದೆ. ಕೆಲವರು ಬೆಕ್ಕು ಮತ್ತು ಇನ್ನು ಕೆಲವರು ಗಿಳಿ, ಪಾರಿವಾಳ ಅನ್ನು ಸಾಕುತ್ತಾರೆ.ತುಂಬಾ ಜನರು ಮನೆಯಲ್ಲಿ ನಾಯಿ ಸಾಕುವುದಕ್ಕೆ ಇಷ್ಟ ಪಡುತ್ತಾರೆ. ಇವು ಮನೆಯನ್ನು ಕಾಯುತ್ತವೆ ಮತ್ತು ಪ್ರತಿಯೊಬ್ಬರ ಒಂಟಿ ತನವನ್ನು ದೂರ ಮಾಡುವ ಕೆಲಸವನ್ನು ಈ ನಾಯಿಗಳು ಮಾಡುತ್ತವೆ. ಜೊತೆಗೆ ಇವು ತುಂಬಾ ನಿಯತ್ತಾಗಿ ಇರುವ ಪ್ರಾಣಿಗಳು ಕೂಡ ಆಗಿವೆ.ವಾಸ್ತು ಶಾಸ್ತ್ರದ ಅನುಸರವಾಗಿ ನಾಯಿಗಳನ್ನು ಸಾಕುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿಸಿದ್ದಾರೆ.
ನಾಯಿಯನ್ನು ಕಾಲ ಭೈರವನ ಸೇವಕ ಎಂದು ಗುರುತಿಸಲಾಗಿದೆ ಕಾಲ ಭೈರವನ ಫೋಟೋದಲ್ಲಿ ನೀವು ನಾಯಿಯನ್ನು ನೋಡಿಯೇ ಇರುತ್ತೀರಿ. ಇನ್ನು ನಾಯಿಗೆ ಅನ್ನ ಹಾಕಿದರೆ ಬೈರಾವನ ಆಶೀರ್ವಾದಕ್ಕೆ ನೀವು ಒಳಗಾಗುತ್ತೀರಿ. ಒಂದು ವೇಳೆ ನೀವು ನಾಯಿಗೆ ಒಡೆದರೆ ಮತ್ತು ಗಾಯವನ್ನು ಉಂಟು ಮಾಡಿದರೆ ನೀವು ದೊಡ್ಡ ಪಾಪಿ ಎಂದು ಹೇಳಬಹುದು.
ಒಂದು ವೇಳೆ ನಿಮ್ಮ ಮನೆಯಲ್ಲಿ ನಾಯಿ ಸಾಕಿದರೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಯಮದೂತರು ಸುಳಿಯುವುದಿಲ್ಲ. ಇನ್ನು ನಾಯಿ ಭವಿಷ್ಯದಲ್ಲಿ ನಡೆಯುವ ಘಟನೆ ಬಗ್ಗೆ ಇದು ಮೊದಲೇ ತಿಳಿದುಕೊಳ್ಳುತ್ತದೆ. ನಾಯಿ ಇರುವ ಕಡೆ ನಕಾರಾತ್ಮಕ ಶಕ್ತಿಗಳ ವಾಸ ಕೂಡ ಇರುವುದಿಲ್ಲ. ಜೊತೆಗೆ ರಾಹು ಕೇತು ಗ್ರಹಗಳ ದುಷ್ಟ ಪ್ರಭಾವದಿಂದ ಕೂಡ ನಿಮ್ಮನ್ನು ಕಾಪಾಡುವ ಕೆಲಸವನ್ನು ಮಾಡುತ್ತದೆ.ಮನೆಯಲ್ಲಿ ಉತ್ತರ ಪಶ್ಚಿಮ ಕೋಣೆಯಲ್ಲಿ ಮಲಗುವಂತಹ ನಾಯಿ ಇಡೀ ಪರಿಸರದಲ್ಲಿ ತಿರುಗಾಡುತ್ತಾ ಓಡಾಡುತ್ತ ಇರುತ್ತದೆ. ಇದರ ಅರ್ಥ ಈ ನಾಯಿಯೂ ಇಡೀ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಇರುತ್ತದೆ.
ಶಾಸ್ತ್ರಗಳ ಅನುಸಾರವಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ನಾಯಿ ಏನಾದರು ಇದ್ದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ. ಯಾವಾಗಲು ಸಾಕಾರತ್ಮಕ ಶಕ್ತಿಗಳೆ ಇರುತ್ತವೆ.ಎಷ್ಟೇ ಕಷ್ಟ ಪಟ್ಟರು ಕೆಲಸದಲ್ಲಿ ಯಶಸ್ಸು ಸಿಗದೇ ಇದ್ದರೆ ಇಂತಹ ಸಮಯದಲ್ಲಿ ಮನೆಯಲ್ಲಿ ನಾಯಿ ಸಾಕುವುದು ಉತ್ತಮವಾಗಿರುತ್ತದೆ. ನಾಯಿ ಸಾಕಿದರೆ ನಿಮ್ಮ ಭಾಗ್ಯ ನಿಮ್ಮ ಜೊತೆ ಇರುತ್ತದೆ ಮತ್ತು ನಿಮ್ಮ ಎಲ್ಲಾ ಅದೃಷ್ಟದ ದಾರಿ ತೆರೆಯಲು ಶುರು ಆಗುತ್ತದೆ. ನಾಯಿಯನ್ನು ಸಾಕಿದರೆ ಸ್ವಂತ ಲಕ್ಷ್ಮಿ ದೇವಿಯ ಆಗಮನ ಕೂಡ ಆಗುತ್ತದೆ.
ಮನೆಯಲ್ಲಿ ದಕ್ಷಿಣ ಪೂರ್ವದಲ್ಲಿ ವಾಸ ಮಾಡುವ ನಾಯಿಯು ತುಂಬಾ ಜಾಣ ಆಗಿರುತ್ತದೆ. ಇಂತಹ ನಾಯಿಗಳು ಮಾತು ಮಾತಿಗೂ ಗುರೈಸುತ್ತ ಇರುತ್ತವೆ. ಜನರಿಗೆ ಅದು ಕಚ್ಚುತ್ತದೆ ಎನ್ನುವ ಭಯ ಕೂಡ ಇರುತ್ತದೆ.ಇಂತಹ ನಾಯಿ ಮನೆಯಲ್ಲಿ ಇದ್ದರೆ ಸಂತೋಷ ನೆಲೆಸುತ್ತದೆ.
ಒಂದು ನಾಯಿ ಸಾಕುವುದಾದರೆ ಕಪ್ಪು ಬಣ್ಣದ ನಾಯಿಯನ್ನು ಸಾಕಿರಿ. ಈ ಬಣ್ಣದ ನಾಯಿಯನ್ನು ಸಾಕುವುದರಿಂದ ಹಲವಾರು ರೀತಿಯ ಲಾಭಗಳು ಕೂಡ ದೊರೆಯುತ್ತದೆ.ಕಪ್ಪು ಬಣ್ಣದ ನಾಯಿಯನ್ನು ಸಾಕುವುದರಿಂದ ಭಗವಂತನಾದ ಶನಿದೇವರ ಆಶೀರ್ವಾದ ಕೂಡ ಇರುತ್ತದೆ.