ಅಶ್ವಗಂಧ ಹಿರೇಮದ್ದು!ಆಯುರ್ವೇದ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವ

0 47

ಅಶ್ವಗಂಧ ಆಯುರ್ವೇದ ಲೋಕದಲ್ಲಿ ಅಶ್ವಗಂಧಕ್ಕೆ ಒಂದು ತುಂಬಾ ದೊಡ್ಡ ಮಹತ್ವವಿದೆ ಈ ಗಿಡದ ಬೇರುಗಳನ್ನು ಹಾಗೂ ಮತ್ತು ಚೇಳುಗಳು ಕಚ್ಚಿದಾಗ ಮದ್ದಾಗಿ ಇದನ್ನು ಬಳಸುತ್ತಾರೆ ಈ ಗಿಡವ ಆಯುರ್ವೇದ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಒಂದು ಸಸ್ಯವಾಗಿದೆ ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದ ವಾಸನೆ ಬರುವುದರಿಂದ ಇದರ ಬೇರನ್ನು ಸ್ವಚ್ಛಗೊಳಿಸಿ ಅದನ್ನು ಪುಡಿ ಮಾಡಿ ಅಶ್ವತಂತಹ ಶಕ್ತಿ ಮತ್ತು ಉತ್ಸಾಹ ಬರುತ್ತದೆ ಎನ್ನುವುದರಿಂದ ಇದಕ್ಕೆ ಅಶ್ವಗಂಧ ಎಂದು ಹೆಸರು ಬಂದಿದ.

ಈ ಗಿಡವನ್ನು ಹಿರೇಮದ್ದಿನ ಗಿಡ ಎಂದು ಸಹ ಕರೆಯುತ್ತಾರೆ ಈ ಗಿಡವು ರಸ್ತೆಗಳ ಮಧ್ಯ ಬದಿಯಲ್ಲಿ ಹಳ್ಳಿಗಾಡು ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ ತಿಪ್ಪೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಇದನ್ನು ಯಾರು ಕತ್ತರಿಸದೆ ಹಾಗೆ ಬಿಟ್ಟರೆ ಪೊದೆಯ ರೀತಿಯಲ್ಲಿ ನಿರ್ಮಾಣವಾಗುತ್ತದೆ ಆಯುರ್ವೇದದಲ್ಲಿ ಈ ಸಸ್ಯದ ಬೇರು ಎಲೆ ತೊಗಟೆ ಮತ್ತು ಬೀಜಗಳನ್ನು ಬಳಸುತ್ತಾರೆ ಇದು ಆಫ್ರಿಕಾ ಮೆಡಿಟೇರಿಯನ್ ಪ್ರದೇಶ ಮತ್ತು ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ ಭಾರತದ ಗುಜರಾತ್ ರಾಜಸ್ತಾನ್ ಮಧ್ಯಪ್ರದೇಶ ಪಂಜಾಬ್ ಮಹಾರಾಷ್ಟ್ರ ಕರ್ನಾಟಕದ ಮುಂತಾದ ಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ ಸುಮಾರು ಒಂದರಿಂದ ನಾಲ್ಕು ಅಡಿ ಎತ್ತರ ಬೆಳೆಯುವ ಈ ಗಿಡದ ಎಲೆಗಳು ನೋಡಲು ಯಕ್ಕದ ಗಿಡದ ಎಲೆಗಳ ರೀತಿಯಲ್ಲಿ ಕಂಡರೂ ಸಹ ಎಕ್ಕದ ಗಿಡದ ಎಲೆಗಳಿಗಿಂತ ಸ್ವಲ್ಪ ಚಿಕ್ಕದಾಗಿ ಇರುತ್ತದೆ

ಹಳದಿ ಬಣ್ಣದ ಗೊಂಚಲಿನೊಳಗೆ ಕೆಂಪು ಬಣ್ಣದ ಹಣ್ಣುಗಳು ಇರುತ್ತದೆ ಇದು ಪುರಾತನ ಕಾಲದಿಂದ ಬಳಕೆಯಲ್ಲಿ ಇರುವ ಔಷಧಿಯಾಗಿದ್ದು ಹಿರೇಮದ್ದು ಎಂಬ ನಾಡ ನುಡಿಯೇ ಇದೆ ಇದು ನಿದ್ರೆ ಬರಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ ಇದು ರಕ್ತಶುದ್ಧಿ ಮಾಡುವುದಲ್ಲದೆ ರಕ್ತವನ್ನು ವೃದ್ಧಿ ಮಾಡಿ ದೇಹಕ್ಕೆ ಬೇಕಾದ ಶಕ್ತಿಯನ್ನು ನಿಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಇರುವ ಅಶ್ವಗಂಧ ಸಮರ್ಥ್ಯವು ಚಿತ್ತಚಂಚಲತೆ ವೃತ್ತ ಪಿಯ ದೌರ್ಬಲ್ಯಗಳನ್ನು ಹೋಗಲಾಡಿಸುತ್ತದೆ ಇದು ನಮಗೆ ಶಕ್ತಿ ಸ್ಪೂರ್ತಿ ಮತ್ತು ಯೌವ್ವನವನ್ನು ನೀಡುತ್ತದೆ ಅಶ್ವಗಂಧದ ಬೇರನ್ನು ನೇರವಾಗಿ ಉಪಯೋಗಿಸುವ ಹಾಗೆ ಇಲ್ಲ

ನೂರು ಗ್ರಾಂ ಅಶ್ವಗಂಧ ಬೇರನ್ನು ಹಾಲಿನಲ್ಲಿ ಕುದಿಸಿ ಶುದ್ದಿ ಮಾಡಿ ನಂತರ ನೆರಳಿನಲ್ಲಿ ಒಣಗಿಸಿ ಆನಂತರ ಸೇವಿಸಬೇಕು ಅಶ್ವಗಂಧದ ಬೇರು ಬಿಳಿ ಹಾಗೂ ನಸು ಗಂಧಿಯಿಂದ ಕೂಡಿರುತ್ತದೆ ಗ್ರಾಮೀಣ ಪ್ರದೇಶದ ಜನರು ಈ ಸಸ್ಯವನ್ನು ಹಿರೇಮಧ್ಯ ಗಿಡ ಎಂದು ಕರೆಯುತ್ತಾರೆ ಈ ಸಸ್ಯದ ಗಿಡಗಳಿಂದ ಎಲ್ಲಾ ರೀತಿಯ ನೋವುಗಳು ನಿವಾರಿಸಲ್ಪಡುತ್ತದೆ ಇದು ಪುರುಷತ್ವ ಮತ್ತು ಸ್ತ್ರೀಯರ ಮುಟ್ಟಿನ ಸಮಸ್ಯೆ ಗರ್ಭಧಾರಣೆ ಸಮಸ್ಯೆ ಮತ್ತು ಯುವಕರ ಸಮಸ್ಯೆ ಖನಿಜ ಫಲದ ನಿವಾರಣೆಗಾಗಿ ಗಂಡು ಮಕ್ಕಳಲ್ಲಿ ಸಂತಾನೋತ್ಪತ್ತಿಯದ ಸಾಮರ್ಥ್ಯವನ್ನು ವೃದ್ಧಿಸಲು ಹತ್ತು ಹಲವರು ಕಾಯಿಲೆಗಳಿಗೆ ಇದನ್ನು ಬಳಸಲಾಗುತ್ತದೆ

Leave A Reply

Your email address will not be published.