ವಿಭೂತಿ ಹೇಗೆ ತಯಾರಾಗುತ್ತದೆ?ವಿಭೂತಿ ಹಚ್ಚುವ ಹಿಂದಿನ ರಹಸ್ಯ?

ಪ್ರತಿಯೊಬ್ಬರು ಹಣೆಗೆ ವಿಭೂತಿ ಮತ್ತು ಬಸ್ಮ ಹಚ್ಚಿಕೊಳ್ಳುವುದು ಸರ್ವೆ ಸಾಮಾನ್ಯ ವಿಭೂತಿಯನ್ನು ನಾವು ತೋರುಬೆರಳು ಉಂಗುರ ಬೆರಳು ಮತ್ತು ಮಧ್ಯದ ಬೆರಳಿನ ಸಹಾಯದಿಂದ ನಾವು ಹಣೆಗೆ ಹಚ್ಚಿಕೊಳ್ಳುತ್ತೇವೆ ನಕಾರಾತ್ಮಕ ಶಕ್ತಿಗಳನ್ನು ಒಡೆದು ಉರುಳಿಸುವ ಶಕ್ತಿಯು ವಿಭೂತಿಯಲ್ಲಿದೆ ದುಷ್ಟಶಕ್ತಿ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುತ್ತದೆ ಮತ್ತು ಇದು ನಮ್ಮನ್ನು ರಕ್ಷಿಸುತ್ತದೆ ಪರಮಾತ್ಮ ಶಿವನು ತನ್ನ ದೇಹದ ತುಂಬಾ ವಿಭೂತಿಯನ್ನು ಹಚ್ಚಿಕೊಂಡಿರುವುದಕ್ಕೆ ಕೆಲವು ರೋಚಕ ಕಥೆಗಳು ಸಹ ಇದೆ.

ಪುರಾಣದ ಪ್ರಕಾರ ಒಮ್ಮೆ ಮೃಗು ಮಹರ್ಷಿಗಳು ಘೋರ ತಪಸ್ಸನ್ನು ಆಚರಿಸುತ್ತಿರುತ್ತಾರೆ ಈ ಸಮಯದಲ್ಲಿ ಕಾಡಿನಲ್ಲಿ ಸಿಗುವ ಬರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಿದ್ದರು ಒಮ್ಮೆ ಹುಲ್ಲನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತಮ್ಮ ಬೆರಳನ್ನು ಕತ್ತರಿಸಿಕೊಳ್ಳುತ್ತಾರೆ ಆಗ ಬೆರಳಿನಿಂದ ರಕ್ತದ ಬದಲು ಮರದ ಕಾಂಡವನ್ನು ಕತ್ತರಿಸಿದಾಗ ಬರುವ ರಸವು ಬರುತ್ತದೆ ಅದನ್ನು ನೋಡಿದ ಮಹರ್ಷಿಗಳು ಹೆಮ್ಮೆಯನ್ನು ಪಡುತ್ತಾರೆ ನನ್ನ ತಪಸ್ಸಿನ ಶಕ್ತಿ ಬಗ್ಗೆ ಅವರು ಹೆಚ್ಚು ಸಂತೋಷಗೊಳ್ಳುತ್ತಾರೆ ಇದರ ಜೊತೆಗೆ ಅಹಂಕಾರವು ಸಹ ಅವರಿಗೆ ಬರುತ್ತದೆ ಆಗ ಶಿವನು ಅಹಂಕಾರವನ್ನು ಅಳಿಸಲು ಒಬ್ಬ ಮುದುಕನ ವೇಷದಲ್ಲಿ ಬಂದು ಏಕೆ ಇಷ್ಟು ಸಂತೋಷದಲ್ಲಿ ಇದ್ದೀರಿ ಎಂದು ಕೇಳುತ್ತಾರೆ.

ಆಗ ಮಹರ್ಷಿಯಂ ನನ್ನ ತಪಸ್ಸಿನಿಂದ ನಾನು ಬೆರಳನ್ನು ಕತ್ತರಿಸಿದಾಗ ರಕ್ತದ ಬದಲು ಒಂದು ಶ್ರೇಷ್ಠ ಮರವನ್ನು ಕತ್ತರಿಸಿದಾಗ ಬರುವ ರಸವು ಬರುತ್ತಿದೆ ಎಂದು ಅಹಂಕಾರದಿಂದ ಹೇಳುತ್ತಾರೆ ಆಗ ಶಿವನು ಒಂದು ಮರವನ್ನು ಕತ್ತರಿಸಿದಾಗ ಅದು ಬಸ್ಮವಾಗುತ್ತದೆ ಅದರಲ್ಲಿ ಏನಿದೆ ಎಂದು ತನ್ನ ಬೆರಳನ್ನು ಕತ್ತರಿಸುತ್ತಾರೆ ಆಗ ರಕ್ತದ ಬದಲು ಭಸ್ಮ ಬರಲು ಪ್ರಾರಂಭವಾಗುತ್ತದೆ ಶಿವ ಎಂದು ತಿಳಿಯುತ್ತದೆ ಆಗ ತಮ್ಮ ಅಹಂಕಾರ ತೊರೆದು ಹಾಕುತ್ತಾರೆ ಅಂದಿನಿಂದ ವಿಭೂತಿ ಶಿವನ ಅಂಶವಾಗಿ ಪರಿಗಣಿಸಲ್ಪಡುತ್ತದೆ ಈ ಕಾರಣದಿಂದ ವಿಭೂತಿಯ ಒಂದು ದೈವಸ್ಥಾನವನ್ನು ಸಹ ಪಡೆದಿದೆ ಹಿಂದೂ ಧರ್ಮದಲ್ಲಿ ದುಷ್ಟ ಶಕ್ತಿಗಳನ್ನು ಓಡಿಸಲು ವಿಭೂತಿಯನ್ನು ಹೆಚ್ಚಾಗಿ ಬಳಸುತ್ತಾರೆ ಅನೇಕ ಜನರು ನಕರಾತ್ಮಕ ಶಕ್ತಿಯನ್ನು ಓಡಿಸಿ ಒಳ್ಳೆಯ ಸಕಾರಾತ್ಮಕ ಶಕ್ತಿ ಬರಲಿ ಎಂದು ತಮ್ಮ ಏಕಾಗ್ರತೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳಲು ದೇಹದ ಅನೇಕ ಭಾಗಗಳಲ್ಲಿ ವಿಭೂತಿಯನ್ನು ಬಳಿದುಕೊಳ್ಳುತ್ತಾರೆ

ಯಾವುದೇ ವಸ್ತುವಿನ ಸುಟ್ಟ ಬೂದಿಯು ವಿಭೂತಿ ಆಗುವುದಿಲ್ಲಾ ಹಾಲು ತುಪ್ಪ ಜೇನುತುಪ್ಪ ಹಸುವಿನ ಸಗಣಿ ಅನಿಷ್ಟ ಸುಟ್ಟಾಗ ಬರುವ ಬೂದಿಯನ್ನು ವಿಭೂತಿ ಎಂದು ಕರೆಯುತ್ತಾರೆ ವಿಭೂತಿಯನ್ನು ಧರಿಸುವವನಿಗೆ ಆಧ್ಯಾತ್ಮಿಕ ಶಕ್ತಿಯ ಲಭಿಸುತ್ತದೆ ಅನಾರೋಗ್ಯ ಮತ್ತು ನಕಾರಾತ್ಮಕ ಶಕ್ತಿಯಿಂದ ಇದು ರಕ್ಷಣೆ ನೀಡುತ್ತದೆ ವಿಭೂತಿಯ ಮತ್ತೊಂದು ಹೆಸರು ಎಂದರೆ ಗುಣಪಡಿಸುವ ಶಕ್ತಿ ಎಂದು ಅರ್ಥ.

ಇದನ್ನು ಆಯುರ್ವೇದ ಚೀನಿ ಮತ್ತು ಟಿಬೇಟಿಯನ್ ಔಷಧಿಗಳಲ್ಲಿ ಬಳಸುತ್ತಾರೆ ಇದನ್ನು ಪವಿತ್ರ ಮಂತ್ರಗಳನ್ನು ಹೇಳುತ್ತಾ ತಯಾರಿಸುತ್ತಾರೆ ಇದನ್ನು ಮೂರು ಬೆರಳುಗಳಿಂದ ಮೂರು ಸಾಲಿನ ರೀತಿಯಲ್ಲಿ ಹಚ್ಚಿಕೊಳ್ಳಬೇಕು ಮೊದಲನೆಯ ಸಾಲು ಅಹಂಕಾರವನ್ನು ತೊರೆದು ಹಾಕುತ್ತದೆ ಎರಡನೆಯ ಸಾಲು ಅಜ್ಞಾನವನ್ನು ತೊರೆದು ಹಾಕುತ್ತದೆ ಮೂರನೇ ಸಾಲು ಕೆಟ್ಟ ಕರ್ಮಗಳನ್ನು ತೆಗೆದುಹಾಕುತ್ತದೆ ಧನಾತ್ಮಕ ಮತ್ತು ಋಣಾತ್ಮಕಗಳನ್ನು ಸ್ವೀಕರಿಸಿಕೊಳ್ಳುವ ಉಬ್ಬಿನ ಮಧ್ಯಭಾಗ ಮತ್ತು ಅಂಗೈ ಇದು ಬಹಳ ಸೂಕ್ಷ್ಮವಾಗಿ ಇರುತ್ತದೆ ಈ ಜಾಗಗಳಿಗೆ ನಕಾರಾತ್ಮಕ ಶಕ್ತಿ ಹೆಚ್ಚಾದಾಗ ಚಡಪಡಿಕೆ ತಲೆನೋವು ಮುಂತಾದ ಸಮಸ್ಯೆಗಳು ಎದುರಾಗುತ್ತದೆ ಇಂತಹ ನಕಾರಾತ್ಮಕ ಶಕ್ತಿಯ ವಿರುದ್ಧ ವಿಭೂತಿಯು ಹೋರಾಡಿ ನಮ್ಮನ್ನು ರಕ್ಷಿಸುತ್ತದೆ.

Leave A Reply

Your email address will not be published.